ವಿಜ್ಞಾನದ ಈ ಪವಾಡದಿಂದಾಗಿ ನಾಲ್ಕು ವರ್ಷಗಳ ಹಿಂದೆ ನಿಧನಳಾದ ಮಗಳನ್ನು ಭೇಟಿಯಾದ ತಾಯಿ!!

in News 57 views

ಸತ್ತ ವ್ಯಕ್ತಿಯನ್ನು ಮತ್ತೆ ಯಾರಾದರೂ ಭೇಟಿಯಾಗಬಹುದೇ?, ಅದ್ಹೇಗೆ ಸಾಧ್ಯ?, ಅದೆಲ್ಲಾ ಅಸಾಧ್ಯದ ಮಾತು ಬಿಡಿ ಅಂತೀರಾ?, ಆದರೆ ವಿಜ್ಞಾನ ಈಗ ಇದನ್ನು ಸಾಧ್ಯವಾಗಿಸಿದೆ. ತಾಯಿಯೊಬ್ಬಳು ತನ್ನ ಮಗಳನ್ನು ವಿಜ್ಞಾನದ ‘ಪವಾಡ’ದೊಂದಿಗೆ ಮತ್ತೆ ಭೇಟಿಯಾಗಲು ಸಾಧ್ಯವಾಯಿತು. ಈ ವಿಚಿತ್ರ ಘಟನೆ ದಕ್ಷಿಣ ಕೊರಿಯಾದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದು, ‘ಮೀಟಿಂಗ್ ಯು’ ಎಂಬ ಟಿವಿ ಶೋ ಕಾರ್ಯಕ್ರಮದಲ್ಲಿ ತಾಯಿಗೆ ತನ್ನ ಮಗಳನ್ನು ವೈಜ್ಞಾನಿಕವಾಗಿ ಪರಿಚಯಿಸಲಾಯಿತು. ಈ ಸಮಯದಲ್ಲಿ ತಾಯಿ ತನ್ನ ಸತ್ತ ಮಗಳನ್ನು ಮುಟ್ಟಿದ್ದಲ್ಲದೆ, ಅವಳೊಂದಿಗೆ ಮಾತನಾಡಿದಳು. ಅವಳನ್ನು ತುಂಬಾ ಮುದ್ದಾಡಿದಳು. ಅಷ್ಟೇ ಅಲ್ಲ, ಮೃತ ಮಗಳು ಮತ್ತೆ ತಾಯಿಯನ್ನು ಭೇಟಿಯಾಗಲು ಬರುವುದಾಗಿ ತಾಯಿಗೆ ಭರವಸೆ ನೀಡಿದಳು.

Advertisement

 

Advertisement

Advertisement

 

Advertisement

ಮಾಧ್ಯಮ ವರದಿಗಳ ಪ್ರಕಾರ, ತಾಯಿಯ ಹೆಸರು ಜಾಂಗ್ ಜಿ-ಸುಂಗ್ ಮತ್ತು ಮೃತ ಮಗಳ ಹೆಸರು ನಿಯಾನ್. ಮಗಳು 4 ವರ್ಷಗಳ ಹಿಂದೆ 2016 ರಲ್ಲಿ ನಿಧನಳಾದಳು. ಆದರೆ ಇದೀಗ ವರ್ಚುವಲ್ ರಿಯಾಲಿಟಿ ಮೂಲಕ ಅವರಿಬ್ಬರು ಭೇಟಿಯಾಗಿದ್ದಾರೆ. ವರ್ಚುವಲ್ ರಿಯಾಲಿಟಿ ಎನ್ನುವುದು ಕಂಪ್ಯೂಟರ್ ಹಾರ್ಡ್ವೇರ್ ಪರಿಕರಗಳು ಮತ್ತು ಸಾಫ್ಟ್ವೇರ್ ಬಳಸಿ ರಚಿಸಲಾದ ಕೃತಕ ಪರಿಸರ ಅಥವಾ ದೃಶ್ಯವಾಗಿದೆ. ಈ ಕೃತಕ ಪರಿಸರ ಅಥವಾ ದೃಶ್ಯವನ್ನು ಎಲ್ಲವೂ ನಿಜವೆಂದು ತೋರುವ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.

 

 

ವರದಿಗಳ ಪ್ರಕಾರ, ಜಾಂಗ್ ಜಿ-ಸುಂಗ್ ಅವರ ಮಗಳು ನಿಯಾನ್ ಅವರ ದೇಹವನ್ನು ವರ್ಚುವಲ್ ರಿಯಾಲಿಟಿ ಮೂಲಕ ಪುನರ್ ನಿರ್ಮಿಸಲಾಯಿತು ಮತ್ತು ಅವಳು ಹೇಗೆ ಇದ್ದಳೋ ಹಾಗೆ ಕಾಣುವಂತೆ ಮಾಡಲಾಯಿತು. ನಂತರ, ‘ಮೀಟಿಂಗ್ ಯು’ ಎಂಬ ಟಿವಿ ಕಾರ್ಯಕ್ರಮದಲ್ಲಿ ಅವಳ ಧ್ವನಿಯನ್ನು ಬಿತ್ತರಿಸಿ, ಅವಳ ಮಾತನ್ನು ತಾಯಿಗೆ ತಿಳಿಸಲಾಯಿತು.

 

 

ಈ ಸಮಯದಲ್ಲಿ, ಜಾಂಗ್ ಜಿ-ಸುಂಗ್ ತನ್ನ ಮಗಳನ್ನು ನೋಡಿದ ತಕ್ಷಣ, ಹುಚ್ಚುಚ್ಚಾಗಿ ಅಳಲು ಪ್ರಾರಂಭಿಸಿದಳು, ಅವಳನ್ನು ಮುದ್ದಾಡಲು ಪ್ರಾರಂಭಿಸಿದಳು. ಈ ದೃಶ್ಯವನ್ನು ನೋಡಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ನಿಯಾನ್ ಅವರ ತಂದೆ ಮತ್ತು ಆಕೆಯ ಒಡಹುಟ್ಟಿದವರು ಸಹ ಅವಕ್ಕಾದರು.
ಆಗ ಈ ವಿಷಯವು ಇಡೀ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು.

 

 

ಸತ್ತ ವ್ಯಕ್ತಿಯನ್ನು ತನ್ನ ಕುಟುಂಬಕ್ಕೆ ಪರಿಚಯಿಸುವುದು ಸರಿಯಾಗಿದೆಯೇ?, ಏಕೆಂದರೆ ಅದು ಕುಟುಂಬದವರ ಮಾನಸಿಕ ಸ್ಥಿತಿಯನ್ನು ಕದಡುತ್ತದೆ. ಇದು ಅವರನ್ನು ಅಪಾಯಕ್ಕೆ ತಳ್ಳುತ್ತದೆ ಎಂದೆಲ್ಲಾ ಜನರು ಹೇಳಿದರು. ಆದರೆ ಸಸೆಕ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಬ್ಲೇ ವಿಟ್ಬಿ ಪ್ರಕಾರ, ಸತ್ತ ಮಗಳನ್ನು ಭೇಟಿಯಾಗುವುದರಿಂದ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ, ಆದರೆ ತಾಯಿಯು ಇದರಿಂದ ಸಂತೋಷವಾಗಿರಬಹುದು ಅಥವಾ ಸತ್ತ ಮಗಳನ್ನು ಇನ್ನಷ್ಟು ಮಿಸ್ ಮಾಡಿಕೊಳ್ಳಬಹುದು ಎಂದಷ್ಟೇ ಹೇಳಿದ್ದಾರೆ.

Advertisement
Share this on...