11 ದಿನಗಳ ನಂತರ ಚಿರು ಬಗ್ಗೆ ಮೇಘನಾ ಎಮೋಷನಲ್ ಪೋಸ್ಟ್…ಭಾವಪೂರ್ಣ ಸಂದೇಶ ನೋಡಿ ಎಲ್ಲರ ಕಣ್ಣಂಚು ಒದ್ದೆ..

in ಕನ್ನಡ ಮಾಹಿತಿ/ಸಿನಿಮಾ 184 views

ಚಿರಂಜೀವಿ ಸರ್ಜಾ, ಮೇಘನಾ ರಾಜ್ ಸ್ಯಾಂಡಲ್​​​ವುಡ್ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. 10 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಮನೆಯವರ ಒಪ್ಪಿಗೆ ಪಡೆದು 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಸುಖ ಸಂಸಾರ, ಜೇನಿನ ಗೂಡಿನಂತಿದ್ದ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಜೂನ್ 7 ರಂದು ಜವರಾಯ ಚಿರಂಜೀವಿ ಸರ್ಜಾ ಅವರನ್ನು ತನ್ನೊಂದಿಗೆ ಕರೆದುಕೊಂಡು ಹೋಗೇಬಿಟ್ಟ.ಚಿರು ನಿಧನದಿಂದ ಅವರ ಕುಟುಂಬಕ್ಕೆ ಎಲ್ಲರಿಗಿಂತ ಹೆಚ್ಚಾಗಿ ಮೇಘನಾ ರಾಜ್​​​​ಗೆ ದೊಡ್ಡ ಆಘಾತ ಉಂಟು ಮಾಡ್ತು. ಮೇಘನಾ ಗರ್ಭಿಣಿಯಾಗಿದ್ದು ಮಗುವನ್ನು ನೋಡುವ ಮುನ್ನವೇ ಚಿರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಇನ್ನು ಚಿರುವನ್ನು ಮಣ್ಣು ಮಾಡಿದ್ದ ಫಾರಂಹೌಸ್​​​ನಲ್ಲಿ ನಿನ್ನೆ ಅವರ 11ನೇ ದಿನದ ಕಾರ್ಯವನ್ನು ಕುಟುಂಬದವರು ಭಾರವಾದ ಮನಸ್ಸಿನಿಂದ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಸೋದರ ಮಾವ ಅರ್ಜುನ್ ಸರ್ಜಾ ತನ್ನ ಪ್ರೀತಿಯ ಸೋದರಳಿಯನನ್ನು ನೆನೆದು ದು:ಖದಿಂದ ಆಡಿಯೋವೊಂದನ್ನು ಮಾಡಿದ್ದರು. ನೀನು ಮತ್ತೆ ಮಗುವಾಗಿ ನಮ್ಮ ಮನೆಗೆ ಬಾ ಎಂದು ಕಣ್ಣೀರಿಟ್ಟಿದ್ದರು.

Advertisement

 

Advertisement

Advertisement

ಇದೀಗ ಚಿರಂಜೀವಿ ಸರ್ಜಾ ಮೇಘನಾ ರಾಜ್ 11 ದಿನಗಳ ನಂತರ ಸೋಷಿಯಲ್ ಮೀಡಿಯಾಗೆ ಬಂದು ಮತ್ತೆ ದು:ಖವನ್ನು ಹೊರ ಹಾಕಿದ್ದಾರೆ. ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಬಗ್ಗೆ ಮೇಘನಾ ಬರೆದುಕೊಂಡಿದ್ದಾರೆ. ‘ಚಿರು ನಿನ್ನನ್ನು ಹೇಗೆ ವರ್ಣಿಸುವುದು ಗೊತ್ತಿಲ್ಲ. ನೀನು ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ, ನನ್ನ ಮಗು, ನನ್ನ ಸರ್ವಸ್ವ, ನನ್ನ ಪತಿ, ನೀನು ಇದೆಲ್ಲಕ್ಕಿಂತ ಹೆಚ್ಚು ನೀನು ನನ್ನ ಆತ್ಮದ ಅರ್ಧ ಭಾಗ. ಮನೆ ಬಾಗಿಲು ನೋಡುತ್ತಿದ್ದರೆ ದು:ಖವಾಗುತ್ತಿದೆ. ನೀನು ನನ್ನ ಸುತ್ತಲೂ ಇದ್ದೀಯ, ಏಕೆಂದರೆ ನೀನು ನನ್ನನ್ನು ಒಂಟಿ ಮಾಡಿ ಹೋಗಲು ಸಾಧ್ಯವೇ ಇಲ್ಲ. ಮಗುವಾಗಿ ನೀನು ಮತ್ತೆ ಹುಟ್ಟಿ ಬಾ, ನಿನ್ನನ್ನು ಸ್ಪರ್ಶಿಸಲು ಕಾಯುತ್ತಿದ್ದೇನೆ’ ಎಂದು ಮೇಘನಾ ಚಿರು ಬಗ್ಗೆ ಬರೆದುಕೊಂಡಿದ್ದಾರೆ.

Advertisement

 

View this post on Instagram

 

MY CHIRU FOREVER ❤️

A post shared by Meghana Raj Sarja (@megsraj) on

ಮೇಘನಾ ರಾಜ್ ಬರೆದ ಈ ಭಾವಪೂರ್ಣ ಸಂದೇಶ ನೋಡಿ, ಸ್ನೇಹಿತರ, ಅಭಿಮಾನಿಗಳ ಕಣ್ಣಂಚು ಒದ್ದೆಯಾಗಿದೆ. ಮೇಘನಾ ಅವರನ್ನು ಎಲ್ಲರೂ ಸಮಾಧಾನ ಮಾಡಲು ಯತ್ನಿಸಿದ್ದಾರೆ. ದೇವರೇ ಮೇಘನಾ ಹಾಗೂ ಕುಟುಂಬದವರ ಆಸೆಯಂತೆ ಚಿರಂಜೀವಿ ಸರ್ಜಾ ಅವರನ್ನು ಮಗನಾಗಿ ಮತ್ತೆ ಮೇಘನಾ ಅವರ ಮಡಿಲು ಸೇರಿಸು. ಆ ಮೂಲಕವಾದರೂ ಅವರ ದು:ಖವನ್ನು ಕಡಿಮೆ ಮಾಡು ಎಂದು ಪ್ರಾರ್ಥಿಸುತ್ತಿದ್ದಾರೆ.

Advertisement
Share this on...