ಈ ನಾಯಕಿಗೆ ನಿನ್ನ ರೇಟ್ ಎಷ್ಟು ಎಂದು ಕೇಳುತ್ತಿದ್ದಾರೆ ಯಾಕೆ ಗೊತ್ತಾ?

in ಮನರಂಜನೆ 41 views

2008 ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ಅರ್ಜುನ್ ತಮಗೆಲ್ಲರಿಗೂ ನೆನಪಿದೆ ಅಲ್ಲವೆ? ಚಿತ್ರದ ಹಾಡುಗಳಂತು ಆ ಸಮಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಚಿತ್ರದಲ್ಲಿ ನಾಯಕಿ ಮೀರಾ ಚೋಪ್ರಾ ಅವರ ಗ್ಲಾಮರಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಹೇ ಕನಕ ಎಂದು ಡೋಲು ಬಡೆಯುತ್ತ, ಮುತ್ತು ಕೊಟ್ಟು ಬಲ್ಲೆ ಬಲ್ಲೆ ಎಂದು ಅಭಿಮಾನಿಗಳ ಹೃದಯಕ್ಕೆ ಕಚಗುಳಿ ಇಟ್ಟಿದ್ದರು. ಕನ್ನಡ ಸೇರಿದಂತೆ ಹಿಂದಿ ತೆಲುಗು ತಮಿಳು ಚಿತ್ರರಂಗಳಲ್ಲಿ ೧೫ ಕ್ಕು ಹೆಚ್ಚು ಸಿನಿಮಾಗಳಲ್ಲಿ ಮಿಂಚಿರುವ ಈ ಬೆಡಗಿ ಇದೀಗ ನೆಟ್ಟಿಗರ ಕಣ್ಣಿಗೆ ತುತ್ತಾಗಿದ್ದಾರೆ. ನಟಿ ಮೀರಾ ಚೊಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗಷ್ಟೆ ಈ ನಟಿ ಅಭಿಮಾನಿಗಳ ಜೊತೆ ಚರ್ಚೆಗೆ ಇಳಿದಿದ್ದು, ಟ್ವಿಟ್ಟರ್ ನಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರಿಸುವೆ ಎಂದು ಪೋಸ್ಟ್ ಮಾಡಿದ್ದರು. ಜೊತೆಗೆ ಆಸ್ಕ್ ಮೀರಾ ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಸಿದ್ದರು.ಇದಕ್ಕೆ ಅಭಿಮಾನಿಗ ಪ್ರತಿಕ್ರಿಯಿಸಿದ್ದು ಅವರ ಇಷ್ಟ ಕಷ್ಟ ವಿಚಾರಿಸುವುದರ ಜೊತೆಗೆ ಲಾಕ್​ಡೌನ್ ಲೈಫ್ ಹೇಗಿದೆ? ಮುಂದಿನ ಸಿನಿಮಾ ಯಾವುದು ಅಂತ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಎಲ್ಲಾ ಪ್ರಶ್ನೆಗಳಿಗೂ ಮೀರಾ ಉತ್ತರಿಸುತ್ತಿದ್ದು, ಈ ನಡುವೆ ಅಭಿಮಾನಿಯೊಬ್ಬ ತೆಲುಗಿನ ಖ್ಯಾತ ನಟ ಜೂ. ಎನ್​ಟಿಆರ್ ಅವರ ಬಗ್ಗೆ ಪ್ರಶ್ನಿಸಿದ್ದು, ಪ್ರಿನ್ಸ್ ಮಹೇಶ್ ಬಾಬು ಇಷ್ಟಾನೋ ಅಥವಾ ಜೂ. ಎನ್​ಟಿಆರ್ ಇಷ್ಟಾನೋ ಎಂದು ಕೇಳಿದ್ದಾರೆ.

