ಮಿಥುನ ರಾಶಿ ಧಾರವಾಹಿ ಸುರಕ್ಷಾ ಅವರ ರಿಯಲ್ ಲೈಫ್ ಬಗ್ಗೆ ನಿಮಗೆ ಗೊತ್ತಾ ? ತಿಳಿದರೆ ಬೆರಗಾಗುತ್ತೀರಾ !

in ಮನರಂಜನೆ/ಸಿನಿಮಾ 524 views

ಕರುನಾಡು ಕಲೆಯ ತವರೂರು. ಅದೇಷ್ಟೋ ಮಂದಿ ಕಲೆಯನ್ನು ನಂಬಿಕೊಂಡು ಹುಟ್ಟಿದ ಜಾಗದಿಂದ ಏಕಾಂಗಿಯಾಗಿಯಾಗಿ ಬೆಂಗಳೂರು ಎಂಬ ಮಾಯಾನಗರಕ್ಕೆ ಬಂದು ಅವಕಾಶಕ್ಕಾಗಿ ಅಲೆದಾಡುತ್ತಾರೆ. ಇಲ್ಲಿ ಬಂದು ಗೆದ್ದು ಉಳಿದವರಿಗಿಂತ ಅಳಿದವರೆ ಜಾಸ್ತಿ. ಆದರೆ ಆತ್ಮಸ್ಥೈರ್ಯ, ಗುರಿ, ಪರಿಶ್ರಮ ಇವೆಲ್ಲವೂ ಇದ್ದರೆ ಕಲಾದೇವಿ ಎಂದಿಗೂ ನಮ್ಮನ್ನು ಬಿಡುವುದಿಲ್ಲ. ಈ ಕಲಾಲೋಕದಲ್ಲಿ ಕಲೆಯ ಜೊತೆ ಅದೃಷ್ಟವೂ ಬಹಳ ಮುಖ್ಯವಾಗಿರುತ್ತದೆ. ಕೆಲವರ ಅದೃಷ್ಟ ಚೆನ್ನಾಗಿದ್ದು, ಬಣ್ಣದ ಲೋಕಕ್ಕೆ ಕಾಲಿಟ್ಟ ಕೆಲವೇ ವರ್ಷದಲ್ಲಿ ಉತ್ತಂಗದ ಶಿಖರದಲ್ಲಿ ಕೂರುತ್ತಾರೆ. ಇನ್ನು ಕೆಲವರು ತಾವೂ ಕಲೆಯಲ್ಲಿ ಪರಿಣಿತರಾಗಿದ್ದರೂ ಅದೃಷ್ಟವೆಂಬುದು ಇಲ್ಲದೇ ಇದ್ದಾಗ, ವರ್ಷಾನು ವರ್ಷ ಸತತ ಪ್ರಯತ್ನ ಮಾಡಿ ಕಲಾದೇವಿಯನ್ನು ವರಿಸಿಕೊಳ್ಳುತ್ತಾರೆ. ಇನ್ನು ಹೆಣ್ಣುಮಕ್ಕಳಿಗೆ ಸಿನಿಮಾ ಹಾದಿ ಬಲು ಸುಲಭವೆಂಬ ಮಾತಿದೆ. ಆದರೇ ಅವರು ಕೂಡ ತಮ್ಮ ಹಾದಿಯನ್ನು ಸುಗಮ ಮಾಡಿ ಕೊಳ್ಳಲು ಪಟ್ಟ ಪರಿಶ್ರಮ, ಅನುಭವಿಸಿದ ಅವಮಾನ ಅವರಿಗೆ ಮಾತ್ರ ತಿಳಿದಿರುತ್ತದೆ. ಕಲೆಯನ್ನು ನಂಬಿಕೊಂಡ ಬಂದ ಅದೆಷ್ಟೋ ಯುವತಿಯರನನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಮಂದಿಯೇ ಹೆಚ್ಚು. ಆದರೆ ಇದೆಲ್ಲವನ್ನು ದಾಟಿ ನಿಲ್ಲುವರು ಮಾತ್ರ ಚಂದನವನದ ನಟಿ ಮಣಿಯರಾಗಿತ್ತಾರೆ ! ಪ್ರತಿಯೊಬ್ಬರಿಗೂ ಕೂಡ ತನ್ನ ನೆಚ್ಚಿನ ನಟನನ್ನು ನೋಡಬೇಕು, ಅವರ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ಇಲ್ಲೊಬ್ಬರು ತನ್ನ ನೆಚ್ಚಿನ ನಟನನ್ನು ನೋಡಿದ ಮೇಲೆ ತಾನು ಸಹ ನಟಿಯಾಗಬೇಕು ಎಂಬ ಆಸೆ ಚಿಗುರಿದೆ. ನಂತರ ಇವರು ನಟನೆಗೆ ಹೇಗೆ ಬಂದರು, ಅವಕಾಶಗಳು ಹೇಗೆ ದೊರಕಿತು ಎಂಬುದನ್ನು ತಿಳಿಯಲು ಮುಂದೇ ಓದಿ..

