ಲ್ಯುಕೇಮಿಯಾದಿಂದ ಬಳಲುತ್ತಿದ್ದ ಮಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ತಾಯಿ!

in Kannada News 19 views

ಲಾಕ್ ಡೌನ್ನಿಂದಾಗಿ ಇಡೀ ಜಗತ್ತು ಒಂದು ರೀತಿ ಸ್ತಬ್ಧವಾಗಿದೆ. ಹೊರಗಡೆ ಎಲ್ಲೂ ಓಡಾಡದೆ, ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಜನರು ಸಮಯ ಕಳೆಯಲು ವಿವಿಧ ಪ್ಲ್ಯಾನ್’ಗಳನ್ನು ಮಾಡುತ್ತಿದ್ದಾರೆ. ಕೆಲವರು ಅಡುಗೆ ಕಲಿಯುತ್ತಿದ್ದಾರೆ, ಇನ್ನು ಕೆಲವರು ಚಿತ್ರಕಲೆ, ನೃತ್ಯ, ಸಂಗೀತ ಹೀಗೆ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Advertisement

 

Advertisement

Advertisement

 

Advertisement

ಈ ಸಮಯದಲ್ಲಿ ಯಾರದಾದರೂ ಹುಟ್ಟುಹಬ್ಬ ಬಂತೆಂದರೆ ಜನರು ಅದನ್ನು ಕೂಡ ಬಹಳ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇದೇ ರೀತಿ ಬ್ರಿಟನ್ನಲ್ಲಿಯೂ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇಲ್ಲಿ ತಾಯಿ ಮಗಳ ಹುಟ್ಟುಹಬ್ಬವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದು, ಇದನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತಿದೆ.

 

 

ಅಂದಹಾಗೆ ಆ ಹುಟ್ಟುಹಬ್ಬ ಆಚರಿಸಿಕೊಂಡ ಹುಡುಗಿ ಹೆಸರು ಮಾಯಾ ಬ್ಲೂ. ಆಕೆಗೆ ಕೇವಲ ಎಂಟು ವರ್ಷ. ಮಾಯಾ ಲ್ಯುಕೇಮಿಯಾದಿಂದ ಬಳಲುತ್ತಿದ್ದಾರೆ. ಆದ್ದರಿಂದ ಲಾಕ್ಡೌನ್ನಲ್ಲಿ ಆಕೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಕನಿಷ್ಠ 12 ವಾರಗಳವರೆಗೆ ಮನೆಯಿಂದ ಹೊರಗೆ ಆಕೆಯನ್ನು ಕರೆದುಕೊಂಡು ಹೋಗುವ ಹಾಗಿಲ್ಲ. ವೈದ್ಯರ ಆಜ್ಞೆಯ ಮೇರೆಗೆ, ಮಾರ್ಚ್ 13 ರಿಂದ ಮಾಯಾ ಮನೆಯಲ್ಲೇ ಇದ್ದಾಳೆ.

 

 

ಇದೆಲ್ಲದರ ನಡುವೆ ಮಾಯಾ ಹುಟ್ಟುಹಬ್ಬದ ದಿನ ಬಂತು. ಇಂತಹ ಪರಿಸ್ಥಿತಿಯಲ್ಲಿ, ಅವರ 44 ವರ್ಷದ ತಾಯಿ ಮಗಳ ಜನ್ಮದಿನವನ್ನು ಆಚರಿಸಲು ಆನ್ಲೈನ್ ಪಾರ್ಟಿ ಮಾಡಿದರು. ಈ ಆನ್ಲೈನ್ ಪಾರ್ಟಿಯಲ್ಲಿ ಆಕೆಯ ಸ್ನೇಹಿತರು, ಸಂಬಂಧಿಕರು ಪಾಲ್ಗೊಂಡರು. ವಿಡಿಯೋ ಕಾಲ್ ಮೂಲಕ ಪ್ರತಿಯೊಬ್ಬರೂ ಮಾಯಾಳಿಗೆ ಅಭಿನಂದಿಸಿದರು. ಇಷ್ಟು ಮಾತ್ರವಲ್ಲ, ಅವರ ತಾಯಿ ಮಗಳ ಜನ್ಮದಿನವನ್ನು ವಿಶೇಷವಾಗಿಸಲು ವಾಮಾಚಾರದ ವಿಶೇಷ ಪ್ರದರ್ಶನವನ್ನು ಸಹ ಆಯೋಜಿಸಿದ್ದರು. ಇದನ್ನು ಎಲ್ಲರೂ ಒಟ್ಟಿಗೆ ನೋಡಿದರು. ಮಾಯಾ ಹುಟ್ಟುಹಬ್ಬದ ಸಂತೋಷಕೂಟದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರು ಭಾವುಕರಾಗುತ್ತಿದ್ದಾರೆ ಮತ್ತು ಹೊಗಳುತ್ತಿದ್ದಾರೆ.

Advertisement
Share this on...