ನಮಿತಾ ನೃತ್ಯ ವೀಕ್ಷಿಸಲು ಸಾಕಷ್ಟು ಜನ ಸೇರಿದ್ದರೂ ನೋಡಲು ಸಾಧ್ಯವೇ ಆಗಲಿಲ್ಲ ಯಾಕೆ ಗೊತ್ತಾ ?

in ಮನರಂಜನೆ 349 views

ಜನರು ಸಾಮಾನ್ಯವಾಗಿ ರಾಜಕಾರಣಿಗಳಿಗಾಗಿ ದಿನವಿಡಿ ಕಾಯುತ್ತಿರುತ್ತಾರೆ ಆದರೆ ಇದಕ್ಕೆ ತದ್ವಿರುದ್ದ ಎಂಬಂತೆ ಒಂದು ಘಟನೆ ಊಟಿಯಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನ ಮಾದಕ ಬೆಡಗಿ ನಟಿ ನಮಿತಾ ಅವರ ನೃತ್ಯ ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಆದರೆ ವಿಶೇಷ ಏನಪ್ಪಾ ಎಂದರೆ, ತಮಿಳು ನಾಡು ರಾಜ್ಯದ ಖಾದಿ ಮಂಡಳಿ ಸಚಿವ ಕೆ ರಾಮಚಂದ್ರ ಅವರು ಕೂಡ ನಮಿತಾಗಾಗಿ ಕಾದು ಕುಳಿತ್ತಿದ್ದು, ಈ ಕಾರ್ಯಕ್ರಮಕ್ಕೆ ನಮಿತಾ 45 ನಿಮಿಷ ತಡವಾಗಿ ಬಂದರೂ ಕೂಡ ಒಂದುಚೂರು ಉಸಿರು ಬಿಡದೆ ಕುಳಿತಿದ್ದರು. ಕೇರಳ ರಾಜ್ಯದಲ್ಲಿ ಚಿನ್ನಾಭರಣದ ಅಂಗಡಿಯವರು ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸೇರಿದ್ದರು. ರಸ್ತೆ ಬದಿಯಲ್ಲೇ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ನಮಿತಾ ನಾಟ್ಯ ಮಾಡಲು ಒಪ್ಪಿದ್ದರು ಎಂಬ ಸುದ್ಧಿ ತಿಳಿಯುತ್ತಿದ್ದಂತೆ, ಪಡ್ಡೆ ಹುಡುಗರಿಂದ ಹಿಡಿದು ಮುದುಕರ ತನಕ ಎಲ್ಲರೂ ಕೂಡ ವೇದಿಕೆಯ ಬಳಿ ಬಂದು ನೆಲೆಸಿದ್ದರು. ಇನ್ನೇನು ನಮಿತಾರ ಡಿಂಗು ಡಾಂಗ್ ಸಾಂಗ್ ಶುರುವಾಗಬೇಕು ಅನ್ನುವಷ್ಟರಲ್ಲಿ ದಿಢೀರ್ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಪ್ರತ್ಯಕ್ಷವಾಗಿದ್ದಾರೆ.

Advertisement

 

Advertisement

Advertisement

ಯಾಕೆಂದರೆ ಪ್ರಾರಂಭದಲ್ಲಿ ಕಾರ್ಯಕ್ರಮಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಆದ ಕಾರಣ ಬೇಸರಗೊಂಡ ನಮಿತಾ, ಜಾಗ ಖಾಲಿ ಮಾಡಿದ್ದಾರೆ. ನಮಿತಾರಾ ಡಿಂಗು ಡಾಂಗ್ ಸಾಂಗ್ ನೋಡಲು ಬಂದಿದ್ದ ಸಾರ್ವಜನಿಕರು ಕೂಡ ನಿರಾಸೆಯಿಂದ ಚದುರಿ ಹೋಗಿದ್ದಾರೆ. ಇಷ್ಟಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೇಕೆ ಬಂದರು ?  ಅವರೇನು ದಾರಿ ತಪ್ಪಿ ಬಂದಿರಲಿಲ್ಲ. ಇನ್ನು ಅರಣ್ಯ ಇಲಾಖೆಯವರು ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಬರಲು ಮುಖ್ಯ ಕಾರಣವೇನೆಂದರೆ, ಈ ವೇದಿಕೆಯಲ್ಲಿ ಹಾವುಗಳನ್ನು ಬಳಸಲಾಗುತ್ತಿದೆ ಎಂದು ಯಾರೋ ಮಾಹಿತಿ ನೀಡಿದ್ದಾರೆ. ಈ ವಿಚಾರ ಅವರ ಕಿವಿಗೆ ಬಿದ್ದಿದ್ದೆ ತಡ, ಸೀದ ಅಯೋಜಿಸಿದ್ದ ಕಾರ್ಯಕ್ರಮದ ಬಳಿ ರವಾನಿಸಿದ್ದಾರೆ. ಸ್ಪಷ್ಟವಾದ ಮತ್ತು ನಿಖರವಾದ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದ್ದರು, ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ಹಾವು ಸಿಕ್ಕಿಲ್ಲ. ಆದ ಕಾರಣ ಅವರೂ  ನಿರಾಶರಾಗಿ ಹಿಂತಿರುಗಿದ್ದಾರೆ.

Advertisement

ಆದರೆ ಪ್ರತ್ಯಕ್ಷವಾಗಿ ಕಂಡವರು ಹೇಳುವುದೇನೆಂದರೆ ನಮಿತಾ ಅವರು ಡ್ಯಾನ್ಸ್ ಮಾಡಬೇಕಿದ್ದ ಹಾಡಿಗಾಗಿ ಹಾವುಗಳನ್ನು ತರಿಸಲಾಗಿತ್ತು, ಆದರೆ ಅರಣ್ಯ ಇಲಾಖೆ ಬರುತ್ತಿದ್ದಂತೆ ಅವರು ಹೇಗೋ ಹಾವಿನ ಜೊತೆ ಮಾಯವಾಗಿದ್ದಾರೆ . ಇತ್ತ ಹಾವು ಇಲ್ಲ ಅತ್ತ ನಮಿತಾಳೂ ಇಲ್ಲ. ಒಟ್ಟಾರೆ ಡ್ಯಾನ್ಸ್ ನೋಡಲು ಬಂದಿದ್ದ ಸಚಿವ ಕೆ ರಾಮಚಂದ್ರ ಹಾಗೂ ಜನ ಸಾಮಾನ್ಯರಿಗೆ ಮಾದಕ ಬೆಡಗಿಯ ಡಿಂಗು ಡಾಂಗು ನೋಡಲು ಸಾಧ್ಯವೇ ಆಗಲಿಲ್ಲ..

Advertisement
Share this on...