300 ವರ್ಷ ನಮ್ಮ ದೇಶ ಆಳಿದ ಕುಟುಂಬದ ಕೊನೆಯ ರಾಣಿ ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ…?

in ಕನ್ನಡ ಮಾಹಿತಿ 375 views

ನಮ್ಮ ದೇಶವನ್ನು ತುಂಬಾ ಜನ ರಾಜರು, ಮಹಾರಾಜರು ಆಳಿದ್ದಾರೆ. ಆದರೆ ನಂತರದ ಕಾಲದಲ್ಲಿ ರಾಜರು ಹೋದರು ರಾಜರ ಆಳ್ವಿಕೆಯು ಹೋಯಿತ್ತಾದರು ಅವರ ಚರಿತ್ರೆ, ಇತಿಹಾಸ ಮಾತ್ರ ಉಳಿದಿದೆ. ಭಾರತವನ್ನು ಸುಮಾರು ಮುನ್ನೂರು ವರ್ಷ ಆಳಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಭಾರತ ದೇಶವನ್ನು ಆಳಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು. 1526 ರಿಂದ 1857 ರವರೆಗೂ ನಮ್ಮ ದೇಶವನ್ನು ಆಳಿದರು. ಮೊಗಲ್ ರಾಜ್ಯ ಪತನದ ನಂತರ ಅವರ ವಂಶಸ್ಥರು ಎಲ್ಲಿಗೆ ಹೋದರು ಎಂದು ಗೊತ್ತಾಗಲಿಲ್ಲ. ಆದರೆ ಈಗ ಮೊಘಲ್ ವಂಶದ ಕೊನೆಯ ರಾಣಿಯಾಗಿದ್ದ ಸುಲ್ತಾನ್ ಬೇಗಂ ಎಲ್ಲಿದ್ದಾರೆ ಅನ್ನುವುದು ಗೊತ್ತಾಗಿದೆ.

Advertisement

Advertisement

ಸುಲ್ತಾನ್ ಬೇಗಂ ಅವರು ಮೊಗಲ್ ನ ಕೊನೆಯ ಪಟ್ಟಾಭಿಷೇಕದ ಪ್ರಿನ್ಸ್ ಮಿರ್ಜಾರವರ ಪತ್ನಿ. 1980ರಲ್ಲಿ ಪ್ರಿನ್ಸ್ ಮಿರ್ಜಾ ಸಾವನ್ನಪ್ಪಿದ ಮೇಲೆ ಸುಲ್ತಾನ್ ಬೇಗಂ ಅವರ ಜೀವನ ತುಂಬಾ ಕಷ್ಟಕರವಾಗಿ ಮಾರ್ಪಟಿತ್ತು. ಅವರ ಪೂರ್ವಿಕರು ಅರಮನೆಯಲ್ಲಿ ವೈಭವಯುತ್ತವಾಗಿ ವಾಸಿಸುತ್ತಿದ್ದರು. ಆದರೆ ರಾಣಿ ಸುಲ್ತಾನ್ ಬೇಗಂ ಮಾತ್ರ ಕಲ್ಕತ್ತಾದಲ್ಲಿ ಒಂದು ಸ್ಲಮ್ ನಲ್ಲಿ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಿನ್ಸ್ ಮಿರ್ಜಾರವರ ಮರಣದ ನಂತರ ಹೊಟ್ಟೆ ಪಾಡಿಗಾಗಿ ಆವರಾದಲ್ಲಿ ಒಂದು ಟೀ ಅಂಗಡಿ ಇಟ್ಟುಕೊಂಡಿದ್ದರು ಸುಲ್ತಾನ್ ಬೇಗಂ. ಆದರೆ ಟೀ ಅಂಗಡಿಯಲ್ಲಿ ಲಾಭ ಬರದ ಕಾರಣ ಅದನ್ನು ಮುಚ್ಚಿ ಈಗ ಟೈಲರಿಂಗ್ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.
ಸುಲ್ತಾನ್ ಬೇಗಂಗೆ ಐದು ಜನ ಹೆಣ್ಣು ಮಕ್ಕಳು ಹಾಗೂ ಒಂದು ಗಂಡು‌ ಮಗು.

Advertisement

Advertisement

ನನಗೆ ಪರಿಹಾರ ಕೊಡಬೇಕು ಎಂದು ರಾಜ್ಯ ಮತ್ತು ಕೇಂದ್ರದ ಕಚೇರಿಗಳಿಗೆ ಸುತ್ತಾಡಿದ ಸುಲ್ತಾನ್ ಬೇಗಂಗೆ ಕೊನೆಗೆ ಸಹಾಯ ಮಾಡಲು ಮುಂದಾದ ಸರ್ಕಾರ ತಿಂಗಳ 6.ಸಾವಿರ ಪಿಂಚಣಿ ಹಾಗೂ ಮೊಮ್ಮಗಳಿಗೆ ಉದ್ಯೋಗ ಕೊಟ್ಟಿದೆ. ಸುಲ್ತಾನ್ ಬೇಗಂ ಅವರ ಇತಿಹಾಸ ತಿಳಿದ ಸುತ್ತ-ಮುತ್ತಲಿನ ಜನ ಅವರಿಗೆ ಅಲ್ಪ-ಸ್ವಲ್ಪ ಸಹಾಯ ಮಾಡುತ್ತಿದ್ದಾರೆ. ಏನೇ ಆದರೂ ದೇಶವನ್ನು ಆಳಿದ ಕುಟುಂಬ ಮೂರು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವುದು ನೋವಿನ ಸಂಗತಿಯೇ. ಈಗ ಸರ್ಕಾರ ಸಹಾಯ ಹಸ್ತ ಚಾಚಿರುವುದರಿಂದ ಇನ್ನಾದರೂ ರಾಣಿ ಸುಲ್ತಾನ್ ಬೇಗಂ ರವರ ಜೀವನ ಸುಧಾರಿಸಲಿ ಎಂದು ಆಶಿಸೋಣ.

– ಸುಷ್ಮಿತಾ

Advertisement
Share this on...