ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸ್ಕೋಬೇಡಿ, ನಭಾಗೆ ಅಭಿಮಾನಿಗಳು ಹೀಗೆ ಹೇಳಿದ್ದೇಕೆ?

in ಮನರಂಜನೆ 43 views

ಸ್ಯಾಂಡಲ್’ವುಡ್ ಬ್ಯೂಟಿ ನಭಾ ನಟೇಶ್ ‘ನನ್ನು ದೋಚುಕುಂಡುವಾಟೆ’ ಚಿತ್ರದೊಂದಿಗೆ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಈ ಚಿತ್ರದ ನಟನೆಗಾಗಿ ಮೆಚ್ಚುಗೆ ಪಡೆದ ನಭಾ, ನಂತರ ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ, ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡರು. ನಭಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇ ತಡ ಅವರ ಫಾಲೋವರ್ಸ್ ಸಂಖ್ಯೆಯೂ ಡಬಲ್ ಆಯಿತು. ಎಷ್ಟರ ಮಟ್ಟಿಗೆ ಅಂದರೆ ನಭಾ ಇತ್ತೀಚಿನ ಚಿತ್ರ ‘ಡಿಸ್ಕೋ ರಾಜಾ’ ಹೇಳಿಕೊಳ್ಳುವಷ್ಟು ಯಶಸ್ಸು ಕಾಣದಿದ್ದರೂ ನಭಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

Advertisement

 

Advertisement


ಆದರೆ ಸಮಸ್ಯೆಯೆಂದರೆ, ಎಲ್ಲಾ ಚಿತ್ರಗಳಲ್ಲಿ ನಭಾ ಪಾತ್ರ, ಎಕ್ಸ್ ಪ್ರೆಶನ್ ಒಂದೇ ರೀತಿ ಇರುವುದರಿಂದ ಆ ವಿಷಯದಲ್ಲಿ ಅವರು ವಿಫಲರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಸೊಲೊ ಲೈಫಿ ಸೋ ಬೆಟರ್’ ಚಿತ್ರದ ಮೊದಲ ಸಿಂಗಲ್ನಲ್ಲಿಯೂ ಅವರು ಅದೇ ರೀತಿ ಪಾತ್ರ ಮಾಡಿದರು. ಗ್ಲಾಮರ್ ಶೋಗಿಂತ ಹೆಚ್ಚಾಗಿ ಅವರ ಅಭಿನಯದ ಮೇಲೆ ಕೆಲಸ ಮಾಡಲು ಇದೀಗ ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ. ಇಲ್ಲದಿದ್ದರೆ ನಭಾ ದೊಡ್ಡ ದೊಡ್ಡ ಅವಕಾಶಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ನಭಾ ಮೊದಲು ಕನ್ನಡದಲ್ಲಿ ಕೆಲವು ಚಲನಚಿತ್ರಗಳನ್ನು ಮಾಡಿದರೂ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Advertisement

 

Advertisement

ಅದಕ್ಕಾಗಿಯೇ ಅವರು ಟಾಲಿವುಡ್’ಗೆ ಬಂದರು. ಸಿನಿಮಾ ತಜ್ಞರ ಪ್ರಕಾರ ಅದೇ ತಪ್ಪು ಮತ್ತೆ ಮತ್ತೆ ಮಾಡುವುರಿಂದ ಅವರ ವೃತ್ತಿಜೀವನಕ್ಕೆ ಸಹಾಯಕವಾಗದಿರಬಹುದು. ಒಂದು ವೇಳೆ ಸಾಯಿ ಧರಮ್ ತೇಜ್ ಅವರ ಜೊತೆ ನಟಿಸುತ್ತಿರುವ ಚಿತ್ರ ವಿಫಲವಾದರೆ ನಭಾ ವೃತ್ತಿಜೀವನವು ತೀವ್ರ ತೊಂದರೆಗೆ ಸಿಲುಕುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಆದ್ದರಿಂದ ಮುಂದೆಯಾದರೂ ನಭಾ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರೆ ಯಶಸ್ಸು ಕಾಣಬಹುದು ಎಂಬುದು ಆಕೆಯ ಹಿತೈಷಿಗಳ ಆಶಯ.
ಬಲ್ಲ ಮೂಲಗಳ ಪ್ರಕಾರ ನಭಾ ನಟೇಶ್ ಹಣದ ಹಿಂದೆ ಬಿದ್ದು, ಚಿತ್ರಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ.

 

ಚಿತ್ರಗಳನ್ನು ಆಯ್ಕೆ ಮಾಡುವಾಗ ಸ್ಕ್ರಿಪ್ಟ್ ಮತ್ತು ಆಕೆಯ ಪಾತ್ರವನ್ನು ನೋಡುತ್ತಿಲ್ಲ ಎಂದು ವರದಿಯಾಗಿದೆ . ಕೇವಲ ಸಂಭಾವನೆಯ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದ್ದಾರೆ. ಅದಕ್ಕಾಗಿಯೇ ಇದುವರೆಗೂ ನಭಾಗೆ ಸ್ಟಾರ್ ಹೀರೋಗಳ ಜೊತೆ ಜೋಡಿಯಾಗಿ ನಟಿಸುವ ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಭಾ ತನ್ನ ಪಾತ್ರಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳುವ ಸಮಯ ಇದು ಎನ್ನುತ್ತಿದ್ದಾರೆ ಸಿನಿ ಪ್ರಿಯರು.

Advertisement
Share this on...