ನೋವಿನಲ್ಲಿರುವ ಮೇಘನಾ ಮೊಗದಲ್ಲಿ ನಗು ಮೂಡಿಸಿದ ಸ್ಯಾಂಡಲ್​​ವುಡ್ ನಟಿಯರು

in ಮನರಂಜನೆ/ಸಿನಿಮಾ 136 views

ಚಿತ್ರರಂಗದಲ್ಲಿ ಹೀರೋಗಳ ನಡುವೆ, ಹೀರೋಯಿನ್​​ಗಳ ನಡುವೆ ಕಾಂಪಿಟೇಷನ್ ಇರುವುದು ಸಾಮಾನ್ಯ. ನಾನು ಅವರಿಗಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು. ಅವರಿಗಿಂತ ದೊಡ್ಡ ಮಟ್ಟದಲ್ಲಿ ಹೆಸರು ಹಣ ಮಾಡಬೇಕು, ಅವರಿಗಿಂತ ಹೆಚ್ಚಾಗಿ ಫ್ಯಾನ್ ಫಾಲೋಯಿಂಗ್ ಇರಬೇಕು ಎಂಬ ಆಸೆ ಎಲ್ಲರಿಗೂ ಇರುವುದು ಸಾಮಾನ್ಯ. ಚಿತ್ರರಂಗದಲ್ಲಿ ನೀವು ಫ್ಯಾನ್ ವಾರ್​​ಗಳನ್ನು ಕೂಡಾ ನೋಡಿರುತ್ತೀರಿ. ಕೆಲವೊಮ್ಮೆ ಹೀರೋಗಳು, ಹೀರೋಯಿನ್​​​ಗಳು ಸುಮ್ಮನಿದ್ದರೂ ಅವರ ಅಭಿಮಾನಿಗಳ ನಡುವೆ ಜಗಳವಾಗಿ ಅದು ಅತಿರೇಖಕ್ಕೆ ತಿರುಗಿರುವುದೂ ಉಂಟು. ಆದರೆ ಕೆಲವೊಮ್ಮೆ ನಟಿಯರಾಗಲೀ, ನಟರಾಗಲೀ ಕಷ್ಟ ಎಂದು ಬಂದಾಗ ಒಬ್ಬರಿಗೊಬ್ಬರು ಸಹಾಯಕ್ಕೆ ನಿಲ್ಲುವುದನ್ನು ಕೂಡಾ ನೋಡಿರುತ್ತೀರಿ. 90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿಯರು ಒಂದೆಡೆ ಸೇರಿ ಒಬ್ಬರಿಗೆ ಧೈರ್ಯ ತುಂಬುವ ಕೆಲಸಕ್ಕೆ ನಿಂತಿದ್ದಾರೆ. ಅವರು ಯಾರು ಅಂತೀರಾ..? ಈ ನಟಿಯರೆಲ್ಲಾ ಒಟ್ಟು ಸೇರಿ ಇತ್ತೀಚೆಗೆ ಪತಿಯನ್ನು ಕಳೆದುಕೊಂಡು ದು:ಖದಲ್ಲಿರುವ ಮೇಘನಾ ರಾಜ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿರುವ ಮೇಘನಾ ರಾಜ್, ನಿಧಾನವಾಗಿ ಆ ನೋವಿನಿಂದ ಹೊರ ಬರುವ ಪ್ರಯತ್ನ ಮಾಡುತ್ತಿದ್ದಾರೆ.

Advertisement

Advertisement

ಮೇಘನಾ ಗರ್ಭಿಣಿಯಾಗಿದ್ದು ತಮಗಾಗಿ ಅಲ್ಲದಿದ್ದರೂ ಮುಂದೆ ಜನಿಸುವ ಮಕ್ಕಳಿಗಾದರೂ ತಮಗೆ ತಾವೇ ಧೈರ್ಯ ತುಂಬಿಕೊಂಡು ಬದುಕುತ್ತಿದ್ದಾರೆ. ಸುಧಾರಾಣಿ, ಮಾಳವಿಕ ಅವಿನಾಶ್, ಶ್ರುತಿ ಹಾಗೂ ಶ್ರುತಿ ಪುತ್ರಿ ಗೌರಿ ನಾಲ್ವರೂ 4 ದಿನಗಳ ಹಿಂದೆ ತಮ್ಮ ತವರು ಮನೆಯಲ್ಲಿರುವ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ ಅವರ ಮೊಗದಲ್ಲಿ ನಗು ತರಿಸಿದ್ದಾರೆ.

Advertisement

ಈ ನಟಿಯರೆಲ್ಲಾ ಸುಮ್ಮನೆ ಹೋಗಿಲ್ಲ. ಮೇಘನಾ ತುಂಬು ಗರ್ಭಿಣಿ. ಅವರಿಗಾಗಿ ವಿವಿಧ ರೀತಿಯ ತಿಂಡಿಗಳನ್ನು ಮಾಡಿಕೊಂಡು ಮೇಘನಾ ಅವರನ್ನು ಭೇಟಿ ಆಗಿದ್ದಾರೆ. ಮೇಘನಾ ರಾಜ್​, ತಂದೆ ಸುಂದರ್ ರಾಜ್​, ತಾಯಿ ಪ್ರಮಿಳಾ ಜೋಷಾಯ್​ ಮೂವರಿಗೂ ಇವರೆಲ್ಲಾ ಧೈರ್ಯ ತುಂಬಿದ್ದಾರೆ. ಅವರೊಂದಿಗೆ ಊಟ ಮಾಡಿ, ಬಹಳ ಹೊತ್ತು ಸಮಯ ಕಳೆದು ಬಂದಿದ್ದಾರೆ. ಈ ನಟಿಯರೆಲ್ಲಾ ಮೇಘನಾ ಅವರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಳವಿಕಾ ಅವಿನಾಶ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿ ನಾನು ಬಹಳ ವರ್ಷಗಳಿಂದ ಸುಂದರ್ ರಾಜ್ ಅವರನ್ನು ಬಲ್ಲೆ. ಈ ಸಮಯದಲ್ಲಿ ಅವರಿಗೆಲ್ಲಾ ಧೈರ್ಯ ತುಂಬುವುದು ನಮ್ಮ ಕರ್ತವ್ಯ ಎಂದು ಬರೆದುಕೊಂಡಿದ್ದಾರೆ. ನಟಿಯರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಜೂನ್ 7 ರಂದು ಮಧ್ಯಾಹ್ನ ಮೇಘನಾ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ಹಾಗೂ ಚಿರಂಜೀವಿ ಸರ್ಜಾ 2018 ರಲ್ಲಿ ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದರು. ಆದರೆ ಚಿರು ಇಷ್ಟು ಚಿಕ್ಕ ವಯಸ್ಸಿಗೆ ನಿಧನರಾಗಿದ್ದು ಎಂತವರಿಗಾದರೂ ಬೇಸರದ ಸಂಗತಿ. ದೇವರು ಮೇಘನಾ ಅವರ ನೋವನ್ನು ಮರೆಸಿ ಅವರಿಗೆ ನೆಮ್ಮದಿಯ ಜೀವನವನ್ನು ನೀಡಲಿ ಎಂದು ಹಾರೈಸೋಣ.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...