ತವರು ಮನೆಯಲ್ಲಿ ಸರಳವಾಗಿ ನಡೆದ ಮೇಘನ ರಾಜ್ ಸೀಮಂತ ಶಾಸ್ತ್ರ…

in ಮನರಂಜನೆ/ಸಿನಿಮಾ 329 views

ಚಿರಂಜೀವಿ ಸರ್ಜಾ ಅ’ಗಲಿಕೆಯ ನೋ’ವಿನಿಂದ ಮೇಘನ ರಾಜ್​​, ಧ್ರುವ ಸರ್ಜಾ ಹಾಗೂ ಕುಟುಂಬದವರು ನಿಧಾನವಾಗಿ ಹೊರ ಬರುತ್ತಿದ್ದಾರೆ. ಚಿರು ನೆನಪಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಮೇಘನ ರಾಜ್​ ತಂದೆ ತಾಯಿಗಳಾದ ಸುಂದರ್ ರಾಜ್, ಪ್ರಮಿಳಾ ಜೋಷಾಯ್​, ಕುಟುಂಬದವರು ಹಾಗೂ ಸ್ನೇಹಿತರು ಮೇಘನ ಬೆನ್ನುಲುಬಾಗಿ ನಿಂತಿದ್ದು ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಇವರೊಂದಿಗೆ ಅಭಿಮಾನಿಗಳು ಕೂಡಾ ಮೇಘನ ಹಾಗೂ ಚಿರು ಕುಟುಂಬದೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳುತ್ತಿದ್ದಾರೆ. ಚಿರು ನಿ’ಧನರಾದಾಗ ಮೇಘನ 4 ತಿಂಗಳ ಗರ್ಭಿಣಿ. ಇಂದು ಮೇಘನ ರಾಜ್​ ಅವರ ಸೀಮಂತ ಕಾರ್ಯ ಸರಳವಾಗಿ ನೆರವೇರಿದೆ. ತವರು ಮನೆಯಲ್ಲೇ ಬಹಳ ಸರಳವಾಗಿ ಮೇಘನ ಸೀಮಂತ ಕಾರ್ಯ ನೆರವೇರಿದೆ. ಕೊರೊನಾ ಇರುವ ಕಾರಣ ಹೆಚ್ಚು ಜನರು ಈ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಧ್ರುವ ತಂದೆ ತಾಯಿ, ಅಜ್ಜಿ, ಪ್ರಮಿಳಾ ಜೋಷಾಯ್, ಸುಂದರ್​ ರಾಜ್ ಹಾಗೂ ಕೆಲವೇ ಕೆಲವು ಆಪ್ತರು ಮಾತ್ರ ಈ ಸೀಮಂತ ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

ಹಸಿರು ಬಣ್ಣ ಹಾಗೂ ಕೆಂಪು ಝರಿ ಸೀರೆಯನ್ನು ಧರಿಸಿದ್ದ ಮೇಘನ ರಾಜ್ ಬಹಳ ಮುದ್ದಾಗಿ ಕಾಣುತ್ತಿದ್ದರು. ಮೇಘನಾ ಅವರನ್ನು ಕೂರಿಸಿದ್ದ ಕುರ್ಚಿ ಬಳಿ ಚಿರಂಜೀವಿ ಸರ್ಜಾ ಅವರ ಕಟೌಟ್ ಮಾಡಿಸಿ ನಿಲ್ಲಿಸಲಾಗಿತ್ತು. ಕುಟುಂಬದವರು ಮೇಘನ ಅವರ ಮಡಿಲು ತುಂಬಿ ಅಕ್ಷತೆ ಹಾಕಿ ಹಾರೈಸಿದರು. ನಂತರ ಕುಟುಂಬದವರೆಲ್ಲಾ ಚಿರು ಫೋಟೋ ಮುಂದೆ ನಿಂತು ಫೋಟೋ ತೆಗೆಸಿಕೊಂಡರು. ಈ ವೇಳೆ ಧ್ರುವ ಸರ್ಜಾ, ಅಣ್ಣನ ಫೋಟೋವನ್ನೇ ನೋಡುತ್ತಿದ್ದದ್ದು ಕಂಡುಬಂತು. ಧ್ರುವ ಕಣ್ಣಂಚು ಒದ್ದೆಯಾಗಿದ್ದನ್ನು ಅವರ ಪತ್ನಿ ಪ್ರೇರಣಾ ಗಮನಿಸಿದರು. ಆದರೆ ಅತ್ತಿಗೆ ನನ್ನನ್ನು ನೋಡಿದರೆ ಎಲ್ಲಿ ಅವರೂ ಕೂಡಾ ಅಳುವರೋ ಎಂಬ ಕಾರಣಕ್ಕೆ ಧ್ರುವ ಸರ್ಜಾ ಅವರಿಗೆ ಮುಖ ತೋರದೆ ಅಲ್ಲಿಂದ ನಡೆದರು.

Advertisement

ಮೇಘನ ಹಾಗೂ ಚಿರಂಜೀವಿ ಸರ್ಜಾ ಅವರದ್ದು ಹತ್ತು ವರ್ಷಗಳ ಲವ್ ಸ್ಟೋರಿ. ಹಿರಿಯರನ್ನು ಒಪ್ಪಿಸಿ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ 2018 ರಲ್ಲಿ ಮೇಘನ ಹಾಗೂ ಚಿರು ಮದುವೆಯಾದರು. ಲಾಕ್​ಡೌನ್ ಸಮಯದಲ್ಲಿ ಈ ಕುಟುಂಬ ಮನೆಯಲ್ಲಿ ಒಟ್ಟಿಗೆ ಖುಷಿಯಿಂದ ಇದ್ದ ವಿಡಿಯೋ ವೈರಲ್ ಆಗಿತ್ತು. ಇವರ ಸಂತೋಷವನ್ನು ಆ ವಿ’ಧಿಗೂ ಸಹಿಸಲಾಗಲಿಲ್ಲವೇನೋ. ಜೂನ್ 7 ರಂದು ಮಧ್ಯಾಹ್ನ ಚಿರಂಜೀವಿ ಸರ್ಜಾ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ಸೇರಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿರು ನಿ’ಧನರಾದರು. 35 ವರ್ಷಕ್ಕೆ ಚಿರು ಎಲ್ಲರನ್ನೂ ಬಿಟ್ಟು ಅ’ಗಲಿದರು. ನಿಜಕ್ಕೂ ಈ ಕ’ರಾಳ ಘಟನೆಯನ್ನು ಯಾರೂ ಮರೆಯುವಂತಿಲ್ಲ.

Advertisement

Advertisement

ಮೇಘನ ರಾಜ್ ಸೀಮಂತ ಕಾರ್ಯಕ್ರಮದ ವಿಡಿಯೋ ಇಂಟರ್​​ನೆಟ್​​ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದವರು ನಿಜಕ್ಕೂ ಚಿರು ಈಗ ಇರಬೇಕಿತ್ತು ಎಂದುಕೊಳ್ಳುತ್ತಿದ್ದಾರೆ. ಮೇಘನ ರಾಜ್ ಹಾಗೂ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬುದೇ ನಮ್ಮ ಹಾರೈಕೆ.

ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರ
ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ  ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...