ವಜ್ರಕಾಯ ದ ನಭಾ ನಟೇಶ್ ಈಗ ಎಲ್ಲಿ ಬ್ಯುಸಿಯಾಗಿದ್ದಾರೆ ನೋಡಿ !

in ಮನರಂಜನೆ/ಸಿನಿಮಾ 73 views

2018 ರಲ್ಲಿ ಬಿಡುಗಡೆಯಾದ ‘ನನ್ನು ದೋಚುಕುಂಡುವಾಟೆ’ ಎಂಬ ರೊಮ್ಯಾಂಟಿಕ್ ಚಿತ್ರದಲ್ಲಿ ಸುಧೀರ್ ಬಾಬು ಜೊತೆ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಯಾಂಡಲ್ ವುಡ್ ಬ್ಯೂಟಿ ನಭಾ ನಟೇಶ್, ತಮ್ಮ ಅಭಿನಯ ಕೌಶಲ್ಯ, ನಟನೆ ಮತ್ತು ಮುದ್ದಾದ ನೋಟದಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.  ಚಿತ್ರರಂಗದ ಇತ್ತೀಚಿನ ಮಾಹಿತಿಗಳ ಪ್ರಕಾರ ಜೂನಿಯರ್ ಎನ್.ಟಿ.ಆರ್, ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಮುಂಬರುವ ಚಿತ್ರದಲ್ಲಿ ನಭಾ ನಟೇಶ್ ಅವರೊಂದಿಗೆ ನಟಿಸಲಿದ್ದಾರೆ. ತ್ರಿವಿಕ್ರಂ ಶ್ರೀನಿವಾಸ್ ಅವರ ಆಪ್ತ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್ ದ್ವಿಪಾತ್ರದಲ್ಲಿ ನಟಿಸುವ ನಿರೀಕ್ಷೆಯಿದೆ. ಒಂದು ಪಾತ್ರದಲ್ಲಿ ಅವರು ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲಂಗಾಣ ಉಚ್ಚಾರಣೆಯಲ್ಲಿ ಮಾತನಾಡುವ ಪಾತ್ರವನ್ನು ನಭಾ ನಟೇಶ್ ನಿರ್ವಹಿಸಲಿದ್ದಾರೆ. ಆದರೆ ಈ ಚಿತ್ರದಲ್ಲಿ ನಭಾ ನಟಿಸುವ ಬಗ್ಗೆ ಅಧಿಕೃತ ಪ್ರಕಟಣೆಗಾಗಿ ಕಾಯಬೇಕಿದೆಯಷ್ಟೇ.

Advertisement

 

Advertisement


ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಟಾಲಿವುಡ್ ಚಿತ್ರ ‘ಇಸ್ಮಾರ್ಟ್ ಶಂಕರ್’ ನಂತರ ನಭಾ ನಟೇಶ್ ಲಕ್ಕು ಬದಲಾಯಿತು. ನಭಾ ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ, ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ತಡ ಅವರ ಫಾಲೋವರ್ಸ್ ಸಂಖ್ಯೆಯೂ ಡಬಲ್ ಆಗಿದೆ. ಎಷ್ಟರ ಮಟ್ಟಿಗೆ ಅಂದರೆ ನಭಾ ಇತ್ತೀಚಿನ ಚಿತ್ರ ‘ಡಿಸ್ಕೋ ರಾಜಾ’ ಹೇಳಿಕೊಳ್ಳುವಷ್ಟು ಯಶಸ್ಸು ಕಾಣದಿದ್ದರೂ ನಭಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. 2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ವಜ್ರಕಾಯ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ನಭಾ ತಮ್ಮ ನಟನೆಯಿಂದ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ನಂತರ `ಲೀ’,`ಸಾಹೇಬ’ ಚಿತ್ರಗಳಲ್ಲಿ ನಟಿಸಿ, 2018 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು. ತೆಲುಗಿನ ‘ನನ್ನು ದೊಚುಕುಂಡವಟೆ’ ಮತ್ತು ‘ಅಧುಗೊ’ ಸಿನಿಮಾಗಳು ದೊಡ್ಡ ಯಶಸ್ಸು ತಂದುಕೊಡಲಿಲ್ಲ.

Advertisement

 

Advertisement

ಆದರೆ, ಕಳೆದ ವರ್ಷ ತೆರೆಕಂಡ ಅವರ ನಟನೆಯ ‘ಇಸ್ಮಾರ್ಟ್ ಶಂಕರ್’ ಚಿತ್ರ ದೊಡ್ಡ ದಾಖಲೆಯನ್ನೇ ಬರೆಯಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ರಾಮ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಈ ಸಿನಿಮಾ ಯಾವ ಮಟ್ಟದ ಬ್ರೇಕ್ ನೀಡಿತೋ, ಅದೇ ಥರ ನಭಾ ಪಾಲಿಗೂ ಅದೃಷ್ಟದ ಸಿನಿಮಾವಾಯ್ತು.
ಇದೀಗ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಭಾ ಬ್ಯುಸಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಡೌಟ್ ಇಲ್ಲ.

Advertisement
Share this on...