ತನ್ನ ಎದೆ ಹಾಲು ಮಾರಿ ಎಷ್ಟು ಸಂಪಾದನೆ ಮಾಡಿದ್ದಾಳೆ ಗೊತ್ತಾ ? ಕೊಂಡುಕೊಳ್ಳುತ್ತಿರುವವರು ಯಾರು ತಿಳಿದರೆ ಬೆರಗಾಗುತ್ತೀರಾ!

in Uncategorized/ಕನ್ನಡ ಮಾಹಿತಿ 160 views

ತಾಯಿಯ ಎದೆಹಾಲು ಅತ್ಯಮೂಲ್ಯವಾದುದು. ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ತಾಯಿಯ ಎದೆಹಾಲನ್ನು ಉಣಿಸುವುದರಿಂದ ನಮ್ಮ ದೇಶದ ಶಿಶು ಮರಣ ಸಂಖ್ಯೆಯ ಪ್ರಮಾಣ ಶೇ 24 ರಷ್ಟು ಕಡಿಮೆಯಾಗುತ್ತದೆ. ತಾಯಿಯ ಎದೆಹಾಲಿನಲ್ಲಿಯೇ ಮಗುವಿಗೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳು ಇರುತ್ತವೆ. ಮಗು ಹುಟ್ಟಿದ ಮೂರು ದಿನದಲ್ಲಿ ತಾಯಿಯ ಎದೆ ಹಾಲು ಅತ್ಯಮೂಲ್ಯವಾಗಿರುತ್ತದೆ. ಆ ಹಾಲಿನಿಂದಲೇ ಮಗುವಿಗೆ ರೋಗ ನಿರೋಧಕ ಶಕ್ತಿಯು ದೊರೆಯುತ್ತದೆ. ಆದರೆ, ಕೆಲವು ಮೂಢನಂಬಿಕೆಗಳಿಂದ ಮಗುವಿಗೆ ತಾಯಿಯ ಎದೆಹಾಲು ದಕ್ಕದೆ ದೇಶದಲ್ಲಿ ಶಿಶು ಮರಣ ಪ್ರಮಾಣದ ಸಂಖ್ಯೆ ಹೆಚ್ಚುತ್ತಿದೆ.ತಾಯಿಯು ತನ್ನ ಎದೆ ಹಾಲನ್ನು ಮಗುವಿಗೆ ಆರು ತಿಂಗಳವರೆಗೂ ನೀಡಬೇಕು. ಆಗ, ಮಗುವಿಗೆ ಯಾವುದೇ ಬೇರೆ ಪದಾರ್ಥಗಳನ್ನು ನೀಡುವ ಅಗತ್ಯವಿಲ್ಲ. ತಾಯಿ ತನ್ನ ಎದೆಹಾಲಿನಿಂದಲೇ ಮಗುವಿಗೆ ಬೇಕಾದ ಎಲ್ಲ ಪೌಷ್ಟಿಕಾಂಶಗಳನ್ನು ಪೂರೈಸುತ್ತಾಳೆ. ಇದರಿಂದ ಶಿಶು ಮರಣ ಸಂಖ್ಯೆ ಶೇ 13 ರಷ್ಟು ಇಳಿಮುಖವಾಗುತ್ತದೆ. ತಾಯಿಯ ಹಾಲಿಗಿಂತ ಶ್ರೇಷ್ಠ ಮತ್ಯಾವುದು ಇಲ್ಲಾ ಆದರೆ ಇಲ್ಲಿ ಓರ್ವ ತಾಯಿ ತನ್ನ ಎದೆ ಹಾಲನ್ನೇ ಮಾರಿ ಎಷ್ಟು ಸಂಪಾದಿಸಿದ್ದಾಳೆ ಗೊತ್ತಾ? ಮುಂದೇ ಓದಿ..

Advertisement

Advertisement

ಸೈಪ್ರಸ್ ಎಂಬ ದೇಶದಲ್ಲಿ ರಾಫೆಲಾ ಲ್ಯಾಂಪ್ರೊ ಎಂಬ ತಾಯಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ಎಲ್ಲರಂತೆ ಆಕೆ ಕೂಡ ತನ್ನ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದರು. ಆನಂತರ ಅಗತ್ಯಕ್ಕಿಂತಲೂ ಹೆಚ್ಚು ಎದೆ ಹಾಲು ಉತ್ಪತ್ತಿಯಾಗುತ್ತಿರುವು ಆಕೆಗೆ ಗೊತ್ತಾಗಿದೆ. ಹಾಗಾಗಿ ತನ್ನ ಎದೆಯಲ್ಲಿ ಉತ್ಪತ್ತಿಯಾಗುತ್ತಿರುವ ಹೆಚ್ಚುವರಿ ಹಾಲನ್ನು ಕಡಿಮೆ ಇರುವ ತಾಯಂದಿರಿಗೆ ಕೊಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಬಾಡಿ ಬಿಲ್ಡರ್​ಗಳಿಂದ ಎದೆ ಹಾಲಿಗೆ ಬೇಡಿಕೆ ಬರಲು ಶುರುವಾಗುತ್ತದೆ .ತಾಯಿಯ ಎದೆಹಾಲಿನಲ್ಲಿ ಅತಿ ಹೆಚ್ಚು ಪೌಷ್ಠಿಕಾಂಶವಿರುವ ಕಾರ ಬಾಡಿ ಬಿಲ್ಡರ್​ಗಳು ರಾಫೆಲಾ ಬಳಿ ಹಣವನ್ನು ನೀಡಿ ಎದೆಹಾಲು ಖರೀದಿಸುತ್ತಿದ್ದರು. ಸಂಶೊಧನೆಯ ವರದಿಯ ಪ್ರಕಾರ ಬಾಲ್ಡಿ ಬಿಲ್ಡರ್​ಗಳು ಮಸಲ್ಸ್ ಬೆಳೆಸಲು ತಾಯಿಯ ಎದೆಹಾಲು ಉತ್ತಮವಂತೆ.ಹಾಗಾಗಿ ರಾಫೆಲಾ ತನ್ನ ಮಗುವಿಗೆ ಹಾಲು ನೀಡಿ ಅದಕ್ಕಿಂತ ಹೆಚ್ಚು ಉತ್ಪತ್ತಿಯಾದ ಹಾಲನ್ನು ಅವಶ್ಯಕತೆ ಇದ್ದವರಿಗೆ ಮಾರುತ್ತಿದ್ದರು.

Advertisement

Advertisement

ತಾಯಿ ರಾಫೆಲಾ ಇಲ್ಲಿವರೆಗೂ ಬರೋಬ್ಬರಿ 500 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದರಿಂದ ಅವರು ಒಟ್ಟಾರೆಯಾಗಿ 4 ಲಕ್ಷ ರೂಪಾಯಿಗೂ ಅಧಿಕ ಹಣ ಗಳಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement
Share this on...