ಪ್ರತಿದಿನ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡುವುದರೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದರೆ ಏನೋ ಒಂದು ರೀತಿ ಮನಸ್ಸಿಗೆ ಶಾಂತಿ ಸಿಗುತ್ತದೆ. ವಾರಕ್ಕೆ 2-3 ಬಾರಿ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗಿ ಇಷ್ಟದೇವತೆ ದರ್ಶನ ಮಾಡುವುದರ ಜೊತೆಗೆ ತಿರುಪತಿ, ಮಂತ್ರಾಲಯ, ಶಿರಡಿ, ಕಠೀಲು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಎಂದು ದೂರದ ಪುಣ್ಯಕ್ಷೇತ್ರಗಳಿಗೆ ಕೂಡಾ ಹೋಗಿ ಬರುತ್ತೇವೆ. ಆದರೆ ದೇವಸ್ಥಾನಕ್ಕೆ ಸುಮ್ಮನೆ ಹೋಗುವುದಲ್ಲ, ಅಲ್ಲಿಗೆ ಹೋದಾಗ ಕೂಡಾ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಿರುತ್ತದೆ. ದೇವಸ್ಥಾನಕ್ಕೆ ಹೋದಾಗ ಮನಸ್ಸು, ಜ್ಞಾನ, ದೇಹ ಮೂರೂ ಶುದ್ಧವಾಗಿದ್ದರೆ ಅಷ್ಟು ದೂರು ಹೋಗಿದ್ದೂ ಸಾರ್ಥಕ ಎನ್ನಿಸುತ್ತದೆ. ದೇವರ ದರ್ಶನ ಪಡೆದುಬಂದ ಕೂಡಲೇ ಸಮ’ಸ್ಯೆಗಳು ಪರಿಹಾರವಾಗುತ್ತವೆ ಎಂದು ಕೆಲವರು ಭಾವಿಸುವುದುಂಟು. ಆದರೆ ಇದು ತಪ್ಪು. ಗಂಟಾನುಗಟ್ಟಲೆ ಪ್ರಯಾಣ ಮಾಡಿ, ಅರ್ಧ ಗಂಟೆ ಅಥವಾ ಒಂದು ಗಂಟೆಯಲ್ಲಿ ದೇವರ ದರ್ಶನ ಮಾಡಿ ಪ್ರಸಾದ ತಿಂದು ಬಂದರೆ ನಿಮ್ಮ ತೊಂದರೆ ಕಡಿಮೆಯಾಗುವುದಿಲ್ಲ.
ದೇವರ ದರ್ಶನಕ್ಕೆ ನಾವು ಹೋಗಬೇಕೆಂದರೆ ಅಲ್ಲಿ ಮೂರು ದರ್ಶನ ಆಗಬೇಕು. ಮುಂಜಾನೆಯ ಅಭಿಷೇಕ, ಮಧ್ಯಾಹ್ನದ ನೈವೇದ್ಯದ ದರ್ಶನ ಹಾಗೂ ಸಂಜೆಯ ಆರತಿ ಈ ಮೂರೂ ಸಮಯದಲ್ಲಿ ದೇವರ ದರ್ಶನ ಮಾಡಿ, ದೇವರ ಸನ್ನಿಧಿಯಲ್ಲಿ ಕುಳಿತು ಸಂಕಲ್ಪ ಮಾಡಿಕೊಂಡರೆ ನಿಮ್ಮ ಸಕಲ ಸಮ’ಸ್ಯೆಗಳು ದೂರಾಗುತ್ತದೆ. ಇದನ್ನು ಹೊರತುಪಡಿಸಿ ಜಾಲಿ ಟ್ರಿಪ್ ಹೋದಂತೆ ಹೊಟ್ಟೆ ತುಂಬಾ ತಿಂದು, ಮನಸ್ಸಿಲ್ಲದ ಮನಸ್ಸಿನಿಂದ ಯಾವ ದೇವಸ್ಥಾನಕ್ಕೆ ಹೋದರೂ ನಿಮಗೆ ಕ’ಷ್ಟಗಳು ನಿವಾರಣೆಯಾಗುವ ಬದಲು ಮತ್ತಷ್ಟು ಕ’ಷ್ಟಗಳು ಕಾಡುವುದು ಖಂಡಿತ. ಇನ್ನೂ ಕೆಲವರು ಅಮವಾಸ್ಯೆ ಅಥವಾ ಹುಣ್ಣಿಮೆಯಂದು ಕೆಲವೊಂದು ದೇವಸ್ಥಾನಕ್ಕೆ ತೆರಳಿ ಪ್ರಾಣಿಗಳನ್ನು ಬಲಿ ನೀಡಿ, ಅಲ್ಲೇ ಅಡುಗೆ ಮಾಡಿ ತಿಂದು, ಕುಡಿದು ಬರುತ್ತಾರೆ. ಆದರೆ ಈ ರೀತಿ ಮಾಡಿದರೆ ಎಂದಿಗೂ ನೀವು ಸಮ’ಸ್ಯೆಗಳಿಂದ ಹೊರಬರಲು ಸಾಧ್ಯವೇ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಪತಿ-ಪತ್ನಿ ಜೊತೆಯಾಗಿ ದೇವರ ದರ್ಶನಕ್ಕೆ ಹೋದಾಗ ಅಂತಹ ಪುಣ್ಯಕ್ಷೇತ್ರಗಳಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಬಹಳ ಪರಿಶುದ್ಧರಾಗಿರಬೇಕು. ಮಡಿಯಿಂದ ಇರಬೇಕು. ಮನಸ್ಸಿನಲ್ಲಿ ದೇವರ ಸ್ಮರಣೆ ಬಿಟ್ಟು ಮಹಿಳೆಯು ಪುರುಷನನ್ನು ಅಥವಾ, ಪುರುಷರು ಮಹಿಳೆಯರನ್ನು ಬೇರೆ ದೃಷ್ಟಿಯಿಂದ ನೋಡಬಾರದು. ದೇವರ ಮುಂದೆ ನಿಂತಾಗಲೂ ದೇವರ ಧ್ಯಾನದಲ್ಲಿ ಮಗ್ನರಾಗಿರಬೇಕು. ಎಷ್ಟು ಬೇಗ ಮಂಗಳಾರತಿ ಮುಗಿಯುವುದೋ, ಎಷ್ಟು ಬೇಗ ಪ್ರಸಾದ ದೊರೆಯುವುದೋ, ನಮ್ಮ ಚಪ್ಪಲಿ ಎಲ್ಲಿ ಕಳೆದುಹೋಗುವುದೋ ಎಂಬುದನ್ನು ಮನಸ್ಸಿನಲ್ಲಿ ಯೋಚಿಸುತ್ತಾ ನಿಂತರೆ ನೀವು ಅಲ್ಲಿ ಹೋದರೂ ಪ್ರಯೋಜನವಿಲ್ಲ.
ಭಗವಂತನ ಅನುಗ್ರಹ ಬೇಕೆಂದರೆ ಮದ್ಯ, ಮಾಂಸ ಅಥವಾ ಇನ್ನಿತರ ವಿಚಾರಗಳಿಗೆ ಆಸ್ಪದ ನೀಡಬೇಡಿ, ನದಿಯಲ್ಲಿ ಸ್ನಾನ ಮಾಡುವಾಗ ಬಟ್ಟೆಗಳನ್ನು ಬಿಡುವುದು, ಸೋಪು, ಶ್ಯಾಂಪೂ ಪ್ಯಾಕೆಟ್ಗಳನ್ನು ಎಸೆದು ಕಲುಷಿತ ಮಾಡುವುದು, ಬಟ್ಟೆ ಒಗೆಯುವುದು ಮಾಡಬೇಡಿ. ನಿಮ್ಮಿಂದ ದೇವಸ್ಥಾನ ಅಶುದ್ಧವಾಗುವುದು ಬೇಡ. ತಪ್ಪದೆ ಈ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ಖಂಡಿತ ನಿಮ್ಮ ಎಲ್ಲಾ ಸಂಕ’ಷ್ಟಗಳು ದೂರಾಗಿ ಜೀವನದಲ್ಲಿ ಸುಖ-ಸಂತೋಷ ನೆಲೆಸುತ್ತದೆ.