ಸಾಹಸಸಿಂಹ ಬಳಸುತ್ತಿದ್ದ ದುಬಾರಿ ಬೆಲೆಯ ವಸ್ತುವೊಂದು ಈಗ ಮೇಘನಾ ಬಳಿ ಇದೆ…ಏನದು..?

in ಮನರಂಜನೆ/ಸಿನಿಮಾ 102 views

ಚಿರಂಜೀವಿ ಸರ್ಜಾ ನಿಧನರಾದಾಗಿನಿಂದ ಪ್ರತಿದಿನ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮೇಘನಾ ಅಥವಾ ಚಿರಂಜೀವಿ ಸರ್ಜಾ ಹಾಗೂ ಕುಟುಂಬದ್ದೇ ಮಾತು. ಅಭಿಮಾನಿಗಳು ಚಿರಂಜೀವಿ ಸರ್ಜಾ ಅವರನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಇದರಿಂದ ತಿಳಿಯುತ್ತದೆ. ಇನ್ನು ಇತ್ತೀಚೆಗೆ ಮೇಘನಾ ತಮ್ಮ ಹೆಸರನ್ನು ಮೇಘನಾ ರಾಜ್ ಸರ್ಜಾ ಎಂದು ಕೂಡಾ ಬದಲಿಸಿಕೊಂಡಿದ್ದಾರೆ. ಮೇಘನಾ ಚಿರಂಜೀವಿ ಜೊತೆ ಇರುವ ಫೋಟೋ ಜೊತೆಗೆ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಮೇಘನಾ ಇರುವ ಫೋಟೋಗಳು ಕೂಡಾ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಮೇಘನಾ ರಾಜ್ ಚಿಕ್ಕ ಹುಡುಗಿ ಆದಾಗಿನಿಂದ ವಿಷ್ಣುವರ್ಧನ್ ಮೇಘನಾರನ್ನು ಎತ್ತಿ ಬೆಳೆಸಿದ್ದು. ಮೊದಲಿನಿಂದಲೂ ಸುಂದರ್​​ರಾಜ್​, ಪ್ರಮಿಳಾ ಜೋಷಾಯ್ ಕುಟುಂಬಕ್ಕೂ ವಿಷ್ಣು ಕುಟುಂಬಕ್ಕೂ ಬಹಳ ಆತ್ಮೀಯತೆ ಇದೆ. ಸುಂದರ್ ರಾಜ್​ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ಅಲ್ಲಿ ವಿಷ್ಣು ಕುಟುಂಬ ಬಂದು ಹೋಗುತ್ತಿತ್ತು. ಅದೇ ರೀತಿ ವಿಷ್ಣು ಮನೆಯಲ್ಲಿ ಏನೇ ಸಮಾರಂಭ ಇದ್ದರೂ ಅಲ್ಲಿ ಸುಂದರ್​ ರಾಜ್ ಕುಟುಂಬ ಹಾಜರಿರುತ್ತಿತ್ತು.

Advertisement

Advertisement

ಡಾ. ವಿಷ್ಣುವರ್ಧನ್ ಹಾಗೂ ಭಾರತಿ ಇಬ್ಬರೂ ಮೇಘನಾ ಅವರನ್ನು ತಮ್ಮ ಮಕ್ಕಳಂತೆಯೇ ಇಷ್ಟಪಡುತ್ತಿದ್ದರು. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಸಾಹಸಸಿಂಹ ವಿಷ್ಣುವರ್ಧನ್ ನಿಧನರಾದಾಗ ಅವರು ಧರಿಸುತ್ತಿದ್ದ ದುಬಾರಿ ಬೆಲೆಯ ವಾಚ್​​​​​​ವೊಂದನ್ನು ಕೀರ್ತಿ ತಮ್ಮ ಬಳಿ ಇರಿಸಿಕೊಂಡಿದ್ದರು. ಆದರೆ ನಂತರ ಅದನ್ನು ಅಪ್ಪಾಜಿ ನೆನೆಪಿಗಾಗಿ ಮೇಘನಾ ಅವರಿಗೆ ನೀಡಿದ್ದರು. ಒಮ್ಮೆ ಮೇಘನಾ ಈ ವಾಚ್ ಧರಿಸಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿಕೊಂಡಿದ್ದರು.

Advertisement

Advertisement

ಈಗಲೂ ಕೂಡಾ ಮೇಘನಾ ರಾಜ್ ಕುಟುಂಬ ವಿಷ್ಣು ಮನೆಗೆ ಹೋದರೆ ಭಾರತಿ ಅವರು ಮೇಘನಾಗೆ ಕೈ ತುತ್ತು ನೀಡುತ್ತಾರಂತೆ. ವಿಷ್ಣು ಕುಟುಂಬದೊಂದಿಗೆ ಸುಂದರ್​​ರಾಜ್ ಕುಟುಂಬ ಜೊತೆಗಿರುವ ಎಷ್ಟೋ ಪೋಟೋಗಳು ಅವರ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಚಿರು ನಿಧನರಾದಾಗ ಕೂಡಾ ಭಾರತಿ ವಿಷ್ಣುವರ್ಧನ್, ಕೀರ್ತಿ ಹಾಗೂ ಅನಿರುಧ್ ಮೇಘನಾ ಮನೆಗೆ ತೆರಳಿ ಧೈರ್ಯ ಹೇಳಿ ಬಂದಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ವಿಷ್ಣುದಾದಾ ಇನ್ನು ನಮ್ಮೊಂದಿಗೆ ಇಲ್ಲ. ಅದೇ ರೀತಿ ಜೇನಿನಗೂಡಿನಂತೆ ಇದ್ದ ಚಿರು ಕುಟುಂಬ ಕೂಡಾ ಅವರು ಇಲ್ಲದೆ ಕಣ್ಣೀರಿಡುತ್ತಿದೆ. ಚಿರು ನಿಧನದ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂಬುದೇ ಎಲ್ಲರ ಹಾರೈಕೆ.

Advertisement
Share this on...