ದೀರ್ಘಕಾಲದವರೆಗೆ ಮಾಸ್ಕ್ ಧರಿಸುವವವರಿಗೆ ಇಲ್ಲಿದೆ ಸರಳವಾದ ಪರಿಹಾರೋಪಾಯಗಳು ….

in ಕನ್ನಡ ಆರೋಗ್ಯ 62 views

ಮೊದಲು ಚೀನಾದಲ್ಲಿ ಹರಡಿದ ಕೊರೊನಾ ವೈರಸ್ ಈಗ ಪ್ರಪಂಚದಾದ್ಯಂತ ಕಂಡುಬರುತ್ತಿದೆ. ಕೊರೊನಾ ವೈರಸ್’ನಿಂದ 187 ದೇಶಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ವಿಶ್ವಾದ್ಯಂತ 35.84 ಲಕ್ಷ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 2.51 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ರೋಗಿಗಳ ಸಂಖ್ಯೆ 46000 ದಾಟಿದೆ. ಸಾವಿನ ಸಂಖ್ಯೆ 1568 ಕ್ಕೆ ತಲುಪಿದೆ. ವಿಶ್ವದಾದ್ಯಂತ ವಿಜ್ಞಾನಿಗಳು ಕೋವಿಡ್ -19 ಗೆ ಪರಿಹಾರವನ್ನು ಕಂಡುಹಿಡಿಯುತ್ತಿದ್ದಾರೆ. ಆದರೆ ಈ ರೋಗಕ್ಕೆ ಚಿಕಿತ್ಸೆ ಇನ್ನೂ ಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್’ಗಳನ್ನು ಧರಿಸಬೇಕೆಂದು ತಜ್ಞರು ಸೂಚಿಸಿದ್ದಾರೆ.
ಅಂದಹಾಗೆ ಸೋಂಕಿನಿಂದ ತಪ್ಪಿಸಿಕೊಳ್ಳಲು ಜನರು ದೀರ್ಘಕಾಲದವರೆಗೆ ಮಾಸ್ಕ್’ಗಳನ್ನು ಧರಿಸುತ್ತಾರೆ. ಆದರೆ ಮಾಸ್ಕ್’ಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಅನೇಕ ರೀತಿಯ ಚರ್ಮದ ಸಮಸ್ಯೆಗಳು ಸಹ ಕಂಡುಬರುತ್ತಿವೆ. ಮುಖದ ಮೇಲೆ ಸುಟ್ಟ ರೀತಿಯ ಕಲೆ, ಗೀರುಗಳು ಮತ್ತು ಇತರೆ ಕಲೆಗಳು ಸಂಭವಿಸುತ್ತಿವೆ. ದೀರ್ಘಕಾಲದವರೆಗೆ ಮಾಸ್ಕ್’ಗಳನ್ನು ಧರಿಸುವುದು ಸಹ ಸಾಕಷ್ಟು ಹಾನಿಕಾರಕ. ಹಾಗಾದರೆ ಈ ಸಮಸ್ಯೆಗಳನ್ನು ತೊಡೆದುಹಾಕುವುದು ಹೇಗೆಂದು ನೋಡೋಣ ಬನ್ನಿ…

Advertisement

 

Advertisement

Advertisement

ಕೊರೊನಾ ವೈರಸ್’ನಿಂದ ತಪ್ಪಿಸಿಕೊಳ್ಳುವುದಿಕ್ಕೆ ಮಾಸ್ಕ್ ಧರಿಸುವುದು ಬಹಳ ಮುಖ್ಯ. ಆದರೆ ಮಾಸ್ಕ್ ಅನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಚರ್ಮದ ಮೇಲೆ ತುರಿಕೆ, ದದ್ದು ಮತ್ತು ಸ್ಟ್ರೆಚ್ ಮಾಸ್ಕ್ ಮುಂತಾದ ಅನೇಕ ಚರ್ಮದ ತೊಂದರೆಗಳು ಉಂಟಾಗುತ್ತವೆ. ಈ ಎಲ್ಲಾ ತೊಂದರೆಗಳನ್ನು ನಿವಾರಿಸಲು ಸಾಧ್ಯವಾದಷ್ಟು ನೀರು ಕುಡಿಯಿರಿ. ನೀರು ಚರ್ಮವನ್ನು ಹೈಡ್ರೀಕರಿಸುತ್ತದೆ. ನೀವು ನೀರನ್ನು ಬಿಸಿ ಮಾಡಿ, ನಂತರ ಇದಕ್ಕೆ ತುಳಸಿ ಎಲೆಗಳನ್ನು ಸೇರಿಸಿ ನೀರು ತಣ್ಣಗಾದ ನಂತರ ಕುಡಿಯಿರಿ, ಹೀಗೆ ಮಾಡುವುದರಿಂದ ಚರ್ಮವು ಹೈಡ್ರೇಟ್ ಆಗುವುದಲ್ಲದೆ ನಿಮ್ಮ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ನೀರನ್ನು ಹೆಚ್ಚು ಸೇವಿಸಿದಷ್ಟು ಮುಖದ ಮೇಲಿನ ಕಿರಿಕಿರಿ ಮತ್ತು ದದ್ದುಗಳು ದೂರವಾಗುತ್ತವೆ.

Advertisement

 

ಮಾಸ್ಕ್ ತೆಗೆದ ನಂತರ ಹ್ಯಾಂಡ್ ವಾಶ್ ಅಥವಾ ಸ್ಯಾನಿಟೈಜರ್’ನಲ್ಲಿ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ, ನಂತರ ಆಂಟಿ ಬ್ಯಾಕ್ಟೀರಿಯಾ ಫೇಸ್ ವಾಶ್ನಿಂದ ಮುಖವನ್ನು ತೊಳೆಯಿರಿ, ನಂತರ ಮುಖದ ಮೇಲೆ ವ್ಯಾಸಲೀನ್ ಹಚ್ಚಿ. ಮಾಸ್ಕ್ ಹಾಕಿದಾಗ ಸಾಕಷ್ಟು ಬೆವರುವವರು ಗಮನಿಸಬೇಕಾದ ಒಂದು ವಿಷಯವೆಂದರೆ ಮಾಸ್ಕ್ ಹಾಕುವ ಮೊದಲು, ನಿಮ್ಮ ತ್ವಚೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ಎಣ್ಣೆ ರಹಿತ ಕ್ರೀಮ್ ಬಳಸಿ. ತೈಲ ಮುಕ್ತ ಕ್ರೀಮ್ ಬಳಕೆಯು ಬೆವರುವುದನ್ನು ಕಡಿಮೆ ಮಾಡುತ್ತದೆ. ಬೆವರುವ ಚರ್ಮದ ಮೇಲೆ ಮಾಸ್ಕ್ ಧರಿಸುವುದರಿಂದ ಹೆಚ್ಚು ಚರ್ಮದ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಾಸ್ಕ್ ಧರಿಸುವ ಮೊದಲು, ಎಣ್ಣೆ ರಹಿತ ಕ್ರೀಮ್ ಬಳಸಿ. ನೀವು ಅಪಾಯಕಾರಿ ಪ್ರದೇಶದಲ್ಲಿ ಹೊರಗಿದ್ದರೆ, ಫೇಸ್ ಮಾಸ್ಕ್ ಅನ್ನು ತೆಗೆಯಲೇಬೇಡಿ ಮತ್ತು ಆಗಾಗ್ಗೆ ಸ್ಯಾನಿಟೈಜರ್ ಬಳಸಿ.

Advertisement
Share this on...