ರಾಹು ಕೇತುವಿನ ಬದಲಾವಣೆ : ಈ ರಾಶಿಗೆ ಕೊಡುವಷ್ಟು ಬಲ, ಯಾವ ರಾಶಿಗೂ ಇಲ್ಲ

in ಜ್ಯೋತಿಷ್ಯ 1,184 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಷಷ್ಠಿ  ತಿಥಿ, ಮೃಗಶಿರಾ  ನಕ್ಷತ್ರ,  ವಾರಿಯಾನ್ ಯೋಗ , ವನಿಜ  ಕರಣ, ಅಕ್ಟೋಬರ್ 08, ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯಾಹ್ನ 1 ಗಂಟೆ 13 ನಿಮಿಷದಿಂದ 2  ಗಂಟೆ 58  ನಿಮಿಷದವರೆಗೂ ಇದೆ.

Advertisement

ಈ ಬಾರಿ ಬಂದಿರುವ ರಾಹು ಕೇತುವಿನ ಬದಲಾವಣೆಯು ಮೀನ ರಾಶಿಗೆ ಕೊಡುವಷ್ಟು ಬಲ ಇನ್ನು ಯಾವ ರಾಶಿ ಗೂ  ಕೂಡ ಇಲ್ಲ ಅದ್ಭುತವಾದುದು. ದಿಢೀರ್ ಬದಲಾವಣೆಯಾಗುತ್ತದೆ ಹೆಸರು ದುಡ್ಡು ಕಾಸು ಅಧಿಕಾರ ಎಲ್ಲವು  ದೊರೆಯುತ್ತದೆ. ರಾಹು ಮೀನ ರಾಶಿಯಲ್ಲಿ  ಮೂರನೇ ಮನೆಯಲ್ಲಿದ್ದಾನೆ. ರಾಹು ಮೂರು,  ಆರು,  ಹನ್ನೊಂದನೇ, ಮನೆಯಲ್ಲಿದ್ದರೆ ವಿಶೇಷ ಬಲವನ್ನು ಕೊಡುತ್ತಾನೆ.  ಅಂತಹ ರಾಹು ಮೂರನೆ ಮನೆಯಲ್ಲಿ , ಕೇತು ಮತ್ತು ನೇ ಮನೆಯಲ್ಲಿ ಉಚ್ಚನಾಗಿದ್ದಾನೆ. ಶುಕ್ರ ಪಂಚಮದಲ್ಲಿದ್ದಾನೆ,  ಕುಜ ಯೋಗ ಕಾರಕ ಭಾಗ್ಯಾಧಿಪತಿ ಉಗ್ರನಾಗಿದ್ದು ಧನಸ್ಥಾನದಲ್ಲಿ ಅವನ ಮನೆಯಲ್ಲೇ ಇದ್ದಾನೆ. ಗುರು ತನ್ನದೇ ಆದ ಹತ್ತನೇ  ಮನೆಯಲ್ಲಿ ಹಂಸ ಕಾರಕ ಯೋಗದಲ್ಲಿದ್ದಾನೆ. ಶನಿ ಕೂಡ ತನ್ನ ಮನೆಯಲ್ಲೇ ಇದ್ದಾನೆ, ಸೂರ್ಯ  ಷಷ್ಠಾಧಿಪತಿ ಸಪ್ತಮದಲ್ಲಿ ಬಲವಾಗಿದ್ದಾನೆ.

Advertisement

Advertisement

ಲಾಭ ಸ್ಥಾನದಲ್ಲಿ ಶನಿ, ಕೇಂದ್ರ  ಸ್ಥಾನದಲ್ಲಿ ಗುರು ಸೂರ್ಯ ಇದ್ದಾರೆ. ಭೂಮಿ ಮನೆ ಆಳು ಕಾಳು ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರುವಂತಹ ಪೂರ್ಣ ಕುಂಭ ಸ್ವಾಗತ ನಿಮಗೆ.  ಭಾಗ್ಯ ಸ್ಥಾನದಲ್ಲಿ ಚಂದ್ರ ಕೇತು ಇರುವುದರಿಂದ ಸ್ವಲ್ಪ ಕಟಿಪಿಟಿ ಎನ್ನುತ್ತದೆ ತಂದೆ ತಾಯಿಗಳ ಆರೋಗ್ಯವನ್ನು ನೋಡಿಕೊಳ್ಳಿ. ಪೂರ್ವ ಪುಣ್ಯ ಅಧಿಪತಿ ಸ್ಥಾನದಲ್ಲಿ ಭಾಗ್ಯಾಧಿಪತಿ ಇರುವುದರಿಂದ ತಂದೆ ತಾಯಿಗಳ ಜೊತೆ ಮರಳಿ ಗೂಡು ಕಟ್ಟುವ ಯೋಗವಿದೆ. ನಿಮಗೆ ಇಪ್ಪತ್ತರಿಂದ ಐವತ್ತು ರಷ್ಟು ಮಾತ್ರ ಕುಟುಂಬ ಸುಖವಿರುತ್ತದೆ. ನಿಮ್ಮದು ಮೋಕ್ಷ ರಾಶಿ ಮತ್ತು ಮೋಕ್ಷ ಲಗ್ನ. ತಂದೆ ತಾಯಿ ಕುಟುಂಬದಲ್ಲಿ ಒಂದು ನೋವು ಇದ್ದೇ ಇರುತ್ತದೆ. ವಿಷಯವೆಲ್ಲಾ ಕಳೆದು ಈಗ ಅಮೃತದಂತ ಒಳ್ಳೆಯ ಕಾಲ ಆದರೆ ತಾಯಿಯ ವಿಚಾರದಲ್ಲಿ ಕಣ್ಣೀರು ಆಗುವಂತಹ ಸಂಭವ ಕೂಡ ಇದೆ. ಮನೆಯಲ್ಲಿ ಒಂದು ಸ್ವಸ್ತಿಕ ಯಂತ್ರವನ್ನು ಹಾಕಿ. ರಾಹುವಿನ ಆಗಮನದಿಂದ ಮೀನ ರಾಶಿಯವರಿಗೆ ಅಗುವ ಫಲಾನುಫಲಗಳ  ಬಗ್ಗೆ ನಿಮ್ಮ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಿನ ವಿಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ :  ಇಂದು ದುಡುಕಿ ಮಾತನಾಡುವುದು ಬೇಡ, ಬೆಂಕಿ,  ಚೂಪಾದ ವಸ್ತುಗಳು , ಟೂ ವಿಲ್ಲರ್ಸ್ ,  ಕರೆಂಟ್ ಇವುಗಳ ವಿಚಾರದಲ್ಲಿ ಸ್ವಲ್ಪ ಜಾಗ್ರತೆ. ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಮಾಡಿಕೊಳ್ಳಿ.

