‘ಮನೆಯೇ ಮಂತ್ರಾಲಯ ಮನಸೇ ದೇವಾಲಯ’ ಎಂಬ ಮಾತಿದೆ. ಮನೆ ಎಂದರೆ ಹೆಸರಿಗೆ ಅದು ಕೇವಲ ಮನೆ ಮಾತ್ರವಲ್ಲ. ಅದು ದೇವಸ್ಥಾನವಿದ್ದಂತೆ. ಆದ್ದರಿಂದಲೇ ಮನೆ ಕಟ್ಟಿಸುವಾಗ ಎಲ್ಲರೂ ಆಯಾ ಕೋಣೆಗಳು ಯಾವ ಜಾಗದಲ್ಲಿ ಬರಬೇಕು ಎಂದು ವಾಸ್ತು ನೋಡಿ ಮನೆ ಕಟ್ಟಿಸುತ್ತಾರೆ. ಇನ್ನು ಮನೆಯ ಗೃಹಲಕ್ಷ್ಮಿ ಎನಿಸಿದ ತಾಯಾಗಲೀ, ಪತ್ನಿ ಆಗಲಿ ಹೆಚ್ಚು ಸಮಯ ಕಳೆಯುವುದು ಅಡುಗೆ ಮನೆಯಲ್ಲಿ. ಬಹುತೇಕ ಅಡುಗೆ ಮನೆಗಳು ಆಗ್ನೇಯ ಮೂಲೆಯಲ್ಲಿರುತ್ತದೆ. ಇದನ್ನು ಅಗ್ನಿ ಮೂಲೆ ಎಂದೂ ಕರೆಯಲಾಗುತ್ತದೆ. ಆದರೆ ಗೃಹಿಣಿಯು ಪದೇ ಪದೆ ಆರೋಗ್ಯಕ್ಕೀಡಾಗುವುದು, ಅತ್ತೆ-ಸೊಸೆ ನಡುವೆ ಕ’ಲಹ ಬರುವುದು , ಮನೆಯಲ್ಲಿ ಗೊಂ’ದಲ, ಎಲ್ಲಾ ವಿಚಾರಕ್ಕೂ ಅಸಮಾಧಾನ ಇದೆ ಎಂದರೆ ಇದಕ್ಕೆ ಪ್ರಮುಖ ಕಾರಣ ಅದೇ ಆಗ್ನೇಯ ದಿಕ್ಕು. ಈ ದಿಕ್ಕಿನಲ್ಲಿ ಏನಾದರೂ ಲೋಪ, ದೋ’ಷವಿದ್ದರೆ ಗೃಹಿಣಿಯರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಬಹಳ ಮುಖ್ಯವಾಗಿ ಆಗ್ನೇಯ ದಿಕ್ಕಿನ ವಾಸ್ತು ಮನೆ ಕಟ್ಟುವ ಚೌಕಟ್ಟನ್ನು ಮೀರಿ ಹೋಗಬಾರದು, ಯಾವುದೇ ಕಾರಣಕ್ಕೂ ಓರೆಯಾಗಿರಬಾರದು, ತ್ರಿಕೋನದಲ್ಲಿರಬಾರದು. ಆಗ್ನೇಯ ಮೂಲೆ ನಿಮ್ಮನ್ನು, ಮನೆಯನ್ನು, ದುಷ್ಟಶಕ್ತಿ, ಕಂಠಕಗಳನ್ನು ನಾಶ ಮಾಡುವಂತಹ ಶಕ್ತಿ ಹೊಂದಿರುವಂತ ದಿಕ್ಕು. ಅಗ್ನಿ ಇರುವ ಸ್ಥಳದಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ. ಆದ್ದರಿಂದ ಮನೆ ಕಟ್ಟುವಾಗ ಆಗ್ನೇಯ ದಿಕ್ಕಿಗೆ ಬಹಳ ಪ್ರಾಮುಖ್ಯತೆ ನೀಡಬೇಕು. ಇಲ್ಲವಾದಲ್ಲಿ ಮಹಿಳೆಯರಿಗೆ ರಕ್ತಹೀನತೆ, ಚರ್ಮವ್ಯಾಧಿ, ದೇಹ ಸ್ವಾಧೀನ ಕಳೆದುಕೊಳ್ಳುವುದು, ದಾಂಪತ್ಯದಲ್ಲಿ ಕಲ’ಹ ಉದ್ಭವವಾಗುವುದು ಸೇರಿದಂತೆ ಗಂಭೀರ ಸಮ’ಸ್ಯೆಗಳು ಕಾಡುವುದು ಕಟ್ಟಿಟ್ಟ ಬುತ್ತಿ.
ಇನ್ನು ಇತ್ತೀಚಿನ ದಿನಗಳಲ್ಲಿ ಒಂದೇ ಮನೆಯಲ್ಲಿ ಎರಡೆರಡು ಅಡುಗೆ ಮನೆಗಳನ್ನು ಕಟ್ಟಿಸುವುದು ಫ್ಯಾಷನ್ ಆಗಿಹೋಗಿದೆ. ಆದರೆ ಯಾವುದೇ ಕಾರಣಕ್ಕೂ ಒಂದು ಮನೆಯಲ್ಲಿ ಎರಡು ಅಡುಗೆ ಮನೆ ಇರಬಾರದು. ಇದ್ದರೆ ಸಮಸ್ಯೆಗಳಿಗೆ ನೀವೇ ಆಹ್ವಾನ ನೀಡಿದಂತೆ ಆಗುತ್ತದೆ. ಒಂದೇ ಅಡುಗೆ ಮನೆ ಇದ್ದು ಅದು ಆಗ್ನೇಯ ದಿಕ್ಕಿನಲ್ಲೇ ಇದ್ದರೆ ಸೂಕ್ತ. ಒಟ್ಟಿನಲ್ಲಿ ಹೇಳುವುದಾರೆ ಮನೆಯ ಹೆಣ್ಣುಮಕ್ಕಳಿಗೆ ಅದರಲ್ಲೂ ಮನೆ ಯಜಮಾನಿಗೆ ಏನಾದರೂ ತೊಂದರೆಗಳು ಇದ್ದರೆ ಅದಕ್ಕೆ ಕಾರಣ ಆಗ್ನೇಯ ಮೂಲೆಯಲ್ಲಿ ದೋಷ ಇದೆ ಎಂದರ್ಥ. ಒಮ್ಮೆ ನಿಮ್ಮ ಮನೆಯ ಆಗ್ನೇಯ ಮೂಲೆ ಸರಿ ಇದೆಯೇ ಎಂಬುದನ್ನು ಪರೀಕ್ಷಿಸಿ. ಒಂದು ವೇಳೆ ಏನಾದರೂ ಲೋಪ-ದೋ’ಷಗಳು ಇದ್ದಲ್ಲಿ ಅನುಭವಿ ಜ್ಯೋತಿಷಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.