ಚಿತ್ರ ಮಂದಿರಗಳ ಸ್ಥಗಿತದಿಂದ ಯಾವ್ಯಾವ ಸಿನಿಮಾಗಳು ಮುಂದೂಡಲಾಗಿದೆ ಗೊತ್ತಾ?

in ಸಿನಿಮಾ 28 views

ಮಹಾಮಾರಿ ಕರೋನಾ ದಿಂದ ಇಡೀ ವಿಶ್ವವೇ ಬಳಲುತ್ತಿದ್ದು,ಭಾರತದಲ್ಲಿಯೂ ಕೂಡ ಇದರ ಶಮನಕ್ಕಾಗಿ ಸಂಪೂರ್ಣ ಲಾಕ್ ಡೌನ್ ಕೂಡ ಘೋಷಣೆ ಮಾಡಲಾಗಿದೆ.ಕಳೆದ ತಿಂಗಳು ೧೩ ರಿಂದ ಎಲ್ಲ ಚಿತ್ರಮಂದಿರಗಳು ಸ್ಥಗಿತವಾಗಿದ್ದು ತೆರೆಗೆ ಬರಲು ರೆಡಿಯಾಗಿದ್ದ ಹಲವು ಬಿಗ್ ಬಜೆಟ್ ಚಿತ್ರಗಳು ತಮ್ಮ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಬಿಟ್ಟಿದೆ . ಹಾಗಾದರೆ ಮುಂದಕ್ಕೆ ಹೋಗಿರುವ ಕನ್ನಡದ ಬಹು ನಿರೀಕ್ಷಿತ ಹಾಗೂ ಬಿಗ್ ಬಜೆಟ್ ಚಿತ್ರಗಳು ಯಾವುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ .

Advertisement

 

Advertisement

Advertisement

 

Advertisement

*ರಾಬರ್ಟ್
ಕನ್ನಡದಲ್ಲಿ ಡಿ ಬಾಸ್ ಎಂದೇ ಖ್ಯಾತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ರಾಬರ್ಟ್ ಸಿನಿಮಾ ಏಪ್ರಿಲ್ ೯ರಂದು ಬಿಡುಗಡೆಯಾಗಬೇಕಿತ್ತು. ಆದರೆ ಪ್ರಸ್ತುತ ಚಿತ್ರಮಂದಿರಗಳು ಸ್ಥಗಿತವಾದ ಕಾರಣ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಈ ಚಿತ್ರದಲ್ಲಿ ದರ್ಶನ್ ಎರಡಕ್ಕಿಂತ ಹೆಚ್ಚು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

 

 

*ಪೊಗರು
ಸುಮಾರು ಮೂರು ವರ್ಷಗಳಿಂದ ಚಿತ್ರೀಕರಣವನ್ನು ನಡೆಸುತ್ತಿರುವ ಪೊಗರು ಸಿನಿಮಾ ಹಲವು ಬಾರಿ ತಮ್ಮ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕುತ್ತಲೇ ಬಂದಿತ್ತು. ಆದರೆ ಚಿತ್ರತಂಡಗ ಏಪ್ರಲ್ ತಿಂಗಳಲ್ಲಿ ಬಿಡುಗಡೆ ಮಾಡುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗಿತ್ತು. ಆದರೆ ಸ್ಥಗಿತದಿಂದ ಮತ್ತೊಮ್ಮೆ ಈ ಚಿತ್ರದ ರಿಲಿಸ್ ಡೇಟ್ ಮುಂದೂಡಲಾಗಿದೆ.

 

 

*ಯುವರತ್ನ
ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ರಾಜಕುಮಾರ ಎಂಬ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದ ಹಿಟ್ ಕಂಡಿತ್ತು. ಇದೇ ಇವರಿಬ್ಬರ ಕಾಂಬಿನೇಷನ್ನಲ್ಲಿ ಯುವರತ್ನ ಎಂಬ ಸಿನಿಮಾ ತಯಾರಾಗಿದ್ದು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡುವ  ಎಲ್ಲ ರೀತಿಯ ಪ್ಲಾನ್ ಅನ್ನು ಚಿತ್ರತಂಡ ಮಾಡಿತ್ತು ಆದರೆ ಸದ್ಯಕ್ಕೆ ಚಿತ್ರದ ಬಿಡುಗಡೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.

 

 

*ಕೋಟಿಗೊಬ್ಬ ೩
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ ೩ ಚಿತ್ರ ಕೂಡ ಕಾರ್ಮಿಕರ ದಿನಾಚರಣೆ ದಿನವಾದ ಮೇ ಒಂದಕ್ಕೆ ತೆರೆಗೆ ಬರುವ ಸಿದ್ಧತೆ ಮಾಡಿಕೊಂಡಿತ್ತು.ಆದರೆ ಪ್ರಸ್ತುತ ಬದಲಾದ ಸಂದರ್ಭದಲ್ಲಿ ಈ ಚಿತ್ರ ಕೂಡ ಮುಂದೆ ಹೋಗುವ ಎಲ್ಲ ರೀತಿಯ ಸಂಭವವಿದೆ.

 

 

*ಏಕ್ ಲವ್ ಯಾ
ಕನ್ನಡದ ಸ್ಟಾರ್ ನಿರ್ದೇಶಕರಾದ ಜೋಗಿ ಪ್ರೇಮ್ ಅವರ ನಿರ್ದೇಶನದಲ್ಲಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಏಕ್ ಲವ್ ಯಾ ಸಿನಿಮಾ ಕೂಡ ಈಗಾಗಲೇ ಚಿತ್ರದ ಟ್ರೈಲರ್ ನ್ನು ಬಿಡುಗಡೆ ಮಾಡಿ ಒಳ್ಳೆಯ ನಿರೀಕ್ಷೆಯನ್ನು ಮೂಡಿಸಿತ್ತು. ಈ ಚಿತ್ರ ಕೂಡ ಏಪ್ರಿಲ್ ೧೪ ರಂದು ಬಿಡುಗಡೆಯಾಗಬೇಕಿದ್ದು, ಮುಂದಿನ ಬದಲಾವಣೆ ಯಾವಾಗ ಎಂದು ಕಾದು ನೋಡಬೇಕಾಗಿದೆ.

 

 

*ಮಾಸ್ಟರ್
ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ತಲಪತಿ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಕನ್ನಡ ಭಾಷೆಗೆ ಡಬ್ ಆಗಿ ಬಿಡುಗಡೆಯಾಗುವ ಸನಿಹದಲ್ಲಿತ್ತು. ಏಪ್ರಿಲ್ ೯ ರಂದು ತಮಿಳು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಮಾಸ್ಟರ್ ಸಿನಿಮಾ ಬಿಡುಗಡೆಯಾಗಬೇಕಿತ್ತು ಆದರೆ ಸದ್ಯಕ್ಕೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

 

 

*ಮರಕ್ಕಾರ್
ಮಲಯಾಳಂ ಚಿತ್ರದ ನಾಯಕ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ಬಹುಭಾಷಾ ಚಿತ್ರ ಮರಕ್ಕಾರ್ ಕೂಡ ಪಂಚಭಾಷೆಯಲ್ಲಿ ಮಾರ್ಚ್ ೨೭ ರಂದು ಬಿಡುಗಡೆಯಾಗಬೇಕಿತ್ತು ಆದರೆ ಚಿತ್ರ ಮಂದಿರಗಳ ಸ್ಥಗಿತದಿಂದ ಈ ಚಿತ್ರ ಕೂಡ ಮುಂದೂಡಲಾಗಿದೆ

Advertisement
Share this on...