ಅರಳಿತು ಮೇಘನಾ ಮುಖದಲಿ ನಗು ! ಭಾವನಾತ್ಮಕ ಸಂಗತಿ ಹಂಚಿಕೊಂಡ ಚಿರು ಧರ್ಮಪತ್ನಿ !

in ಮನರಂಜನೆ/ಸಿನಿಮಾ 152 views

ಚಂದನವನದ ಉದಯೋನ್ಮುಖ ನಟ, ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅವರು  ಚಿರ ನಿದ್ರೆಗೆ ಜಾರಿ ಇಂದಿಗೆ  ಒಂದು ತಿಂಗಳು ತುಂಬಿ ಹೋಗಿದೆ. ಸದಾ ಹಸನ್ಮುಖಿಯಾಗಿದ್ದ ಮೇಘನಾರವರ ನಗು ಮುಖವನ್ನು ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ. ಇಂತಹ  ಸಂದರ್ಭದಲ್ಲಿ ಚಿರು ಅವರ ಕುಟುಂಬದವರು ಮತ್ತು ಅವರ ಆತ್ಮೀಯರು ಅವರನ್ನು ನೆನಪಿಸಿಕೊಳ್ಳುತ್ತಿದ್ದು, ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಚಿರುವಿಗೆ ಆಶ್ರುತರ್ಪಣದ ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ಬರಹಗಳಲ್ಲಿಯೂ ಚಿರು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಆ ಸಾವು ಎಂತಹ ಆಘಾತ ಮೂಡಿಸಿದೆ ಎಂಬುದನ್ನು ಮನದಟ್ಟು ಮಾಡಿಸುವ ನೋವು ಕಾಣಿಸುತ್ತಿದೆ. ಆದರೆ ಇಂತಹ  ಭಾವುಕ ಪದಗಳ ನಡುವೆಯೂ ಚಿರು ಅವರ ಕುಟುಂಬದವರು ಮತ್ತು ಆಪ್ತರು ನಗುವನ್ನು ಮೂಡಿಸಿದ್ದಾರೆ. ಚಿರು ಅವರ ನಗು ಮತ್ತು ಅವರ ಮಾತುಗಳನ್ನು ಶಾಶ್ವತವಾಗಿರಿಸುವ ಪ್ರಯತ್ನವನ್ನು ಅವರ ಆಪ್ತರು ಮಾಡಿದ್ದಾರೆ.

Advertisement

Advertisement

ಚಿರು ಅವರ ಅಗಲುವಿಕೆಯಲ್ಲಿ ನೋವಿನ ಬದಲು ನಗುವನ್ನು ಹಂಚುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರು  ಯಾವಾಗಲೂ ನಗುತ್ತಿರಬೇಕು ಎನ್ನುತ್ತಿದ್ದರು ಹಾಗೆಯೇ ಅದನ್ನು ಪಾಲಿಸುತ್ತಿದ್ದರು ಕೂಡ. ಅದುದರಿಂದ ಇದನ್ನು ಪಾಲಿಸಿದರೆ  ಅವರಿಗೆ ತಾವು ನೀಡುವ ಸೂಕ್ತ ಗೌರವ ಎನ್ನುವುದು ಇವರ ಅಭಿಪ್ರಾಯ. ಚಿರು ಅವರ ಧರ್ಮಪತ್ನಿ ನಟಿ ಮೇಘನಾ ರಾಜ್ ಅವರು ಕೂಡ ತಮ್ಮ ತೀರಲಾರದ ನೋವಿನ ಜೊತೆ ನಗುವನ್ನು ಮೂಡಿಸಿದ್ದಾರೆ. ಜೊತೆಗೆ ಭಾವನಾತ್ಮಕ ಬರಹಗಳನ್ನು ಕೂಡ ಇನ್ಸ್ಟಾಗ್ರಾಮ್ ವಾಲ್ ನಲ್ಲಿ ಬರೆದುಕೊಂಡಿದ್ದಾರೆ.  ‘ನನ್ನ ಪ್ರೀತಿಯ ಚಿರು, ಚಿರು ಒಂದು ಸಂಭ್ರಮ. ಯಾವಾಗಲೂ, ಈಗಲೂ ಮತ್ತು ಮುಂದೆಯೂ. ಬೇರೆ ಯಾವ ರೀತಿಯನ್ನು  ನೀನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ನಗಲು ಕಾರಣ ಚಿರು.

Advertisement

 

Advertisement
View this post on Instagram

 

My Dearest Chiru …. Chiru is a CELEBRATION… has always been, is and will always be… I know u wouldn’t have liked it any other way! Chiru,the reason i smile… what he has given me is most precious… MY FAMILY.. the JUST US… together we will always be for all eternity baby ma ❤️ and each day will be just the way u like it! Filled with Love, laughter, pranks, honesty and most importantly Togetherness ❤️ WE LOVE YOU BABY MA!

A post shared by Meghana Raj Sarja (@megsraj) on

ಆತ ನನಗೆ ನೀಡಿರುವುದು ಅತಿ ಅಮೂಲ್ಯವಾದ   ನನ್ನ ಕುಟುಂಬ. ನಾವು ಮಾತ್ರವೇ, ನಮ್ಮ ಶಾಶ್ವತ ಪ್ರೀತಿಗಾಗಿ ಎಲ್ಲರೂ ಎಂದಿಗೂ ಜೊತೆಯಾಗಿರುತ್ತೇವೆ. ನೀನು ಇಷ್ಟಪಟ್ಟಂತೆಯೇ ಪ್ರತಿದಿನವೂ ಇರಲಿದೆ. ಪ್ರೀತಿ, ನಗು, ತಮಾಷೆ, ಪ್ರಾಮಾಣಿಕತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜೊತೆಯಾಗಿರುವಿಕೆಯಿಂದ ಕೂಡಿರುತ್ತದೆ. ಲವ್ ಯೂ ಬೇಬಿ ಮಾ’ ಎಂದು ಮೇಘನಾ ಬರೆದಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿಯೂ  ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದು, ‘ಮೈ ಮಿಸ್ಟರ್ ಹಸ್ಬೆಂಡ್’ ಎಂದು ಹೂವಿನ ಅಲಂಕಾರದ ನಡುವೆ ಚಿರು ನಗುತ್ತಿರುವ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ.

Advertisement
Share this on...