Advertisement

 

Advertisement

Advertisement

ಇದ್ದಕ್ಕೆ ಉತ್ತರಿಸಿರುವ ನಟಿ ಮೀರಾ ‘ನನಗೆ ಜೂ, ಎನ್​ಟಿಆರ್ ಅಂದರೆ ಯಾರು ಎಂದು ಗೊತ್ತಿಲ್ಲ. ಅವರ ಸಿನಿಮಾನೂ ನೋಡಿಲ್ಲ. ಆದರೆ ಪ್ರಿನ್ಸ್ ಅಂದರೆ ನನಗೆ ತುಂಬಾ ಇಷ್ಟ’ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮೀರಾ ಈ ರೀತಿ ಪ್ರತಿಕ್ರಿಯಿಸುತ್ತಿದ್ದಂತೆ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎನ್ ಟಿ ಆರ್ ಅಭಿಮಾನಿಗಳಿಂದ ಗುಡುಗು, ಸಿಡಿಲು, ಭೂಕಂಪ, ಬಿರುಗಾಳಿ ಎಲ್ಲವೂ ಕೂಡ ಒಮ್ಮೆಲೇ ಎದ್ದುಬಿಟ್ಟಿದೆ. ಜೂನಿಯರ್ ಅಭಿಮಾನಿಗಳು ಮೀರಾ ಅವರ ಮೇಲೆ ಮುಗಿಬಿದ್ದಿದ್ದು, ಆಕೆಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ನಿನ್ನ ರೇಟ್ ಎಷ್ಟು? ಅಂತೆಲ್ಲಾ ಟ್ವೀಟ್ ಮಾಡಿ,  ಬೆದರಿಕೆ ಹಾಕಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಎತ್ತೆಚ್ಚುಕೊಂಡ ನಟಿ ಮೀರಾ ಖುದ್ದು ಜೂ.ಎನ್ ಅವರಿಗೆ ಟ್ಯಾಗ್ ಮಾಡಿದ್ದು, ‘ ನಾನೇನು ತಪ್ಪು ಮಾಡಿದೆ ಅಂತ ನಿಮ್ಮ ಅಭಿಮಾನಿಗಳು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ನಿಮಗಿಂತ ಪ್ರಿನ್ಸ್ ಮಹೇಶ್ ಬಾಬು ಇಷ್ಟ ಅಂತ ಹೇಳಿದ್ದೇ ತಪ್ಪಾ? ನೀವಾದರೂ ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ’ ಅಂತ ಟ್ವೀಟ್ ಮಾಡಿದ್ದಾರೆ.

Advertisement

ಇಷ್ಟಕ್ಕೆ ಸುಮ್ಮನಾಗದ ನಟಿ ಟ್ವಿಟರ್​ನಲ್ಲಿಯೇ ಹೈದರಾಬಾದ್ ಪೊಲೀಸ್ ಮತ್ತು ಸೈಬರ್ ಕ್ರೈಮ್​ ಗೆ ದೂರು ನೀಡಿದ್ದಾರೆ. ಕೆಟ್ಟದಾಗಿ ಬಂದಿರುವ ಟ್ವೀಟ್​​ಗಳನ್ನು ಸ್ಕ್ರೀನ್ ಶಾಟ್ ಹಾಗೂ ಲಿಂಕ್​ಗಳನ್ನು ಶೇರ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ನಟಿ ಮೀರಾ ಅವರ ಜೊತೆ ಕೆಲವು ಸೆಲೆಬ್ರಿಟಿಗಳು ಮತ್ತು ಟ್ವೀಟಿಗರು ನಿಂತಿದ್ದು, ವೀ ಸಪೋರ್ಟ್ ಮೀರಾ ಚೋಪ್ರಾ ಹ್ಯಾಶ್ಟ್ಯಾಗ್ ಸೃಷ್ಟಿಸಿ, ಟ್ವಿಟರ್​​ನಲ್ಲಿ ಟ್ವೀಟ್​ ಮಾಡುತ್ತಿದ್ದಾರೆ

Advertisement
Share this on...