ತಂದೆ ಸ್ಥಾನದಲ್ಲಿ ನಿಂತು ಮಯೂರಿಗೆ ಕನ್ಯಾದಾನ ಮಾಡಿದ್ದು ಯಾರು ಗೊತ್ತಾ?

in ಮನರಂಜನೆ/ಸಿನಿಮಾ 23 views

ಕೃಷ್ಣಲೀಲಾ ಖ್ಯಾತಿಯ ಅಶ್ವಿನಿ ನಕ್ಷತ್ರ ಧಾರವಾಹಿಯ ಮುದ್ದು ಬೊಂಬೆ ನಟಿ ಮಯೂರಿ ಅವರು ತಮ್ಮ ಜೀವನದ ಎರಡನೇ ಭಾಗಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಸ್ನೇಹಿತನ ಜೊತೆ ವಿವಾಹವಾಗಿದ್ದಾರೆ. ಬೆಂಗಳೂರು ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿವಾಹ ಜರಗಿದ್ದು, ಅರುಣ್ ಎಂಬುವವರ ಜೊತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಸುಮಾರು ೧೦ ವರುಷದಿಂದ ಮಯೂರಿ ಹಾಗೂ ಅರುಣ್ ಪ್ರೀತಿಸುತ್ತಿದ್ದು, ಕುಟುಂಬಸ್ಥರ ಸಮುಖದಲ್ಲಿ ವಿವಾಹವಾಗಿದ್ದಾರೆ. ಮಯೂರಿ ಅವರು ಮದುವೆಯಾಗಿರುವ ಅರುಣ್ ಐಟಿ ಉದ್ಯೋಗಿ ಆಗಿದ್ದು, ಅಮೆರಿಕದಲ್ಲಿ ಸೆಟಲ್ ಆಗಿದ್ದರು. ಸದ್ಯ ದೇಶಕ್ಕೆ ಹಿಂತಿರುಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಗೆಳೆಯರಾಗಿದ್ದ ಅರುಣ್ ಮತ್ತು ಮಯೂರಿ ಸುಮಾರು 10 ವರುಷದಿಂದ ಪ್ರೇಮ ಪಕ್ಷಿಯಾಗಿ ತೇಲಾಡುತ್ತಿದ್ದರು. ಇದೀಗ ತಮ್ಮ ಪ್ರೇಮ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದಾರೆ.

Advertisement

 

Advertisement

Advertisement

ಇನ್ನೂ ಈ ವಿವಾಹದಲ್ಲಿ ಅಪರೂಪದ ಸನ್ನಿವೇಶವೊಂದು ಎಲ್ಲರ ಗಮನವನ್ನು ಸೆಳೆದಿತ್ತು. ಅದೇನೆಂದರೆ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಮಯೂರಿಗೆ ಪತಿಯಾಗಿ ಸೂಪರ್ ಸ್ಟಾರ್ ಜೆಕೆ ಆಗಿ ಅಭಿನಯಿಸಿದ್ದ ಜಯರಾಮ್ ಕಾರ್ತಿಕ್ ಅವರ ತಂದೆ ಮಯೂರಿ ಅವರಿಗೆ ಕನ್ಯಾದಾನವನ್ನು ಮಾಡಿದ್ದಾರೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ಮಯೂರಿ ಅವರ ತಂದೆ ನಿಧನರಾಗಿ ವರ್ಷಗಳು ಕಳದಿದೆ. ಅವರ ವಿವಾಹ ಲಾಕ್ ಡೌನ್ ವೇಳೆ ನಡೆದ ಕಾರಣ, ಸಂಬಂಧಿಕರೆಲ್ಲರನ್ನು ಕರೆಯಲು ಸಾಧ್ಯವಾಗಲಿಲ್ಲ. ಅವರ ಕುಟುಂಬಸ್ಥರೆಲ್ಲಾ ಹುಬ್ಬಳ್ಳಿಯಲ್ಲಿರುವ ಕಾರಣ ಒಬ್ಬರನ್ನು ಕರೆದು ಮತ್ತೊಬ್ಬರನ್ನು ಕರೆಯದೇ ಹೋದರೆ ಸುಮ್ಮನೆ ನಿಷ್ಟುರವಾಗಬಹುದೆಂದು ನಿರ್ಧರಿಸಿ, ಮತ್ತೊಂದು ದಿನ ಅವರಿಗೆಲ್ಲ ಆತಿಥ್ಯ ನೀಡಲು ನಿರ್ಧರಿಸಿ ವಿವಾಹವಾಗಿದ್ದಾರೆ. ಇನ್ನು ಮದುವೆಯಲ್ಲಿ ಕನ್ಯಾದಾನ ಮಾಡಲು ಅವರ ಅಕ್ಕ ಭಾವನಿಗೆ ಕೆಲವು ಕಾರಣಗಳಿಂದ ಕನ್ಯಾದಾನ ಮಾಡುವುದು ಸಾಧ್ಯವಿರಲಿಲ್ಲ.

Advertisement

 

ಆದ ಕಾರಣ ಮಯೂರಿ ಅವರು ತಮ್ಮ ಸ್ನೇಹಿತ ಜೆಕೆ ಅವರಿಗೆ ಫೋನ್ ಮಾಡಿ ಈ ವಿಚಾರ ಹೇಳಿ ನೊಂದುಕೊಂಡಾಗ ಜೆಕೆ ಕೂಡಲೇ ಅವರ ತಾಯಿಗೆ ಫೋನ್ ಕೊಟ್ಟರಂತೆ. ಆಗ ಆಕೆ ನಾವೆಲ್ಲಾ ಇರುವಾಗ ನೊಂದಕೊಳ್ಳೋ ಅವಶ್ಯಕತೆ ಇಲ್ಲ ಎಂದು ಹೇಳಿ ರಾತ್ರೋರಾತ್ರಿ ಒಂದು ಗಂಟೆಗೆ ವಿವಾಹದ ಜಾಗಕ್ಕೆ ಹಾಜರಾಗಿ ಕನ್ಯಾದಾನ ಮುಂತಾದ ಎಲ್ಲಾ ಶಾಸ್ತಗಳಲ್ಲಿ ಭಾಗವಾಹಿಸಿ, ಬೆಳಿಗ್ಗೆ ಆರು ಗಂಟೆಯವರೆಗೆ ಮದುವೆ ಕಾರ್ಯಗಳಲ್ಲಿ ಭಾಗಿಯಾಗಿ ಎಲ್ಲಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಇನ್ನು ಮಯೂರಿ ಅವರು ಕೂಡಾ ಜೆಕೆ ಅವರ ತಂದೆ ನನಗೆ ತಂದೆಯ ಸಮಾನ ಎಂದು ಮಾಧ್ಯಮದಲ್ಲಿ ತಿಳಿಸಿದ್ದಾರೆ.ಅವರು ಕೂಡಾ ಬಹುಶಃ ಮಯೂರಿ ಯಾವುದೋ ಜನ್ಮದಲ್ಲಿ ತಮ್ಮ ಮಗಳಾಗಿದ್ದಿರಬೇಕು. ಅದಕ್ಕೆ ಈ ಜನ್ಮದಲ್ಲಿ ಕನ್ಯಾದಾನದಂತಹ ಮಹಾದಾನ ಮಾಡುವ ಅವಕಾಶ ತಮಗೆ ಸಿಕ್ಕಿತೆಂದು ಸಂತೋಷ ಪಟ್ಟರಂತೆ.

Advertisement
Share this on...