Advertisement

Advertisement

 

Advertisement

ಸುಂದರವಾದ ಮುದ್ದು ಮುಖ, ನಯನ ಮನೋಹರವಾದ ಕಣ್ಣಗಳು, ಬಳುಕುವ ನಡು, ಮುತ್ತುದುರುವಂತಹ ನಗು, ತೊಂಡೆಯಂತಹ ತುಟಿ, ತುಟಿಯ ಪಕ್ಕದಲ್ಲೊಂದು ಕಪ್ಪು ಮಚ್ಚೆ. ಅಭ್ಭಾ ಯಾವ ಬಟ್ಟೆ ಧರಿಸಿದರು ಚೆಂದುಳ್ಳಿ ಚೆಲುವೆಯಂತೆ ಕಾಣುವ ಈ ನಟಿಯ ಹೆಸರು ಪೂಜ. ಪೂಜ ಎಂದರೆ ಎಲ್ಲರಿಗೂ ತಿಳಿಯುವುದಿಲ್ಲ. ಸುರಕ್ಷ ಎಂದರೆ ಕಿರುತೆರೆ ಪ್ರಿಯರಿಗೆ ತಿಳಿಯುತ್ತದೆ. ಕಲರ್ಸ್ ವಾಹಿನಿಯೂ ತನ್ನ ಕಿರುತೆರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುಲು ವಿಭಿನ್ನ ಹಾಗೂ ವಿಶೇಷ ಕಥೆಗಳುಳ್ಳ ಧಾರಾವಾಹಿಯನ್ನು ನೀಡುತ್ತಾ ಬಂದಿದೆ ಈ ಸಾಲಿನಲ್ಲಿ ಮಿಥುನ ರಾಶಿ ಎಂಬ ಧಾರವಾಹಿಯೂ ಕೂಡ ಸೇರ್ಪಡೆಯಾಗಿದ್ದು, ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಜನರ ಮನಸ್ಸಿನಲ್ಲಿ ಪರಿಣಾಮ ಬೀರಿದ್ದು, ಸುರಕ್ಷಾ ಪಾತ್ರವೂ ಕೂಡ ವಿಶೇಷವಾಗಿ ಜನರಿಗೆ ಬಹಳ ಇಷ್ಟವಾಗಿದೆ. ಇನ್ನು ಸುರಕ್ಷಾ ಪಾತ್ರದಲ್ಲಿ ಅಭಿನಯಿಸುತ್ತಿರುವವರು ಇದೇ ಪೂಜ. ಕತ್ತಿಯಂತಹ ಕಣ್ಣುಗಳಿಂದ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುರಕ್ಷಾ ಅಲಿಯಾಸ್ ಪೂಜಾ ಅವರು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಈ ಪೂಜಾ ಅವರು ಯಾರೂ ಈ ಹಿಂದೆ ಯಾವ ಧಾರಾವಾಹಿ ಹಾಗೂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು ಎಂಬುವ ಇಂಟ್ರೆಸ್ಟಿಂಗ್ ಸುದ್ಧಿ ತಿಳಿದರೆ ಅಶ್ಚರ್ಯ ಪಡುತ್ತೀರಾ..

