ಅನು ಸಿರಿಮನೆ ಹೊಸ ಪೋಟೋಶೂಟ್​​​​​​​​​​​​​ಗೆ ಫಿದಾ ಆದ ಧಾರಾವಾಹಿ ಪ್ರಿಯರು..!

in ಮನರಂಜನೆ/ಸಿನಿಮಾ 519 views

ಮುದ್ದುಮುಖದ ಮೇಘ ಶೆಟ್ಟಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ..? ಮೇಘಾಶೆಟ್ಟಿ ಎಂದರೆ ಹೆಚ್ಚಿನ ಜನಕ್ಕೆ ತಕ್ಷಣ ಹೊಳೆಯುವುದಿಲ್ಲ. ಅನು ಸಿರಿಮನೆ ಎಂದರೆ ಹೌದು ನಮಗೆ ಅನು ಎಂದರೆ ತುಂಬಾನೇ ಇಷ್ಟ ಎನ್ನುವ ಜನರೇ ಹೆಚ್ಚು. ತಮ್ಮ ನಟನೆಗಿಂತ ಮುಗ್ಧ ಅಭಿನಯ ಹಾಗೂ ಮುದ್ದು ಮೊಗದಿಂದಲೇ ಅವರು ಎಲ್ಲರನ್ನೂ ಸೆಳೆದಿದ್ದಾರೆ.ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಕಳೆದ 2 ದಿನಗಳಿಂದ ಇನ್ಸ್​ಟಾಗ್ರಾಮ್​​​​​​ನಾದ್ಯಂತ ಧೂಳೆಬ್ಬಿಸಿದ್ದಾರೆ. ಮೇಘಾ ಅವರ ಹೊಸ ಫೋಟೋಶೂಟ್​ ಎಲ್ಲರ ಕಣ್ಣುಕುಕ್ಕುತ್ತಿದೆ. ಕಡು ಹಸಿರು ಬಣ್ಣದ ಲೆಹಂಗಾದಲ್ಲಿ ಅನು ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಕಡು ಹಸಿರು ಬಣ್ಣದ ರವಿಕೆಗೆ ಚಿನ್ನ, ಬೆಳ್ಳಿ ಬಣ್ಣದ ಕಸೂತಿ, ಲಂಗದ ಅಂಚಿಗೆ ಬೆಳ್ಳಿ ಬಣ್ಣದ ಬಾರ್ಡರ್​, ಇದಕ್ಕೆ ಹೊಂದುವಂತ ಬೈತಲೆ ಬೊಟ್ಟು, ಮೂಗುತಿ, ಓಲೆ, ನೆಕ್ಲೇಸ್​, ಚಿನ್ನದ ಬಣ್ಣದ ಬಳೆ ಧರಿಸಿ ಮೇಘಾ ಮದು ಮಗಳಂತೆ ಕಾಣುತ್ತಿದ್ದಾರೆ.ಪ್ರಶಾಂತ್ ಪಚ್ಚಿ ಎಂಬುವವರು ಈ ಸುಂದರ ಪೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಮೊನ್ನೆಯಷ್ಟೇ ಶಿವಣ್ಣ ಬರ್ತ್​ಡೇಗೆ ಆಯುಷ್ಮಾನ್​​ ಭವ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ನಗುತ್ತಾ   ನಡೆದುಬರುತ್ತಿರುವ ಫೋಟೋವನ್ನು ಕ್ಲಿಕ್ಕಿಸಿ ಅವರಿಗೆ ದೊಡ್ಡ ಫ್ರೇಮ್ ಹಾಕಿಸಿ ಗಿಫ್ಟ್ ಆಗಿ ನೀಡಿ ಗಮನ ಸೆಳೆದದ್ದು ಇದೇ ಫೋಟೋಗ್ರಾಫರ್.

Advertisement

Advertisement

ಇದೀಗ ಪ್ರಶಾಂತ್ ಮೇಘಾ ಅವರ ಸುಂದರ ಪೋಟೋಗಳನ್ನು ಸೆರೆಹಿಡಿದಿದ್ದಾರೆ. ಈ ಫೋಟೋಗಳೊಂದಿಗೆ ಮೇಘಾಶೆಟ್ಟಿ ಫೋಟೋಶೂಟ್​ನ ವಿಡಿಯೋವೊಂದನ್ನು ಕೂಡಾ ಷೇರ್ ಮಾಡಿಕೊಂಡಿದ್ದು ಧಾರಾವಾಹಿಪ್ರಿಯರು ಮೇಘಾ ಅವರ ಅಂದಕ್ಕೆ ಫಿದಾ ಆಗಿದ್ದಾರೆ.ಬೆಂಗಳೂರಲ್ಲೇ ಹುಟ್ಟಿ ಬೆಳೆದ ಮೇಘಾಗೆ ಐಎಎಸ್​​ ಅಧಿಕಾರಿ ಆಗಬೇಕೆಂಬ ಕನಸು. ತಾವು ಅಷ್ಟು ಸುಂದರವಾಗಿದ್ದರೂ ಒಂದು ಬಾರಿ ಕೂಡಾ ಬಣ್ಣದ ಲೋಕದ ಬಗ್ಗೆ ಅವರು ಯೋಚಿಸಿದವರಲ್ಲ. ಅವರ ಕುಟುಂಬದಲ್ಲಿ ಕೂಡಾ ಸಿನಿಮಾ ಅಥವಾ ಧಾರಾವಾಹಿ ಹಿನ್ನೆಲೆ ಇರುವವರು ಯಾರೂ ಇಲ್ಲ. ಆದರೆ ಮೇಘಾಶೆಟ್ಟಿ ಅವರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ಜೀ ಕನ್ನಡದ ಬ್ಯುಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಲು ಆಹ್ವಾನ ನೀಡಿದ್ದಾರೆ. ಬಯಸದೆ ಬಂದ ಅವಕಾಶವನ್ನು ಬಿಡಬಾರದು ಎಂಬ ಕಾರಣಕ್ಕೆ ಮೇಘಾ ಮನೆಯವರ ಒಪ್ಪಿಗೆ ಪಡೆದು ಸ್ವೀಕರಿಸಿದ್ದಾರೆ.

Advertisement

 

Advertisement
View this post on Instagram

 

Coming soon……? @prashanth_pachi_photography @paramparika_vastra @makeoversbyamitha_lekha @aabushanjewellery1941

A post shared by Megha Shetty (@meghashetty_official04) on

ಒಮ್ಮೆಯೂ ಕ್ಯಾಮರಾ ಫೇಸ್ ಮಾಡದ, ನಟನೆ ಬಗ್ಗೆ ಏನೂ ತಿಳಿಯದ ಮೇಘಾ ಅವರಿಗೆ ಸೆಟ್​​​ನಲ್ಲಿ ಪ್ರತಿಯೊಬ್ಬರೂ ಬಹಳ ಪ್ರೋತ್ಸಾಹ ನೀಡಿದ್ದಾರೆ. ಪ್ರತಿದಿನ ನಟನೆಯ ಪಾಠ ಕಲಿಯುತ್ತಿರುವ ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ.

Advertisement
Share this on...