ಈ ಸೂಪರ್ ಸ್ಟಾರ್ ಮನೆಯಲ್ಲಿದೆ ಬರೋಬ್ಬರಿ 114 ನಾಯಿಗಳು !

in ಮನರಂಜನೆ/ಸಿನಿಮಾ 127 views

ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಪ್ರಾಣಿಗಳ ಬಗ್ಗೆ ಮಾತನಾಡುವುದಾದರೆ ಮೊದಲು ಕೇಳಿ ಬರುವ ಹೆಸರು ನಾಯಿ. ಹೌದು, ನಾಯಿಗಳು ಅತ್ಯಂತ ನಿಷ್ಠಾವಂತ, ಪ್ರತಿಯೊಬ್ಬರ ಜೊತೆ ಬೆರೆಯುವ ನೆಚ್ಚಿನ ಪ್ರಾಣಿಗಳು. ನಾಯಿಗಳು ಶತಮಾನಗಳಿಂದಲೂ ಮಾನವರ ಜೊತೆ ನಿಕಟ ಸಂಬಂಧ ಹೊಂದಿವೆ. ಕೆಲವು ಜನರು ಸ್ವಾಭಾವಿಕವಾಗಿ ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ ಮಾಹಿತಿಯ ಪ್ರಕಾರ, ಬಹುತೇಕರು ಮನೆಯಲ್ಲಿ ಲ್ಯಾಬ್ರಡಾರ್, ಗೋಲ್ಡನ್ ರಿಟ್ರೈವರ್ ಮತ್ತು ಜರ್ಮನ್ ಶೆಫರ್ಡ್ ನಾಯಿಯನ್ನು ಸಾಕಲು ಬಯಸುತ್ತಾರೆ.  ಇಂದು, ನಾವು ಇಂತಹ ನಿಷ್ಠಾವಂತ ಪ್ರಾಣಿಯನ್ನು ಸಾಕಿದ ಒರ್ವ ನಟನ ಬಗ್ಗೆ ನಿಮಗೆ ಹೇಳಲಿದ್ದೇವೆ. ಅಂದಹಾಗೆ ಆ ನಟನ ಮನೆಯಲ್ಲಿರುವ ನಾಯಿಗಳು ಒಂದಲ್ಲ, ಎರಡಲ್ಲ ಬರೋಬ್ಬರಿ 114 ನಾಯಿಗಳಿವೆ. ಹೌದು, ಅವರ ಮನೆ ಕಾಯಲು ಕಾವಲುಗಾರರಾಗಿ ಸುಮಾರು 114 ನಾಯಿಗಳಿವೆ. ಈಗ ನಿಮಗೆ ಇಷ್ಟೊಂದು ನಾಯಿಗಳನ್ನು ಸಾಕಿದ ಆ ಸೂಪರ್ ಸ್ಟಾರ್ ಯಾರು? ಎಂಬ ಕುತೂಹಲ ಹೆಚ್ಚಾಗುತ್ತಿರಬೇಕು ಅಲ್ಲವೇ?, ಅವರು ಬೇರಾರೂ ಅಲ್ಲ, ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ.

Advertisement

Advertisement

ಅತ್ಯುತ್ತಮ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಮಿಥುನ್, ವೃತ್ತಿಜೀವನದಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
1976ರಲ್ಲಿ ‘ಮೃಗಯಾ’ ಎಂಬ ಚಿತ್ರದ ಮೂಲಕ ಮಿಥುನ್ ಚಕ್ರವರ್ತಿ ನಟನಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದರು. ಅದರಲ್ಲೂ 1982ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ‘ಡಿಸ್ಕೋ ಡ್ಯಾನ್ಸರ್’ ಚಿತ್ರದಲ್ಲಿ “ಜಿಮ್ಮಿ ಜಿಮ್ಮಿ…” ಎಂಬ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನೋಡಿ ಅಭಿಮಾನಿಗಳು ಫಿದಾ ಆದರು. ಒಟ್ಟಾರೆಯಾಗಿ ಚಕ್ರವರ್ತಿ 350ಕ್ಕೂ ಹೆಚ್ಚಿನ ಬಾಲಿವುಡ್ ಚಲನಚಿತ್ರಗಳು, ಅನೇಕ ಬೆಂಗಾಲಿ, ಒರಿಯಾ ಮತ್ತು ಭೋಜ್ಪುರಿ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

Advertisement

Advertisement

ಮಿಥುನ್ ಮೊನಾರ್ಕ್ ಗ್ರೂಪ್ ನ ಮಾಲೀಕತ್ವವನ್ನೂ ಹೊಂದಿದ್ದು, ಇದು ಅತಿಥಿ ಸತ್ಕಾರದ ವಲಯದಲ್ಲಿ ತೊಡಗಿಸಿಕೊಂಡಿದೆ. ಜೀ ಟಿವಿಯಲ್ಲಿ ಪ್ರಸಾರವಾಗುವ ಡಾನ್ಸ್ ಇಂಡಿಯಾ ಡಾನ್ಸ್ ಹಾಗೂ ಡಾನ್ಸ್ ಬಾಂಗ್ಲಾ ಡಾನ್ಸ್ ಪ್ರದರ್ಶನ ಕಾರ್ಯಕ್ರಮಗಳಲ್ಲಿಯೂ ಮಿಥುನ್ ಮಹಾತೀರ್ಪುಗಾರನಾಗಿದ್ದಾರೆ. ಇಂಡಿಯನ್ ಕ್ರಿಕೆಟ್ ಲೀಗ್ನ ಒಂದು ಕ್ರಿಕೆಟ್ ತಂಡವಾದ ರಾಯಲ್ ಬೆಂಗಾಲ್ ಟೈಗರ್ಸ್ನ ಸಹ-ಮಾಲೀಕನಾಗಿಯೂ ಮಿಥುನ್ ಚಕ್ರವರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. 1986ರಿಂದ 1987ರ ಅವಧಿಯವರೆಗೆ ಮಿಥುನ್ಗೆ ನಟಿ ಶ್ರೀದೇವಿಯೊಂದಿಗೆ ಸಂಬಂಧವಿತ್ತು. ಆದರೆ ತನ್ನ ಮೊದಲ ಪತ್ನಿಯಾದ ಯೋಗಿತಾ ಬಾಲಿಯಿಂದ ಮಿಥುನ್ ಇನ್ನೂ ವಿಚ್ಛೇದನವನ್ನು ಪಡೆದುಕೊಂಡಿಲ್ಲ ಎಂದು ಶ್ರೀದೇವಿಗೆ ಗೊತ್ತಾದ ಮೇಲೆ ಈ ಸಂಬಂಧ ಬ್ರೇಕ್ ಅಪ್ ಆಯಿತು ಎಂದು ಹಲವಾರು ಮೂಲಗಳು ಹೇಳುತ್ತವೆ.

Advertisement
Share this on...