Advertisement

ನಟಿ ಪೂಜಾ ಅವರು ಮೂಲತಃ ಬಳ್ಳಾರಿಯವರು. ಮಧ್ಯಮವರ್ಗದ ಕುಟುಂಬದಲ್ಲಿ ಹಿರಿಯ ಮಗಳಾಗಿ ಜನಿಸಿದ ಅವರಿಗೆ ಮೂರು ಜನ ಕಿರಿಯ ಸಹೋದರಿಯರಿದ್ದಾರೆ. ಬಳ್ಳಾರಿಯಲ್ಲೇ ಡಿಪ್ಲೊಮಾ ಹಾಗೂ ಬಿ.ಇ ಮುಗಿಸಿರುವ ಇವರು ಎರಡು ಬಾರಿ ಹಾಕಿ ಆಟದಲ್ಲಿ ನ್ಯಾಷನಲ್ ತಲುಪಿದ್ದಾರೆ. ಆಕೆಗೆ ಚಿಕ್ಕ ವಯಸ್ಸಿನಿಂದಲೂ ಹಾಕಿ ಆಟದ ಮೇಲೆ ಒಲವು ಜಾಸ್ತಿ. ಈ ಆಟದಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂದು ಪಣತೊಟ್ಟು, ಆಟವನ್ನು ಕರಗತ ಮಾಡಿಕೊಂಡು ನ್ಯಾಷನಲ್ ತಲುಪಿದ್ದಾರೆ. ಇನ್ನು ಮನೆಯ ಅರ್ಥಿಕತೆಗೆ ತಂದೆಯ ಜೊತೆ ಕೈ ಜೋಡಿಸಿ ಮನೆಯ ಹಿರಿ ಮಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಸುಖ ಜೀವನ ನಡೆಸುತ್ತಿದ್ದ ಈ ನಟಿಯ ಜೀವನದಲ್ಲಿ ದೊಡ್ಡ ತಿರುವು ನೀಡಿದವರು ಗೋಲ್ಡನ್ ಸ್ಟಾರ್ ಗಣೇಶ್ ಅವರು.

