ಮೈದುನನಿಗೆ ಬರ್ತ್​ಡೇ ಶುಭ ಕೋರಿದ ಮೇಘನಾ…ಚಿರುವಂತೆ ಯಾವಾಗಲೂ ನಗುತಿರು ಎಂದು ಹಾರೈಸಿದ ಅತ್ತಿಗೆ

in ಮನರಂಜನೆ/ಸಿನಿಮಾ 255 views

ಸ್ಯಾಂಡಲ್​​ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿನ್ನೆ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷವೂ ಅಭಿಮಾನಿಗಳು ಧ್ರುವ ಸರ್ಜಾ ಮನೆ ಮುಂದೆ ಜಮಾಯಿಸಿ ಪ್ರೀತಿಯ ನಟನಿಗೆ ಶುಭ ಕೋರುತ್ತಿದ್ದರು. ತಮ್ಮ ಮೆಚ್ಚಿನ ನಟನಿಗೆ ಕೇಕ್, ಉಡುಗೊರೆಗಳನ್ನು ತಂದು ನೀಡಿ ಖುಷಿ ಪಡುತ್ತಿದ್ದರು. ಆದರೆ ಈ ಬಾರಿ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೊರೊನಾ ಒಂದು ಕಾರಣವಾದರೆ ಸ್ನೇಹಿತನಂತೆ ಇದ್ದ ಅಣ್ಣನ ಅಗಲಿಕೆಯ ನೋವು ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಪ್ರಮುಖ ಕಾರಣ. “ಅಭಿಮಾನಿಗಳನ್ನು ಮನೆ ಬಳಿ ಬರಬೇಡಿ ಎಂದು ಹೇಳಲು ಮನಸ್ಸು ಬರುತ್ತಿಲ್ಲ. ಆದರೆ ಈ ವರ್ಷದ ಬೆಳವಣಿಗೆಗಳು ನಿಮಗೆ ತಿಳಿದಿದೆ. ಮನೆಯಲ್ಲಿ ಸಂಭ್ರಮ ಎನ್ನುವುದು ಇಲ್ಲ. ದಯವಿಟ್ಟು ನೀವು ಇರುವಲ್ಲೇ ನನ್ನನ್ನು ಆಶೀರ್ವದಿಸಿ ಹಾರೈಸಿ” ಎಂದು ಧ್ರುವ ಸರ್ಜಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಇನ್ನು ಮೇಘನಾ ರಾಜ್​​​​​​​​​ ತುಂಬು ಗರ್ಭಿಣಿಯಾಗಿದ್ದು ಭಾನುವಾರ ಸಂಪ್ರದಾಯದಂತೆ ಕೆಲವೇ ಆಪ್ತರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ನಿನ್ನೆ ಧ್ರುವ ಹುಟ್ಟುಹಬ್ಬವಾಗಿದ್ದರಿಂದ ಮೊನ್ನೆ ಸಂಜೆಯೇ ಮೇಘನಾ ರಾಜ್,​​ ಮೈದುನನ ಹುಟ್ಟುಹಬ್ಬ ಆಚರಿಸಿದರು.

Advertisement

Advertisement

ಚಿರು ಅಗಲಿದಾಗಿನಿಂದ ಎಲ್ಲರೂ ದು:ಖದಲ್ಲಿದ್ದಾರೆ. ಈ ಸಂಭ್ರಮದ ಮೂಲಕವಾದರೂ ಎಲ್ಲರ ಮೊಗದಲ್ಲಿ ನಗು ಬರಲಿ ಎಂಬ ಉದ್ದೇಶದಿಂದ ಧ್ರುವ ಸರ್ಜಾ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸ್ನೇಹಿತರು ಧ್ರುವ ಸರ್ಜಾಗೆ ಹುಟ್ಟುಹಬ್ಬದ ಶುಭ ಕೋರಿದರು.

Advertisement

ಮೇಘನಾ ರಾಜ್ ಕೂಡಾ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮೈದುನನಿಗೆ ಶುಭ ಕೋರಿದ್ದಾರೆ. “ನೀನು ನನ್ನ ಬಲವಾಗಿ ನಿಂತಿರುವಂತೆಯೇ ನಾನೂ ಕೂಡಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ ಪ್ರಾಮಿಸ್​​​​​. ಮೈ ಡಿಯರ್ ಬರ್ತ್​ಡೇ ಬಾಯ್, ನಾನು ಯಾವಾಗಲೂ ನಿನ್ನ ಸಂತೋಷ ಬಯಸುತ್ತೇನೆ. ನನ್ನ ಚಿರು ಯಾವಾಗಲೂ ನಗುತ್ತಿದ್ದಂತೆ ನೀನೂ ಕೂಡಾ ನಗುತ್ತಿರು. ಹುಟ್ಟುಹಬ್ಬದ ಶುಭಾಶಯಗಳು ಮೈದುನ” ಎಂದು ಮೇಘನಾ ರಾಜ್ ಧ್ರುವಾಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Advertisement

ನಿನ್ನೆ ಕೂಡಾ ಮೇಘನಾ ರಾಜ್ ಸ್ನೇಹಿತೆಯರು ಅವರ ಮನೆಗೆ ಬಂದು ಆಕೆಗೆ ಗಿಫ್ಟ್ ನೀಡಿ, ಆಕೆಯ ಇಷ್ಟವಾದ ತಿನಿಸುಗಳನ್ನು ನೀಡಿ ಶುಭ ಕೋರಿದರು. ಚಿರು ಕಟೌಟ್ ಜೊತೆ ಮೇಘನಾ ರಾಜ್ ಹಾಗೂ ಸ್ನೇಹಿತೆಯರು ನಿಂತು ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಮೇಘನಾ ರಾಜ್, ಚಿರು ಅಗಲಿದ ದು:ಖದಿಂದ ಹೊರ ಬಂದು ಮಕ್ಕಳೊಂದಿಗೆ, ಕುಟುಂಬದೊಂದಿಗೆ ಸಂತೋಷವಾಗಿರಲಿ ಎಂಬುದೇ ನಮ್ಮ ಹಾರೈಕೆ.

Advertisement
Share this on...