ಯುಗ ಪುರುಷ ಚಿತ್ರದ ಕಾಮಿನಿ ದೇವಿ ಈಗ ಹೇಗಿದ್ದಾರೆ ಗೊತ್ತಾ..?

in ಮನರಂಜನೆ/ಸಿನಿಮಾ 289 views

ಕ್ರೇಜಿ಼ಸ್ಟಾರ್ ರವಿಚಂದ್ರನ್ ರವರ ಯುಗಪುರುಷ ಚಿತ್ರ ಇಂದಿಗೂ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇನ್ನೂ ಆ ಚಿತ್ರದಲ್ಲಿ ಬರುವ ಕೇಳಿ ಪ್ರೇಮಿಗಳೆ ಎಂಬ ಹಾಡು ಅಂದಿನ ದಿನಗಳಲ್ಲಿ ಸಖತ್ ಫೇಮಸ್ ಆಗಿತ್ತು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿರುವ ಪ್ರೇಮಿಯನ್ನು ಆ ಚಿತ್ರದ ಪಾತ್ರದಲ್ಲಿನ ಕಾಮಿನಿ ದೇವಿ ಎಂಬ ಹೆಣ್ಣು ಆಸ್ತಿ ಮತ್ತು ಹಣಕ್ಕಾಗಿ ಪ್ರೀತಿಸುವಂತೆ ನಾಟಕವಾಡಿ ಮೋಸ ಮಾಡಿ ಕೊಲೆ ಮಾಡುತ್ತಾಳೆ. ಪ್ರೇಮಿಯನ್ನು ನಂಬಿಸಿ ಕೊಂದು ಮೋಸ ಮಾಡುವ ಪಾತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ಮೂನ್ ಮೂನ್ ಸೇನ್ ಮನೋಜ್ಞವಾಗಿ ಅಭಿನಯ ನೀಡಿದ್ದರು. ಇವರಲ್ಲದೆ ಇನ್ಯಾರು ಆ ಪಾತ್ರ ಮಾಡಲು ಸಾಧ್ಯವೇ ಇಲ್ಲ ಎಂಬಂತೆ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ನಟಿ ಮೂನ್ ಮೂನ್ ಸೇನ್ ರವರು 1950-60 ರ ದಶಕದಲ್ಲಿ ಹಿಂದಿ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಸುಚಿತ್ರ ಸೇನ್ ಅವರ ಮಗಳು. ಮೂನ್ ಮೂನ್ ಸೆನ್ ರವರು 28 ಮಾರ್ಚ್,1954 ರಂದು ಕಲ್ಕತ್ತಾದಲ್ಲಿ ಜನಿಸಿದರು.

Advertisement

Advertisement

ಮೂನ್ ಮೂನ್ ಸೆನ್ ರವರು ಕನ್ನಡದಲ್ಲಿ ಯುಗಪುರುಷ ಮಾತ್ರವಲ್ಲದೆ ವಿಷ್ಣುವರ್ಧನ್ ರವರ ‘ವೈಶಾಖದ ದಿನಗಳು’ ಚಿತ್ರದಲ್ಲಿ ಹಾಗೂ ಅನಂತ್ ನಾಗ್ ಅವರ ‘ಮಾಂಗಲ್ಯ ಬಂಧನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಟಿ ಮೂನ್ ಮೂನ್ ಸೇನ್ ರವರು ಹಿಂದಿ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಕನ್ನಡ ಈ ಎಲ್ಲಾ ಭಾಷೆಗಳಲ್ಲಿಯೂ ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ಸಹ ನಟಿಯಾಗಿ ನಟಿಸಿದ್ದಾರೆ. ಮೂನ್ ಮೂನ್ ಸೆನ್ ರವರ ‘ಸಿರಿವೆನ್ನೆಲಾ’ ಎಂಬ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಎಂದು ನಂದಿ ಅವಾರ್ಡ್ ಸಹ ದೊರಕಿತ್ತು. ಇವರು 2014ರಲ್ಲಿ ಬಾನುಕುರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತು ಲೋಕಸಭಾ ಸದಸ್ಯೆ ಸಹ ಆಗಿದ್ದರು.

Advertisement

Advertisement

ಸುಮಾರು 66 ವರ್ಷದ ವಯಸ್ಸಿನ ಮೂನ್ ಮೂನ್ ಸೆನ್ ರವರು ಇಂದಿಗೂ ಹಲವಾರು ಹಿಂದಿ ಹಾಗೂ ಬೆಂಗಾಲಿ ಸೀರಿಯಲ್ ಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿ ಮೂನ್ ಮೂನ್ ಸೇನ್ ರವರ ಪತಿ ಹೆಸರು ಭರತ್ ದೇವ್ ವರ್ಮ. ಪ್ರಸ್ತುತ ಮೂನ್ ಮೂನ್ ಸೇನ್ ರವರು ತಮ್ಮ ಪತಿ ಹಾಗೂ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆ ಕಲ್ಕತ್ತಾದಲ್ಲಿ ನೆಲೆಸಿದ್ದಾರೆ.

– ಸುಷ್ಮಿತಾ

Advertisement
Share this on...