ವೃಷಭ ರಾಶಿ : ಮಹಾ ಬಲವಿದೆ, ಬಲ ವಿದ್ದಾಗಲೇ  ಅಡ್ಡ ದಾರಿಯನ್ನು ತುಳಿಯುವ ಸಂಭವವಿರುತ್ತದೆ ಎಚ್ಚರಿಕೆ.

ಮಿಥುನ ರಾಶಿ : ಭೂಮಿ ಮನೆ ಪಡೆಯುವ ಅವಕಾಶವಿದೆ ದೂರ ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆ.

ಕರ್ಕಾಟಕ ರಾಶಿ : ಭೂಮಿಯ ವಿಚಾರದಲ್ಲಿ ಪ್ರಗತಿ ಮಕ್ಕಳ ವಿಚಾರದಲ್ಲಿ ಪ್ರಗತಿ.

ಸಿಂಹ ರಾಶಿ : ಕಷ್ಟಪಟ್ಟು ಬಲವನ್ನು ಪಡೆದುಕೊಳ್ಳುತ್ತೀರಿ ಅದಕ್ಕೆ ತಕ್ಕಂತೆ ಪ್ರತಿಫಲ ಕೂಡ ಸಿಗುತ್ತದೆ

ಕನ್ಯಾ ರಾಶಿ : ಇಂತಹ ಕಷ್ಟವಿದ್ದರೂ ಅದನ್ನು ಸುಲಭವಾಗಿಸಿ ಕೊಳ್ಳುವ ಬಲವಿದೆ. ಆದರೆ ಯಾರನ್ನಾದರೂ ಗುದ್ದಲು ಹೋಗಬೇಡಿ.

ತುಲಾ ರಾಶಿ : ಸರ್ಪ್ರೈಸ್ ಆಕ್ಟಿವಿಟೀಸ್ ಗಳು ನಡೆಯುತ್ತವೆ ಶತ್ರುಗಳು ನಿಮ್ಮ ಮುಂದೆ ಮಣ್ಣು ಮುಕ್ಕುತ್ತಾರೆ ಸಂಗಾತಿಯ ಜೊತೆ ಬಾಂಧವ್ಯ ಉತ್ತಮವಾಗುತ್ತದೆ.

ವೃಶ್ಚಿಕ ರಾಶಿ : ಇನ್ನೊಬ್ಬರಿಗೆ ನೋವು ಕೊಟ್ಟು ಗೆಲ್ಲಲು ಹೋಗಬೇಡಿ, ಕ್ಷಮಿಸಿಬಿಡಿ.

ಧನಸ್ಸು ರಾಶಿ : ಪೊಲೀಸ್ ಇಲಾಖೆ ರಕ್ಷಣಾ ಇಲಾಖೆಯಲ್ಲಿ ಇದ್ದರೆ ಅದ್ಭುತವಾದಂತಹ ದಿನ.

ಮಕರ ರಾಶಿ : ಗರ್ಭಿಣಿ ಸ್ತ್ರೀಯರಿದ್ದರೆ , ಆಗ ತಾನೆ ಹುಟ್ಟಿದ ಮಗು,  ಪುಟ್ಟ ಮಕ್ಕಳು ಇದ್ದರೆ ಸ್ವಲ್ಪ ಎಚ್ಚರಿಕೆ.

ಕುಂಭ ರಾಶಿ : ಸ್ವಲ್ಪ ಗಡಿಬಿಡಿ ಎನಿಸಿದರೂ ಅಂದುಕೊಂಡ ಕೆಲಸಗಳೆಲ್ಲವನ್ನು ಸಾಧಿಸಿ ಕೊಳ್ಳುವಂತಹ ಅದ್ಭುತವಾದ ದಿನ.

ಮೀನ ರಾಶಿ : ಚೆನ್ನಾಗಿದೆ ಎಂತಹ  ಬಾರವನ್ನಾದರೂ ಇಂದು ಹೊತ್ತುಕೊಂಡು ಓಡುವ ಶಕ್ತಿ ಮತ್ತು ಬೇರೆಯವರನ್ನು  ದಡ ಸೇರಿಸುವ ಶಕ್ತಿಯನ್ನು  ಭಗವಂತ ನಿಮಗೆ ಕೊಟ್ಟಿದ್ದಾನೆ, ಅದನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ.

All Rights reserved Namma  Kannada Entertainment.

Advertisement
Share this on...