ಮೊದಲಿಂದಲೂ ನಟ ಗಣೇಶ್ ಎಂದರೆ ಪೂಜ ಅವರಿಗೆ ಎಲ್ಲಿಲ್ಲದ ಪ್ರೀತಿ. ಜೀವನದಲ್ಲಿ ಒಮ್ಮೆಯಾದರು ಗಣೇಶ್ ಅವರನ್ನು ನೋಡಬೇಕೆಂಬ ಹಂಬಲ ಪೂಜಾ ಅವರ ಮನಸ್ಸಿನಲ್ಲಿತ್ತು. ಒಮ್ಮೆ ಪೂಜಾ ಅವರು ಹಾಕಿ ನ್ಯಾಶನಲ್ ಕ್ಯಾಂಪ್ ಇದ್ದ ಕಾರಣ ಮಾರ್ಚ್ ೧ ೨೦೧೭ ರಂದು ಬೆಂಗಳೂರಿಗೆ ಬಂದಿರುತ್ತಾರೆ. ಅಂದು ಇವರು ಕ್ಯಾಂಪ್ ನಲ್ಲಿದ್ದ ಪಕ್ಕದಲ್ಲೇ ಗಣೇಶ್ ಅಭಿನಯದ ಮುಗುಳುನಗೆ ಸಿನಿಮಾದ ಚಿತ್ರೀಕರಣ ನಡೆಯುತ್ತಿರುತ್ತದೆ. ಈ ವಿಚಾರ ತಿಳಿದ ಪೂಜಾ ಅವರು ನೆಚ್ಚಿನ ನಟನನ್ನು ನೋಡಲು ಸಂತಸದಿಂದ ತೆರಳುತ್ತಾರೆ.  ಗಣೇಶ್ ಅವರನ್ನು ಭೇಟಿ ಮಾಡಿ ಒಂದು ಫೋಟೋವನ್ನು ಕೂಡ ತೆಗೆದುಕೊಳ್ಳುತ್ತಾರೆ. ಈ ವೇಳೆ ಪೂಜಾ ಅವರು ಗಣೇಶ್ ಜೊತೆ ನೋಡಿದ ಮಂದಿ ನೀವೂ ಕಲಾವಿದರಾ ಎಂದು ಪ್ರಶ್ನಿಸುತ್ತಾರೆ. ಅಂದೇ ನೋಡಿ ಈಕೆಯ ಮನಸಲ್ಲಿ ತಾನು ಕೂಡ ನಟಿಯಾಗಬೇಕು ಎಂಬ ಕನಸು ಚಿಗುರುತ್ತದೆ. ಇನ್ನು ಕಾಕತಾಳಿಯ ಎಂಬಂತೆ ಈ ಘಟನೆ ನಡೆದ ಕೆಲವೇ ಕೆಲವು ತಿಂಗಳಲ್ಲಿ ಆಕೆಗೆ ಬಳ್ಳಾರಿಯಲ್ಲಿ ಆಡ್ ಶೂಟ್ ನಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಒಂದು ಕ್ಷಣ ಯೋಚನೆ ಮಾಡಿದ ಇವರು ಅದರಲ್ಲಿ ನಟಿಸಲು ಒಪ್ಪಿಗೆ ನೀಡುತ್ತಾರೆ. ಇದರಲ್ಲಿ ನಟಿಸಿದ ಮೇಲೆ ತಾನೂ ದೊಡ್ಡ ನಟಿಯಾಗಬೇಕೆಂಬ ಹಂಬಲ ಇನ್ನೂ ಜಾಸ್ತಿಯಾಗುತ್ತದೆ. ಸತತ ಒಂದು ವರುಷಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೋಟ್ ಹಾಗೂ ಕೆಲವೊಂದು ಡಬ್ ಸ್ಮಾಶ್ ಮಾಡುತ್ತ ನಿರತರಾಗಿದ್ದ ಈ ನಟಿ ಒಂದಿಷ್ಟು ಅಭಿಮಾನಿಗಳನ್ನು ಸಂಪಾದಿಸುತ್ತಾರೆ.

