‘ರಾತ್ರಿ ವೇಳೆ ನನಗೆ ನಿದ್ದೆ ಬರುತ್ತಿಲ್ಲ’ ಎಂದ ಈ ನಟಿಗೆ ನೆಟ್ಟಿಗರು ಕೊಟ್ಟ ಸಲಹೆ ಏನ್ ಗೊತ್ತಾ ?

in ಮನರಂಜನೆ 41 views

ಸಾಂಕ್ರಾಮಿಕ ರೋಗ ಕೋವಿಡ್ -19 ತನ್ನ ನಿದ್ರೆಯ ಮಾದರಿಯನ್ನು ಬದಲಾಯಿಸಿದೆ ಎಂದು ಬಾಲಿವುಡ್ ನಟಿ ಮೊನಿಷಾ ಕೊಯಿರಾಲ ಬುಧವಾರ ಟ್ವೀಟ್ ಮಾಡಿದ್ದಾರೆ. ಹೌದು, ಮಧ್ಯರಾತ್ರಿಯಲ್ಲಿ ಮೊನಿಷಾ ಕೊಯಿರಾಲ ಅವರಿಗೆ ಎಚ್ಚರವಾಗುತ್ತದೆಯಂತೆ. ಮೊನಿಷಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಈ ಸಾಂಕ್ರಾಮಿಕವು ನನ್ನ ನಿದ್ರೆಯ ಮಾದರಿಯನ್ನು ಬದಲಾಯಿಸಿದೆ. ಇತ್ತೀಚೆಗೆ ಮಧ್ಯರಾತ್ರಿಯ ನಂತರವೂ ನನಗೆ ನಿದ್ದೆ ಬರುವುದಿಲ್ಲ. ಮಗುವಿನಂತೆ ಎಚ್ಚರವಾಗಿರುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಮೊನಿಷಾ ಅವರು ಈ ಪೋಸ್ಟ್ ಮಾಡುತ್ತಿದ್ದಂತೆ ಅವರ ಅನೇಕ ಅನುಯಾಯಿಗಳು ಪ್ರತಿಕ್ರಿಯೆ ನೀಡಿದ್ದು, ಕೆಲವರು ಆಕೆಗೆ ಸಲಹೆ ಸಹ ನೀಡಿದ್ದಾರೆ. ಹಾಗೆಯೇ ಓರ್ವ ಅನುಯಾಯಿ, “ಈ ವಿಚಾರವನ್ನು ತನ್ನ ತಾಯಿಗೂ ಸ್ವಲ್ಪ ವಿವರಿಸಿ ಎಂದು ವಿನಂತಿಸಿಕೊಂಡಿದ್ದು, ಪ್ರತಿದಿನ ನಾನು ತಡವಾಗಿ ಮಲಗಿ ಎದ್ದೇಳುವುದರಿಂದ ತನ್ನ ತಾಯಿ ಗದರಿಸುತ್ತಾರೆ” ಎಂದಾಗ, “ತಡವಾಗಿ ಎಚ್ಚರಗೊಂಡಿದ್ದಕ್ಕಾಗಿ ತನಗೂ ತನ್ನ ತಾಯಿ ಗದರಿಸಿದ್ದಾರೆ” ಎಂದು ಮನೀಷಾ ಉತ್ತರಿಸಿದ್ದಾರೆ.

Advertisement

 

Advertisement

Advertisement

ಕೆಲವರು ಮೊನಿಷಾಗೆ ‘ಕೀಟೋ ಡಯಟ್’ನಲ್ಲಿದ್ದೀರಾ’? ಎಂದು ಕೇಳಿದ್ದಾರೆ. ಏಕೆಂದರೆ ಈ ಕಾರಣದಿಂದಾಗಿಯೂ ನಿದ್ರಾಹೀನತೆಯ ಸಂಭವಿಸುತ್ತದೆಯಂತೆ. ಆದರೆ ಈ ಪ್ರಶ್ನೆಗೆ ಮೊನಿಶಾ ‘ಖಂಡಿತ ಇಲ್ಲ’ ಎಂದು ಉತ್ತರಿಸಿದ್ದಾರೆ. ಲಾಕ್ ಡೌನ್ನ ನಂತರ ತಮ್ಮ ನಿದ್ರೆ ಕೂಡ ಹಾರಿಹೋಗಿದೆ ಎಂದು ಅನೇಕ ಬಳಕೆದಾರರು ಮೊನಿಶಾ ಜೊತೆ ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ಮೊನಿಶಾಗೆ ಒಳ್ಳೆಯ ನಿದ್ರೆಗೆ ಸಲಹೆ ಸೂಚನೆಗಳನ್ನು ಸಹ ನೀಡಿದ್ದಾರೆ. ಮೊನಿಷಾ ಕೊಯಿರಾಲ ನೇಪಾಳಿ ನಟಿಯಾದರೂ, ಅನೇಕ ಬಾಲಿವುಡ್ ಚಿತ್ರಗಳು ಸೇರಿದಂತೆ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದು, ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ.

Advertisement

ಸುಭಾಷ್ ಘಾಯ್ ನಿರ್ದೇಶನದ ಸೌದಾಗರ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಮೊನಿಶಾ ಅವರನ್ನು ನೋಡುವುದಕ್ಕೆ ಮಾಧುರಿ ದೀಕ್ಷಿತ್ ಹೋಲಿಕೆ ಬರುತ್ತಾರೆ ಎಂದು ಅನೇಕರು ಉಲ್ಲೇಖಿಸಿದ್ದಾರೆ. ಅಂದಹಾಗೆ ಮೊನಿಷಾ ಕೊಯಿರಾಲಾ ಅವರು “ಹೀಲ್ಡ್” ಎಂಬ ಪುಸ್ತಕವನ್ನು ಸಹ ಪ್ರಕಟಿಸಿದ್ದಾರೆ. ಹಲವು ವರ್ಷಗಳ ಹಿಂದೆ ಅಂಡಾಣು ಕ್ಯಾನ್ಸರ್ಗೆ ತುತ್ತಾಗಿದ್ದ ಮೊನಿಷಾ ಇದರಿಂದ ತಾನು ಹೇಗೆ ಹೊರಬಂದೆ ಎನ್ನುವುದನ್ನು ಈ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ

Advertisement
Share this on...