ಮಹೇಶ್ ಬಾಬು ಜೊತೆ ಮೇಘಾಶೆಟ್ಟಿ…ತೆಲುಗು ಚಿತ್ರರಂಗಕ್ಕೂ ಹೋದ್ರಾ ಜೊತೆಜೊತೆಯಲಿ ಚೆಲುವೆ…?

in ಮನರಂಜನೆ 85 views

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಕಥೆಯಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ಪಾತ್ರಧಾರಿಗಳು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಧಾರಾವಾಹಿ ಆರಂಭವಾದಾಗಿನಿಂದ ಇದುವರೆಗೂ ಜನರ ಮನಸ್ಸಿಗೆ ಬಹಳ ಹತ್ತಿರವಾಗಿರುವ ನಟ/ನಟಿಯರಲ್ಲಿ ಅನಿರುದ್ಧ್​ ಹಾಗೂ ಮೇಘಾ ಶೆಟ್ಟಿ ಪ್ರಮುಖರು. ಅದರಲ್ಲೂ ಮೇಘಾ ಶೆಟ್ಟಿಗೆ ಇದು ಮೊದಲ ಧಾರಾವಾಹಿ. ಯಾವುದೇ ಸಿನಿಮಾ ಅಥವಾ ಬಣ್ಣದ ಲೋಕದ ಹಿನ್ನೆಲೆ ಇಲ್ಲದೆ ನಟನೆಗೆ ಬಂದಿರುವ ಮೇಘಾ ಶೆಟ್ಟಿ ಮೊದಲ ದಿನದ ಎಪಿಸೋಡ್​​​​​ನಲ್ಲೇ ಕಿರುತೆರೆಪ್ರಿಯರ ಮನಗೆದ್ದರು. ಮುಗ್ಧ ಅಭಿನಯ, ಮುದ್ದು ಮುಖದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ಈ ಮಂಗಳೂರು ಬ್ಯೂಟಿ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಇದೀಗ ಮೇಘಾ ತೆಲುಗಿಗೂ ಕಾಲಿಟ್ಟಿದ್ದಾರೆ. ಆದರೆ ಅದು ಜಾಹೀರಾತಾ ಅಥವಾ ಸಿನಿಮಾನಾ ಎಂಬುದರ ಬಗ್ಗೆ ಮಾತ್ರ ಸೂಕ್ತ ಮಾಹಿತಿ ಇಲ್ಲ.

Advertisement

ಮೇಘಾ ಶೆಟ್ಟಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಬಹಳ ವೈರಲ್ ಆಗುತ್ತಿದ್ದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಟಾಲಿವುಡ್​​​ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಇರುವ ಫೋಟೋಗಳನ್ನು ಮೇಘಾ ಶೆಟ್ಟಿ ಅಭಿಮಾನಿ ಬಳಗ ಇನ್ಸ್ಟಾಗ್ರಾಮ್​​​​ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮೇಘಾ ಶೆಟ್ಟಿ ಟಾಲಿವುಡ್​​​​ಗೆ ಕೂಡಾ ಎಂಟ್ರಿ ಕೊಟ್ರಾ ಎಂದು ತಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಮೇಘಾ ಶೆಟ್ಟಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಇರುತ್ತಾರೆ. ಆದರೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಮೇಘಾ ಈ ಫೋಟೋಗಳನ್ನು ಹಂಚಿಕೊಂಡಿಲ್ಲ.

Advertisement

 

Advertisement
View this post on Instagram

 

Advertisement

A post shared by Megha Shetty (@meghashettyofficial)

ಮಹೇಶ್ ಬಾಬು ಜೊತೆ ಇರುವ ಫೋಟೋದಲ್ಲಿ ಮೇಘಾಶೆಟ್ಟಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಕಂದು ಬಣ್ಣದ ಸೀರೆಯಲ್ಲಿ ಅವರು ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ಜೊತೆಗೆ ಮಹೇಶ್ ಬಾಬು ಹಳದಿ ಬಣ್ಣದ ಟಿ ಶರ್ಟ್ ಧರಿಸಿದ್ದಾರೆ. ಈ ಫೋಟೋಗಳ ಮೂಲಕ ಮೇಘಾ ಬಹಳ ಸುದ್ದಿಯಲ್ಲಿದ್ದಾರೆ. ಮೇಘಾ ಶೆಟ್ಟಿ, ಮಹೇಶ್ ಬಾಬು ಜೊತೆ ತೆಲುಗು ಸಿನಿಮಾದಲ್ಲೇನಾದರೂ ನಟಿಸುತ್ತಿದ್ದಾರಾ..? ಅಥವಾ ಇದು ಜಾಹೀರಾತು ಇರಬಹುದಾ ಎಂಬ ಪ್ರಶ್ನೆಗೆ ಮಾತ್ರ ಉತ್ತರ ದೊರೆತಿಲ್ಲ. ಏಕೆಂದರೆ ಮೇಘಾ ಶೆಟ್ಟಿ ಮಾತ್ರ ಈ ಫೋಟೋಗಳ ಬಗ್ಗೆ ಮಾತ್ರ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೂ ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ದೊರೆಯಲಿದೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಖ್ಯಾತಿ ಗಳಿಸುತ್ತಿದ್ದಂತೆ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಟಿಸಲು ಆಯ್ಕೆಯಾದರು. ನಂತರ ಒಂದು ಆಲ್ಬಂ ಹಾಡಿನಲ್ಲಿ ಕೂಡಾ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಅಭಿನಯದ ‘ದಿಲ್​​ ಪಸಂದ್’ ಚಿತ್ರದಲ್ಲಿ ನಟಿಸುತ್ತಿರುವ ಇಬ್ಬರು ನಾಯಕಿಯರಲ್ಲಿ ಮೇಘಾ ಶೆಟ್ಟಿ ಕೂಡಾ ಒಬ್ಬರು.
-ರಕ್ಷಿತ ಕೆ.ಆರ್​​.ಎಸ್

Advertisement
Share this on...