ಗೋಲ್ಡನ್ ಸ್ಟಾರ್ ಜೊತೆ ‘ತ್ರಿಬಲ್ ರೈಡಿಂಗ್’ ಹೋಗಲಿದ್ದಾರಾ ಮೇಘಾ ಶೆಟ್ಟಿ…?

in ಮನರಂಜನೆ/ಸಿನಿಮಾ 196 views

ಕಿರುತೆರೆಯ ಎಷ್ಟೋ ಮಂದಿ ಇಂದು ಬೆಳ್ಳಿ ತೆರೆಯಲ್ಲಿ ಹೆಸರು ಮಾಡಿದ್ದಾರೆ. ಕೆಲವರು ತಾವೇ ಅವಕಾಶಗಳನ್ನು ಹುಡುಕಿಕೊಂಡು ಹೋದರೆ, ಮತ್ತೆ ಕೆಲವರು ಬಣ್ಣದ ಲೋಕದ ಕನಸು ಕಾಣದೆ ಅವಕಾಶಗಳು ಅವರನ್ನೇ ಹುಡುಕಿ ಹೋಗುತ್ತವೆ. ತಾವು ಆಗಬೇಕು ಅಂದುಕೊಳ್ಳುವುದೇ ಒಂದು ಆದರೆ ಆಗುವುದೇ ಮತ್ತೊಂದು. ಅಂತವರಲ್ಲಿ ಮಂಗಳೂರಿನ ಚೆಲುವೆ ಮೇಘಾ ಶೆಟ್ಟಿ ಕೂಡಾ ಒಬ್ಬರು. ‘ಮೇಘಾ ಶೆಟ್ಟಿ’ ಎಂದರೆ ಅಷ್ಟು ಬೇಗ ಯಾರಿಗೂ ತಿಳಿಯುವುದಿಲ್ಲ. ಆದರೆ ಅನು ಸಿರಿಮನೆ ಎಂದರೆ, ಓ ಜೊತೆ ಜೊತೆಯಲಿ ಅನು ಸಿರಿಮನೆ ಅಲ್ವಾ ಎಂದು ಎಲ್ಲರೂ ಉದ್ಘರಿಸುವುದು ಸಹಜ. ಏಕೆಂದರೆ ಮೇಘಾ ಅನು ಸಿರಿಮನೆ ಎಂದೇ ಖ್ಯಾತಿಯಾದವರು. ಅದಕ್ಕೆ ಕಾರಣ ಅವರು ನಟಿಸುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ. ಜೀ ಕನ್ನಡದಲ್ಲಿ ಇಂತದ್ದೊಂದು ಹೊಸ ಧಾರಾವಾಹಿ ಪ್ರಸಾರವಾಗುತ್ತದೆ ಎಂದು ಪ್ರೋಮೋ ಆರಂಭವಾಗಿದ್ದೇ ತಡ ಧಾರಾವಾಹಿ ಪ್ರಿಯರು ಬಹಳ ಕುತೂಹಲದಿಂದ ಈ ಧಾರಾವಾಹಿ ಆರಂಭಕ್ಕೆ ಎದುರು ನೋಡುತ್ತಿದ್ದರು. ಮುದ್ದು ಹುಡುಗಿ ಮೇಘಾ ಶೆಟ್ಟಿ ಬಹಳ ಕಡಿಮೆ ಅವಧಿಯಲ್ಲಿ ರಾಜ್ಯದ ಮನೆಮಾತಾಗಿ ಹೋದರು.

Advertisement

Advertisement

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿಗೆ ಈಗ ಸಿನಿಮಾದಲ್ಲಿ ನಟಿಸಲು ಕೂಡಾ ಆಫರ್ ಬಂದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮೇಘಾ ಆಗಲಿ ಆ ಚಿತ್ರದವರಾಗಲೀ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ ಮೇಘಾ ಸಿನಿಮಾದಲ್ಲಿ ನಟಿಸುತ್ತಿರುವುದು ನಿಜ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿನಾಗಿ ‘ತ್ರಿಬಲ್ ರೈಡಿಂಗ್​​’ ಎಂಬ ಚಿತ್ರದಲ್ಲಿ ಮೇಘಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮೇಘಾ ತುಟಿ ಬಿಚ್ಚುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಧಿಕೃತವಾಗಿ ತಿಳಿಯಲಿದೆ.

Advertisement

Advertisement

ಇನ್ನು ಮೇಘಾ ಶೆಟ್ಟಿ ಆ್ಯಕ್ಟಿಂಗ್ ಲೋಕಕ್ಕೆ ಬರಬೇಕು ಎಂದು ಎಂದಿಗೂ ಕನಸು ಕಂಡಿರಲಿಲ್ಲವಂತೆ. ನಾನು ಐಎಎಸ್ ಅಧಿಕಾರಿ ಆಗಬೇಕು ಎನ್ನುವುದು ಮೇಘಾ ದೊಡ್ಡ ಕನಸು. ಅದಕ್ಕಾಗಿ ಮೇಘಾ ತಯಾರಿ ಕೂಡಾ ಮಾಡಿಕೊಂಡಿದ್ದರಂತೆ. ಆದರೆ ಅದೇ ಸಮಯದಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಹೊಸ ಮುಖದ ಹುಡುಕಾಟ ನಡೆಯುತ್ತಿತ್ತು. ಮೇಘಾ ಅವರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ಜೀ ವಾಹಿನಿಯ ಬ್ಯುಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು, ಮೇಘಾ ಅವರನ್ನು ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದ್ದಾರೆ. ಆ್ಯಕ್ಟಿಂಗ್ ಬಗ್ಗೆ ಗೊತ್ತಿಲ್ಲದೆ ಮೇಘಾ ಹೇಗೋ ಈ ಆಫರ್​​ಗೆ ಒಪ್ಪಿದ್ದಾರೆ.

ಆದರೆ ಮೇಘಾ ಶೆಟ್ಟಿ ಇದೀಗ ಆ್ಯಕ್ಟಿಂಗ್​​ನಲ್ಲಿ ಪಳಗಿದ್ದಾರೆ. ಧಾರಾವಾಹಿ ತಂಡ ನನಗೆ ಸಾಕಷ್ಟು ಕಲಿಸಿದೆ ಎನ್ನುತ್ತಾರೆ ಮೇಘಾ. ಒಂದು ವೇಳೆ ಮೇಘಾಗೆ ಬೆಳ್ಳಿತೆರೆಯಲ್ಲಿ ನಿಜಕ್ಕೂ ಅವಕಾಶಗಳು ಬಂದಲ್ಲಿ ಅಲ್ಲಿ ಕೂಡಾ ಕಿರುತೆರೆಯಂತೆ ಸಕ್ಸಸ್ ಆಗಲಿದ್ದಾರಾ ಕಾದು ನೋಡಬೇಕಿದೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...