ನಿಮಗೆ ಗೊತ್ತಾ? ಈ ಮಾಸ್ಕ್ ನಿಮ್ಮ ಭಾವನೆಗಳನ್ನು ತಿಳಿಸುತ್ತಂತೆ!

in Uncategorized 90 views

ಕೊರೊನಾ ಮಹಾಮಾರಿ ಇಡೀ ಜಗತ್ತಿಗೆ ವ್ಯಾಪಿಸಿ ಜನರಿಗೆ ನಾನಾ ರೀತಿಯಲ್ಲಿ ಹಾನಿಯನ್ನು ಉಂಟುಮಾಡುತ್ತಿದೆ. ಈ ಅಪಾಯಕಾರಿ ಸೋಂಕಿನಿಂದ ತಪ್ಪಿಸಿಕೊಳ್ಳಲು ನೀವು ಮಾಸ್ಕ್ ಧರಿಸುವುದು ಬಹಳ ಮುಖ್ಯ. ಆಗಾಗ್ಗೆ ಕೈ ತೊಳೆಯಬೇಕು ಜೊತೆಗೆ ಸಾಮಾಜಿಕ ಅಂತರವನ್ನು ಪಾಲಿಸಬೇಕು ಎಂದು ತಜ್ಞರು ಹೇಳುತ್ತಲೇ ಬಂದಿದ್ದಾರೆ. ವರದಿಯ ಪ್ರಕಾರ, ವಿಶ್ವದ 8 ದಶಲಕ್ಷಕ್ಕೂ ಹೆಚ್ಚು ಜನರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಅಂಗಡಿಗಳು, ಮೆಡಿಕಲ್ ಶಾಪ್’ಗಳು ಬಣ್ಣ ಬಣ್ಣದ ತರಹೇವಾರಿ ಮಾಸ್ಕ್’ಗಳಿಂದ ತುಂಬಿ ಹೋಗಿವೆ. ಇತ್ತೀಚೆಗೆ ಭಾರತದಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿರುವ ಪ್ರಿಂಟೆಡ್ ಮಾಸ್ಕ್’ಗಳನ್ನು ಮಾರಾಟ ಮಾಡುತ್ತಿರುವ ವಿಚಾರ ನಿಮಗೆ ತಿಳಿದಿರಬೇಕು. ಹಾಗೆಯೇ ಕೆಲವು ಜನರು ಮಾಸ್ಕ್’ಗಳ ಮೇಲೆ ಬಾಯಿಯ ಚಿತ್ರವಿರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಬಹುತೇಕ ಹೆಣ್ಣುಮಕ್ಕಳು ಸರಳವಾಗಿ, ಕಡಿಮೆ ದರದಲ್ಲಿ, ಲಭ್ಯವಿರುವ ಬಟ್ಟೆಗಳಲ್ಲೇ ಬಣ್ಣ ಬಣ್ಣದ ಮಾಸ್ಕ್’ಗಳನ್ನು ತಯಾರಿಸುತ್ತಿರುವುದನ್ನು ನೀವು ಕಾಣಬಹುದು. ಒಟ್ಟಾರೆಯಾಗಿ ಸೋಂಕಿನ ವಿರುದ್ಧ ಹೋರಾಡಲು ಈ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

Advertisement

Advertisement

ಇದೀಗ ಕೆಲವರು ವಿಶಿಷ್ಟವಾದ ಮಾಸ್ಕ್’ಗಳನ್ನು ತಯಾರಿಸಲು ಶುರುವಿಟ್ಟುಕೊಂಡಿದ್ದಾರೆ. ಹೌದು, ಸದ್ಯ ಕಂಪ್ಯೂಟರ್ ಪ್ರೋಗ್ರಾಮರ್ ಇರುವ ಮಾಸ್ಕ್ ವಿನ್ಯಾಸವನ್ನು ಮಾಡಲಾಗಿದೆ. ಅದನ್ನು ಧರಿಸಿದ ನಂತರ, ಜನರ ಕಣ್ಣಿಗೆ ನೀವು ನಗುತ್ತಿರುವಂತೆ ಭಾಸವಾಗುತ್ತದೆ. ಅಂದಹಾಗೆ ಈ ಮಾಸ್ಕ್ ಅನ್ನು ವಿನ್ಯಾಸಗೊಳಿಸಿದವರ ಹೆಸರು ಟೇಲರ್ ಗ್ಲೇಲ್.  ಟೇಲರ್ ಗ್ಲೇಲ್ ಎಂಬುವವರು ಈ ಮಾಸ್ಕ್ ಬಗ್ಗೆ ವಿಡಿಯೋವನ್ನು ಮೇ 26 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದುವರೆಗೆ ಈ ವಿಡಿಯೋವನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋಗೆ ಸುಮಾರು 55 ಸಾವಿರ ಲೈಕ್ಗಳು ಬಂದಿವೆ.

Advertisement


ಈ ಮಾಸ್ಕ್’ನ ವಿಶೇಷವೇನೆಂದರೆ ನೀವು ಇದನ್ನು ಧರಿಸಿದಾಗ ಜನರು ನಿಮ್ಮ ಭಾವನೆಗಳ ಬಗ್ಗೆ ತಿಳಿದುಕೊಳ್ಳಬಹುದು. ವರದಿಯ ಪ್ರಕಾರ, ಈ ಮಾಸ್ಕ್ ನಿರ್ಮಾಣಕ್ಕೆ ಸುಮಾರು 50 ಡಾಲರ್ (ಸುಮಾರು 4 ಸಾವಿರ ರೂಪಾಯಿ) ಖರ್ಚಾಗಿದೆ. ಈ ಮಾಸ್ಕ್ ಹಲವಾರು ಎಲ್ಇಡಿ ದೀಪಗಳನ್ನು ಒಳಗೊಂಡಿದ್ದು, ಇದನ್ನು ಧರಿಸಿದವರು ಮುಗುಳ್ನಕ್ಕ ಹಾಗೆ ತೋರುತ್ತದೆ.

Advertisement
Share this on...