ಮದುವೆ ಸರಳವಾಗಿರಲಿ ಬದುಕುವ ರೀತಿ ಅದ್ದೂರಿಯಾಗಿರಲಿ..!

in ಕನ್ನಡ ಮಾಹಿತಿ 73 views

ರಾಷ್ಟ್ರಕವಿ ಕುವೆಂಪುರವರು ದಶಕಗಳ ಹಿಂದೆಯೇ ಸರಳ ವಿವಾಹದ ಮೌಲ್ಯ ಸಾರಿದ್ದರು ಅದಕ್ಕೆ ಅವರು ಕೊಟ್ಟ ಅಮೂಲ್ಯ ಹೆಸರು ಮಂತ್ರಮಾಂಗಲ್ಯ. ಕಾರಣವಿಷ್ಟೇ ಆಗಿತ್ತು. ಇರುವವರು ಅದ್ಧೂರಿಯ ಮದುವೆ ಬೀಗರೂಟ ಮಾಡಿದರೆ ಅದನ್ನ ಅನುಸರಿಸುವ ಮಂದಿ ಮನೆಯ ರಾಸುಗಳ ಮಾರಾಟ ಮಾಡಿ, ಜಮೀನು ಮಾರಿ ಸಾಲ ಮಾಡಿ ಪಕ್ಕದ ಮನೆಯವರ ನೆಂಟರ ಜಿದ್ದಿಗಾಗಿ ಗೌರವಕ್ಕಾಗಿ ಅದ್ಧೂರಿಯ ಮದುವೆ ಮಾಡುತ್ತಿದ್ದರು ಮದುವೆಯ ಮಾರನೆಯ ದಿನ ಮಾಡಿದ ಸಾಲದ ಯೋಚನೆ ಮದುವೆಯ ಸಂಭ್ರಮವನ್ನು ಮರೆ ಮಾಡುತ್ತಿತ್ತು ಇದನ್ನು ಅರಿತ ಕುವೆಂಪುರವರು ಮಂತ್ರ ಮಾಂಗಲ್ಯ ಆಚರಣೆಗೆ ಕರೆ ಕೊಟ್ಟರು ಅಲ್ಲಲ್ಲಿ ವಿಚಾರವಂತರು ಇದನ್ನು ಆಚರಣೆಗೆ ತಂದರೆ ಕೆಲವು ಮಂದಿ ಅದ್ಧೂರಿಯ ಮದುವೆಗೆ ಮಾರು ಹೋದರು.

Advertisement

 

Advertisement

Advertisement

ಕುವೆಂಪು ಅವರ ಸರಳ ವಿವಾಹ ಆದರ್ಶಕ್ಕೆ ಕೊರೋನಾ ಮಹಾಮಾರಿಯ ಅನುಮೋದನೆ.ಕೋರೋನಾ ಕಾರಣಕ್ಕೆ ನಡೆಯುತ್ತಿರುವ ಸರಳವಾದ ವಿವಾಹ ಬೀಗರೂಟಗಳು ಕೊರೋನಾ ಭೀತಿಯ ನಂತರವೂ ಮುಂದುವರೆಯಲಿ .ಆರತಕ್ಷತೆಯಲ್ಲಿ ಮಿಂಚುವ ವಧು ವರರು ಕುಟುಂಬದವರು ಮಾರನೆಯ,ದಿನ ಬಾಡಿಗೆ ಮನೆಯ,ಬದುಕು, ಸಾಲದ ಹೊರೆ,ಭವಿಷ್ಯದ ಚಿಂತನೆಯಲ್ಲಿ ತೊಡಗಿರುತ್ತಾರೆ.ಮದುವೆಗೆ ಮೀಸಲಿಟ್ಟ ಹಣದಲ್ಲಿ ಸೈಟು ಮನೆ ಜಮೀನು ಖರೀದಿಸಿ, ವಧು ವರರ ಹೆಸರಿನಲ್ಲಿ ಡೆಪಾಸಿಟ್ ಮಾಡಿ , ಹೊಸ ವಾಣಿಜ್ಯ ವ್ಯವಹಾರ ಮಾಡುವಂತೆ ಪ್ರೇರೇಪಿಸಿ.

Advertisement

 

ಒಂದು ದಿನದ ಸಂಭ್ರಮ ಬದುಕನ್ನು ಕಟ್ಟಲಾರದು. ಹೆಚ್ಚು ಅಂದರೆ ಒಂದು ಫೋಟೋ ಆಲ್ಬಮ್ ಹಾಗು ಸಿಡಿಯಲ್ಲಿ ಮಾತ್ರ ಇರಲು ಸಾಧ್ಯ..ಕುವೆಂಪು ಅವರ ಆದರ್ಶ ಮುಂದುವರೆಯಲಿ ….ಕುವೆಂಪು ಹಾಕಿದ ಮಾರ್ಗದಲ್ಲಿ ನಡೆಯೋಣ…..

ಕನ್ನಡಿಗರಾಗಿ ನಿಮಗೂ ಹೆಮ್ಮೆಯೆನಿಸಿದರೆ ಲೈಕ್ ಮಾಡಿ, ಶೇರ್ ಮಾಡಿ..ಕಮೆಂಟ್ ಮಾಡಿ..

ಸತೀಶ್ ಗೌಡ ✍
9986403488

Advertisement
Share this on...