ನೀವು ಮೈಸೂರಿಗರಾ…ಆಗದರೆ ಈ ಸುದ್ದಿ ಓದಿ…ಕಣ್ಣಂಚು ಒದ್ದೆಯಾಗುವುದು ಗ್ಯಾರಂಟಿ…!

in ಕನ್ನಡ ಮಾಹಿತಿ/ಸಿನಿಮಾ 184 views

ಕೊರೊನಾ ಹಾವಳಿಯಿಂದ 3 ತಿಂಗಳಿಂದ ಥಿಯೇಟರ್​​ಗಳು ಬಂದ್ ಆಗಿವೆ. ಚಿತ್ರಮಂದಿರದ ಕಾರ್ಮಿಕರು ಬಹಳ ಕಷ್ಟ ಎದುರಿಸುತ್ತಿದ್ದಾರೆ. ಎಷ್ಟೊತ್ತಿಗೆ ಚಿತ್ರಮಂದಿರಗಳು ತೆರೆಯುವುದೋ ಎಂದು ಕಾರ್ಮಿಕರು ಕಾಯುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಬೆಂಗಳೂರಿನ ಬಹಳಷ್ಟು ಥಿಯೇಟರ್​​​ಗಳು ಮುಚ್ಚಿ ಆ ಸ್ಥಳದಲ್ಲಿ ಕಾಂಪ್ಲೆಕ್ಸ್, ಶಾಪಿಂಗ್ ಮಾಲ್ ತಲೆ ಎತ್ತಿವೆ.ಆಗಲೋ ಈಗಲೋ ಸರ್ಕಾರ ಚಿತ್ರಮಂದಿರ ತೆರೆಯಲು ಅನುಮತಿ ನೀಡುತ್ತದೆ ಎಂದು ಕಾದು ಕುಳಿತಿರುವ ಮೈಸೂರು ಚಿತ್ರಪ್ರೇಮಿಗಳಿಗೆ ಬೇಸರದ ಸುದ್ದಿ. ಮೈಸೂರಿನ ಎರಡು ಹಳೆದ ಖ್ಯಾತ ಚಿತ್ರಮಂದಿರಗಳು ಸಂಪೂರ್ಣ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಮೈಸೂರಿನಲ್ಲಿ ಈಗಾಗಲೇ ಅಪೇರ, ರಣಜಿತ್, ಶ್ಯಾಮ್​ಸುಂದರ್, ಗಣೇಶ, ಶಾಲಿಮಾರ್ ಚಿತ್ರಮಂದಿರಗಳು ಮುಚ್ಚಿವೆ. ಇದೀಗ ‘ಶಾಂತಲಾ’ ಹಾಗೂ ‘ಪದ್ಮ’ ಥಿಯೇಟರ್​​​​ಗಳು ಕೂಡಾ ಮುಚ್ಚುವ ಪರಿಸ್ಥಿತಿ ಉಂಟಾಗಿದೆ.

Advertisement

 

Advertisement

Advertisement

ಮೈಸೂರಿನ ಜನರಿಗೆ ಈ ಥಿಯೇಟರ್​​​ಗಳು ಬಹಳ ಚಿರಪರಿಚಿತ. ಯಾವ ಊರಿನವರಿಗಾದರೂ ಹುಟ್ಟಿ ಬೆಳೆದ ಜನರಿಗೆ ಒಂದೊಂದು ಸ್ಥಳದ ಮೇಲೆ ವ್ಯಾಮೋಹ ಇರುತ್ತದೆ. ಆದರೆ ಈಗ ತಾವು ಫ್ರೆಂಡ್ಸ್, ಫ್ಯಾಮಿಲಿ, ಲವರ್​​​​ ಜೊತೆ ಸಿನಿಮಾ ನೋಡುತ್ತಿದ್ದ ಚಿತ್ರಮಂದಿರ ಮುಚ್ಚುತ್ತಿದೆ ಎಂದರೆ ಕಣ್ಣಂಚು ಒದ್ದೆಯಾಗುವುದು ಗ್ಯಾರಂಟಿ.
ಕೊರೊನಾ ಹೊಡೆತದಿಂದ ಸುಮಾರು 3 ತಿಂಗಳಿಂದ ಲಾಭ ಇಲ್ಲ, ಕರೆಂಟ್ ಬಿಲ್, ಕಾರ್ಮಿಕರಿಗೆ ಸಂಬಳ, ಕಮರ್ಷಿಯಲ್ ಪ್ರಾಪರ್ಟಿ ಟ್ಯಾಕ್ಸ್​ ಎಲ್ಲಾ ಸಮಸ್ಯೆಗಳಿಂದ ಆರ್ಥಿಕ ಹೊರೆ ತಾಳಲಾರದೆ ಥಿಯೇಟರ್ ಮಾಲೀಕರು ಈ ಥಿಯೇಟರ್​​​​ಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Advertisement

‘ಪದ್ಮ’ ಸುಮಾರು 80 ವರ್ಷಕ್ಕೂ ಹಳೆಯ ಚಿತ್ರಮಂದಿರ. ಡಾ. ರಾಜ್​​ಕುಮಾರ್, ವಿಷ್ಣುವರ್ಧನ್ , ಅಂಬರೀಶ್, ಪ್ರಭಾಕರ್, ರವಿಚಂದ್ರನ್ ಅವರಂತ ನಾಯಕರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲಾ ಸಿನಿಮಾಗಳನ್ನು ಈ ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಬಳಿ ಇರುವ ‘ಪದ್ಮ’ ಇನ್ನು ನೆನಪು ಮಾತ್ರ.ಇನ್ನು ರಾಮಸ್ವಾಮಿ ಸರ್ಕಲ್ ಡಬಲ್ ರೋಡ್ ಬಳಿಯ ‘ಶಾಂತಲಾ’ ಚಿತ್ರಮಂದಿರ ಕೂಡಾ ಜನರಿಗೆ ಬಹಳ ಚಿರಪರಿಚಿತ. ಇನ್ನುಮುಂದೆ ಶಾಂತಲಾ ಚಿತ್ರಮಂದಿರದಲ್ಲಿ ನೀವು ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ. ಎಷ್ಟೋ ವರ್ಷಗಳಿಂದ ಜನರಿಗೆ ಮನರಂಜನೆ ನೀಡುತ್ತಿದ್ದ ಶಾಂತಲಾ ಕೂಡಾ ಇನ್ಮುಂದೆ ಶಾಶ್ವತವಾಗಿ ಮರೆಯಾಗುತ್ತಿದ್ದಾಳೆ.

ಮೈಸೂರಿನ ಜನತೆಗೆ ನಿಜಕ್ಕೂ ಇದು ಬೇಸರದ ಸಂಗತಿ. ‘ಶಾಂತಲಾ’ ಹಾಗೂ ‘ಪದ್ಮ’ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುತ್ತಿವೆ. ಇವೆರಡೂ ಚಿತ್ರಮಂದಿರಗಳು ಇತಿಹಾಸ ಸೇರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

Advertisement
Share this on...