ಮೈಸೂರಿನ ಅರಮನೆ ಕಾರುಗಳು ಯಾಕೆ ಎಲ್ಲಾ ಒಂದೇ ನಂಬರ್ ನಲ್ಲಿವೆ ಗೊತ್ತಾ…?

in ಕನ್ನಡ ಮಾಹಿತಿ 59 views

ದಸರಾ ಹಬ್ಬ ಬಂತು ಅಂದರೆ ಆಯುಧ ಪೂಜೆ ಹಿನ್ನಲೆ ಎಲ್ಲರೂ ಬೆಳಿಗ್ಗೆ ಬೇಗ ಎದ್ದು ತಮ್ಮ ವಾಹನಗಳನ್ನು ಶುಭ್ರಗೊಳಿಸಿ ಅದಕ್ಕೆ ಸಿಂಗರಿಸಿ ಪೂಜೆ ಮಾಡಿ ಸಂತಸ ಪಡುತ್ತಿವಿ. ಅದೇ ರೀತಿ ಮೈಸೂರಿನ ಅರಮನೆಯಲ್ಲೂ ಸಹ ರಾಜರು ಬಳಸಿದ ಶಸ್ತ್ರಾಸ್ತ್ರಗಳು, ಫಿರಂಗಿಗಳು ಮತ್ತು ಪಟ್ಟದ ಪ್ರಾಣಿಗಳಿಗೂ ವಿಶೇಷ ಪೂಜೆಯನ್ನ ಮಾಡಲಾಗುತ್ತದೆ. ಈ ಒಂದು ಸಂದರ್ಭದಲ್ಲಿ ಅರಮನೆಗೆ ಸೇರಿದ ಎಲ್ಲಾ ವಾಹನಗಳಿಗೂ 1953 ಇದೊಂದೇ ನಂಬರ್ ಇರುತ್ತೆ. ಅಂದರೆ ಅರಮನೆಗೆ ಸೇರಿದ ಪ್ರತಿಯೊಂದು ವಾಹನಗಳಿಗೂ ಇದೊಂದೆ ನಂಬರ್ ಇದೆ. ಇದು ಸಾಕಷ್ಟು ಜನರಿಗೆ ಕುತೂಹಲ ಸಹ ಮೂಡಿಸಿದೆ.

Advertisement

 

Advertisement

Advertisement

ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರಿಗೆ ಕಾರುಗಳ ಅತಿಯಾದ ವ್ಯಾಮೋಹವಿತ್ತು. ದುಬಾರಿ ಕಾರುಗಳನ್ನ ಖರೀದಿ ಮಾಡುವುದು ಅವರ ಹವ್ಯಾಸ ಕೂಡ ಆಗಿತ್ತು. ಅವರ ಬಳಿ ಬಿ ಎಂ ಡಬ್ಲ್ಯೂ ಕಾರಿನ ಎಲ್ಲಾ ಮಾಡೆಲ್ ಗಳು ಮತ್ತೆ ಮರ್ಸಿಡಿಸ್ ಬೆನ್ಸ್ ಸೇರಿದಂತೆ ಹಲವಾರು ಕಾರುಗಳು ಅವರ ಬಳಿ ಇತ್ತು. ಇನ್ನೊಂದು ಕುತೂಹಲದ ವಿಷಯವೆಂದರೆ ಈ ಎಲ್ಲಾ ಕಾರಿನ ಸಂಖ್ಯೆ 1953 ಇದೇ ನಂಬರ್ ಇತ್ತು. ಅಂದರೆ 1953ರಲ್ಲಿ ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಕಾರಣ ಅವರ ಕಾರಿನ ಸಂಖ್ಯೆಗಳು ಕೂಡ ಇದೇ ಆಗಿತ್ತು. ಜೊತೆಗೆ ಅವರು ಬಳಸುತ್ತಿದ್ದಂತಹ ದೂರವಾಣಿ ಸಂಖ್ಯೆ ಕೂಡ ಈ ನಂಬರ್ ಅನ್ನೆ ಒಳಗೊಂಡಿತ್ತು ಅನ್ನುವುದು ಇನ್ನೊಂದು ವಿಶೇಷ. 1953 ಅವರು ಹುಟ್ಟಿದ ವರ್ಷ ಆಗಿದ್ದರಿಂದ ಅರಮನೆಗೆ ಸೇರಿದ ಪ್ರತಿಯೊಂದು ಕಾರುಗಳು ಇದೆ ನಂಬರ್ ಅನ್ನ ಒಳಗೊಂಡಿದೆ.

Advertisement

– ಸುಷ್ಮಿತಾ

Advertisement
Share this on...