ನಂತರ ಆಕೆಗೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಕ್ರೈಂ ಸೀರೀಸ್ ನಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಸಿಕ್ಕಿದ ತಕ್ಷಣ ಏಕಾಂಗಿಯಾಗಿ ಬೆಂಗಳೂರಿಗೆ ಬಂದ ಪೂಜಾ ಒಬ್ಬರೆ ಬಾಡಿಗೆ ಮನೆ ಮಾಡಿ ನೆಲೆಯೂರಲು ನಿಶ್ಚಿಯಿಸುತ್ತಾರೆ. ನಂತರ ಅವರು ಶಾಂತಂ ಪಾಪಂ ನಲ್ಲಿ ನಟಿಸಿದ ಸಂಚಿಕೆ ಮಾರ್ಚ್ ೧ ೨೦೧೮ ರಂದು ಪ್ರಸಾರವಾಗುತ್ತದೆ. ಅಬ್ಭಾ ಎಂತಹ ಕಾಕತಾಳಿಯ ಅಲ್ಲವೇ ಗಣೇಶ್ ಅವರನ್ನು ಭೇಟಿ ಮಾಡಿದ ದಿನವೇ ಈಕೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಸಿನಿಮಾ ರಂಗದಲ್ಲಿ ಏನಾದರೂ ಮಾಡಿ ಅವಕಾಶ ಗಿಟ್ಟಿಸಿಕೊಳ್ಳಲೇ ಬೇಕು ಎಂದು ಛಲ ತೊಟ್ಟಿದ್ದ ಈ ನಟಿಗೆ ಶಶಾಂಕ್ ನಿರ್ದೇಶನದಲ್ಲಿ ಅಜಯ್ ರಾವ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ತಾಯಿಗೆ ತಕ್ಕ ಮಗ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರವೊಂದು ದೊರಕುತ್ತದೆ. ನಂತರ ಕೃಷ್ಣ  ಗಾರ್ಮೇಂಟ್ಸ್ ಎಂಬ ಸಿನಿಮಾದಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರೆ. ಅಬ್ಬಾ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ಒಬ್ಬಳೆ ಜೀವನ ನಡೆಸುತ್ತಾ ಅಂದುಕೊಂಡಿದನ್ನು ಮಾಡಲು ಈ ಎರಡು ಸಿನಿಮಾಗಳು ದಾರಿ ದೀಪದಂತೆ ಆಗುತ್ತದೆ.  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕರುನಾಡ ಮನೆ ಮಾತಾಗಿದ್ದ ನಟ ಚಂದನ್ ಅವರ ಜೊತೆ ಸರ್ವಮಂಗಳಮಾಂಗಲ್ಯೇ ಎಂಬ ಧಾರವಾಹಿಯಲ್ಲಿ ಅಭಿನಯಿಸುತ್ತಾರೆ. ಈ ಪಾತ್ರ ಅವರಿಗೆ ದೊಡ್ಡ ಅಡಿಪಾಯವನ್ನೇ ನೀಡುತ್ತದೆ.

ಇದೀಗ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನರಾಶಿ ಧಾರಾವಾಹಿಯಲ್ಲಿ ಸುರಕ್ಷಾ ಎಂಬ ಪಾತ್ರದಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿರುವ ಪೂಜ ಅವರನ್ನು ಎಲ್ಲರೂ ಸುರಕ್ಷಾ ಎಂದೇ ಗುರುತಿಸುತ್ತಿದ್ದಾರೆ. ಈ ಪಾತ್ರದಿಂದ ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಸದಾ ಇನ್ಸ್ಟಾಗ್ರಾಂ ನಲ್ಲಿ ಆಕ್ಟಿವ್ ಆಗಿರುವ ಈ ನಟಿ, ಹಾಟ್ ಹಾಗೂ ಗ್ಲಾಮರಸ್ ಲುಕ್ ಫೋಟೋಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಒಬ್ಬ ಮಹಿಳೆ ಏಕಾಂಗಿಯಾಗಿ ಬೆಂಗಳೂರು ಪಟ್ಟಣದಲ್ಲಿ ಬದುಕುವುದು ಎಷ್ಟು ಕಷ್ಟ ಎಂಬುದು ತಮಗೆ ತಿಳಿದಿರುತ್ತದೆ. ಅಂತಹುದರಲ್ಲಿ ಕನಸಿನ ಬೆನ್ನತ್ತಿ ಬಂದು, ಕನಸಿನ ಗುರಿಯನ್ನು ಮುಟ್ಟಲು ಒಂದೊಂದೆ ಮೆಟ್ಟಿಲೇರುತ್ತಿರುವ ಸುರಕ್ಷಾ ಅಲಿಯಾಸ್ ಪೂಜಾ ಅವರಿಗೆ ಸಿನಿಮಾ ರಂಗದಲ್ಲಿ ಆದಷ್ಟು ಬೇಗ ಇನ್ನೂ ಒಳ್ಳೆಯ ಪಾತ್ರ ಸಿಗಲಿ ಮತ್ತು ಗಣೇಶ್ ಅವರ ಜೊತೆ ನಟಿಸಲು ಅವಕಾಶ ಸಿಗಲಿ ಎಂದು ಆರೈಸೋಣ/

Advertisement
Share this on...