ಮದುವೆಯಾಗದೆ ಒಂಟಿಯಾಗಿ ಬದುಕುತ್ತಿರುವ ನಗ್ಮಾ…

in ಮನರಂಜನೆ/ಸಿನಿಮಾ 64 views

ತೊಂಬತ್ತರ ದಶಕದಲ್ಲಿ ಸಪ್ತ ಭಾಷೆಗಳಲ್ಲಿ ಎಲ್ಲಾ ಸ್ಟಾರ್ ನಟರುಗಳ ಜತೆ ನಾಯಕಿಯಾಗಿ ನಟಿಸಿದ ಕೀರ್ತಿ ಖ್ಯಾತಿ ನಟಿ ನಗ್ಮಾರವರಿಗೆ ಸಲ್ಲುತ್ತದೆ. ಎರಡು ದಶಕಗಳ ಕಾಲ ತೆಲುಗು ಚಿತ್ರರಂಗವನ್ನು ಆಳಿದ ನಟಿ . ಕನ್ನಡದಲ್ಲಿ  ಕುರುಬನ ರಾಣಿ, ಹೃದಯವಂತ , ರವಿಮಾಮ,  ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ಜನಪ್ರಿಯ ತಾರೆ ನಗ್ಮಾ .25 ಡಿಸೆಂಬರ್ 1974 ರಲ್ಲಿ ಮುಂಬೈನಲ್ಲಿ ಜನಿಸಿದ್ದರು . ಇವರ ನಿಜವಾದ ಹೆಸರು ನಂದಿತಾ ಅರವಿಂದ್ ಮೊರಾರ್ಜಿ. ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿ ಮಲಯಾಳಂ ಮರಾಠಿ ಬೆಂಗಾಲಿ ಭಾಷೆಗಳಲ್ಲೂ ಕೂಡ ಅಭಿನಯಿಸಿ ಜನ ಮನ್ನಣೆಯನ್ನು ಪಡೆದುಕೊಂಡಿದ್ದಾರೆ . ಹಿಂದಿ  ಸಿನಿಮಾದ ಮೂಲಕಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಯನ್ನು ಮಾಡಿದರು.  ಬಾಲಿವುಡ್ ಚಿತ್ರರಂಗದಲ್ಲಿ ಟಾಪ್ ಸ್ಟಾರ್ ನಟರಾದ ಅಕ್ಷಯ್ ಕುಮಾರ್,  ಸಲ್ಮಾನ್ ಖಾನ್,  ಅಜಯ್ ದೇವಗನ್ , ಮುಂತಾದ ನಟರುಗಳ ಜತೆ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್,  ವಿಷ್ಣುವರ್ಧನ್,  ರವಿಚಂದ್ರನ್,  ರವರ ಜೊತೆ ನಾಯಕಿಯಾಗಿ ಪರದೆ  ಹಂಚಿಕೊಂಡಿದ್ದಾರೆ.

Advertisement

Advertisement

ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಪಡ್ಡೆ  ಹುಡುಗರ ನಿದ್ದೆಗೆಡಿಸಿ  ಮಾದಕ ಮೋಹಕ ತಾರೆಯಾಗಿ ಮಿಂಚಿದ ನಗ್ಮಾ ಆ ನಂತರ ರಾಜಕೀಯ ಪ್ರವೇಶ ಮಾಡುತ್ತಾರೆ . ಇದುವರೆಗೆ ನಗ್ಮಾ ಅವರು ಮದುವೆಯಾಗಿಲ್ಲ. ಕೆಲವು ನಟರೊಂದಿಗೆ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು . ಈ ಸುದ್ದಿಗಳ ಬಗ್ಗೆ ನಗ್ಮಾ  ಪ್ರತಿಕ್ರಿಯೆ ಮಾಡಿರಲಿಲ್ಲ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ  ಈ ರೀತಿಯಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.  ನನಗೆ ದಾಂಪತ್ಯದಲ್ಲಿ ನಂಬಿಕೆ ಇದೇ ಸೂಕ್ತ ಸಮಯ ಬಂದಾಗ ಸುಕ್ತ  ವ್ಯಕ್ತಿ ಸಿಕ್ಕಿದಾಗ  ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ . ಸದ್ಯಕ್ಕೆ ನನ್ನ ಜೀವನದಲ್ಲಿ ಯಾವ ವ್ಯಕ್ತಿಯೂ ಇಲ್ಲ ಮದುವೆಯಾಗುವ ಸಂದರ್ಭದಲ್ಲಿ ಎಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲೇ  ಮದುವೆಯಾಗುತ್ತೇನೆ ಎಂಬುದಾಗಿ ಹೇಳಿದ್ದಾರೆ.

Advertisement

Advertisement

ಮಾಜಿ ಕ್ರಿಕೆಟಿಗ ಗಂಗೂಲಿ ಅವರ ಜೊತೆ ನಗ್ಮಾ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ವಿಷಯದ ಬಗ್ಗೆ ಮಾತನಾಡಿದ ನಗ್ಮಾ ಹೌದು ಈ ವಿಷಯ ನಿಜ ಎಂಬುದಾಗಿ ಸ್ಪಷ್ಟಪಡಿಸಿದರು . 2001 ರಲ್ಲಿ  ನಾನು ಮತ್ತು ಸೌರವ್ ಇಬ್ಬರೂ ಪ್ರೀತಿಸುತ್ತಿದ್ದೆವು . ಆದರೆ ನನ್ನಿಂದಾಗಿ ಸೌರವ್ ಅವರ ಕೆರಿಯರ್ ಹಾಳಾಗುತ್ತದೆ ಎಂಬ ಉದ್ದೇಶದಿಂದ ನಾನೇ ದೂರ ಸರಿಯಬೇಕಾಯಿತು ಎಂದು ಹೇಳಿಕೊಡುತ್ತಾರೆ. 47 ವರ್ಷಗಳಾದರೂ ಇನ್ನೂ ಮದುವೆಯಾಗದೇ ಒಂಟಿಯಾಗಿ ಬದುಕುತ್ತಿರುವ ನಗ್ಮಾ ರವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Advertisement
Share this on...