“ನಮ್ಮೂರ ಬಾತು” !!                              

in ಕನ್ನಡ ಮಾಹಿತಿ/ಮನರಂಜನೆ 131 views

ಲಾಕ್ ಡೌನ್ ಸಮಯದಲ್ಲಿ ನಮ್ಮ ತಂದೆಯೊಂದಿಗೆ  ಹಳ್ಳಿಯ ರಾಷ್ಟ್ರೀಕೃತ  ಬ್ಯಾಂಕ್ಗೆ ಹೋಗಿ ಸರತಿ ಸಾಲಿನಲ್ಲಿ ನಿಂತಿದ್ದೆ .ಬ್ಯಾಂಕ್ ಒಳಗಿಂದ ಎಪ್ಪತ್ತು ವರ್ಷದ ಒಬ್ಬ ವೃದ್ಧೆ ನನ್ನ ಬಳಿ ಬಂದು ಮಗ, ಇಲ್ಲಿ ಹೊಟೇಲಲ್ಲಿ  ‘ಬಾತು’   ಸಿಗುತ್ತಾ ,ಒಳಗೆ ಬ್ಯಾಂಕಿನವರು ಏನೋ ಬಾತು ಬಾತು ಅಂಥವರೇ ಅಂದರು, ಒಳಗೆ ಹೋಗಿ ವಿಚಾರಿಸಿದಾಗ ಅಲ್ಲಿಯ ಸಿಬ್ಬಂದಿಯ ಹಿಂದಿಯ’ ಬಾತ್ ಕರೋ ‘ ಹೋಗಿ ಅಜ್ಜಿಯ ಬಾಯಲ್ಲಿ ಬಾತು ಆಗಿತ್ತು . ಏನ್ ದುರಂತ ನೋಡಿ ನಮ್ಮದು ,ನಮ್ಮ ಕನ್ನಡ ನೆಲದಲ್ಲಿ ನಮ್ಮ ಕನ್ನಡ ಭಾಷೆಗೆ ನೆಲೆ ಇಲ್ಲದಂತಾಗಿದೆ .ಗ್ರಾಮೀಣ ಪ್ರದೇಶದ ಬ್ಯಾಂಕ್ಗಳಿಗೆ ಹೊರ ರಾಜ್ಯದ ಸಿಬ್ಬಂದಿಯನ್ನು ನೇಮಿಸುವಾಗ ,ಸ್ಥಳೀಯ ಭಾಷೆಯ ತರಬೇತಿ ಕೊಟ್ಟು ಕಳುಹಿಸಬಹುದೇ? ಎಲ್ಲ ಕಚೇರಿಗಳಲ್ಲಿ ಗಣಕೀಕೃತ ಜಾರಿಗೆ ಬಂದಾಗ ಅದರ ತರಬೇತಿ ಕೊಟ್ಟ ಹಾಗೆ. ಆಡಳಿತದಲ್ಲಿ ಕನ್ನಡ ಅಂತ ಜಾರಿ ಇರುವಾಗ ಇದು ಬ್ಯಾಂಕ್ಗಳಿಗೆ ಅನ್ವಯಿಸುವುದಿಲ್ಲವೇ ?
ಇನ್ನು ಕೇಂದ್ರ ಸರ್ಕಾರಕ್ಕೆ ಈ ಬ್ಯಾಂಕುಗಳ ವಿಲಿನೀಕರಣ ಅಗತ್ಯ ಏನಿತ್ತು ?ಒಂದು ಪಕ್ಷ ಅದು ಅನಿವಾರ್ಯವಾದರೂ ಸಹ ಲಾಭದಲ್ಲಿ ನಡೆಯುತ್ತಿರುವ ಬ್ಯಾಂಕ್ಗಳನ್ನು, ದಿವಾಳಿ ಎದ್ದಿರುವ ಬ್ಯಾಂಕ್ಗೆ ವಿಲೀನಗೊಳಿಸಿ ದಿವಾಳಿ ಎದ್ದಿರುವ ಬ್ಯಾಂಕ್ ಹೆಸರನ್ನು ಇಡುವ ಅವಶ್ಯಕತೆ ಇದೆಯಾ?ಇದಕ್ಕೆ ಜಲ್ವಂತ ಉದಾಹರಣೆ ನಮ್ಮ ಹೆಮ್ಮೆಯ ಕನ್ನಡಿಗರ’ ವಿಜಯಾ ಬ್ಯಾಂಕ್ ‘ನಂಬರ್ ಒನ್ ಸ್ಥಾನದಲ್ಲಿ ಇದ್ದಿದ್ದು,

Advertisement

 

Advertisement

Advertisement

೧೯೩೧ ರಲ್ಲಿ ನಮ್ಮ ಕರಾವಳಿಯ ಕನ್ನಡಿಗರಿಂದಲೇ ಪ್ರಾರಂಭವಾದ ಬ್ಯಾಂಕ್ ಗೆ ಸುದೀರ್ಘ ಇತಿಹಾಸವಿದೆ. ರೈತಾಪಿ ವರ್ಗದವರಲ್ಲೂ ಇದು ಅಗ್ರಸ್ಥಾನದಲ್ಲಿತ್ತು .ವಿಜಯಾ ಬ್ಯಾಂಕ್ ಅಂತ ಅಲ್ಲದಿದ್ದರೂ ‘V3’ ಅಂತ ಬ್ಯಾಂಕ್ ಗಳ ವಿಲೀನಕ್ಕೆ ವಿಜಯ ಬ್ಯಾಂಕ್ ಸಿಬ್ಬಂದಿಗಳ ಕೋರಿಕೆಯ ಮೇರೆಗೆ ಹೆಸರಿಡ ಬಹುದಿತ್ತಲ್ಲ, ಸಂಪೂರ್ಣ ದಿವಾಳಿ ಎದ್ದಿದ್ದ ಬ್ಯಾಂಕ್ ಆಫ್ ಬರೋಡಾ ಅಂತ ಬಲವಂತವಾಗಿ ಇಡುವ ಉದ್ದೇಶವೇನು ?ಕನ್ನಡಿಗರ ದುಡಿಮೆಯ ಪಾಲನ್ನು ಹಿಂದಿಯ ಹೆಸರಲ್ಲಿ ಅನುಭವಿಸಬೇಕೇ ?ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯನ್ನು ಯಾವುದೇ ರಾಜಕೀಯ ಪಕ್ಷಗಳು ಪ್ರಬಲವಾಗಿ ಏಕೆ ಖಂಡಿಸಲಿಲ್ಲ ?ಇವೆಲ್ಲವನ್ನು ನೋಡ್ತಾ ಇದ್ರೆ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡಿಗರಿಗೆ ಕನ್ನಡದ ನೆಲದಲ್ಲಿ   ಕನ್ನಡ ಭಾಷೆಗೆ ನೆಲೆ ಇಲ್ಲದ ಹಾಗೆ ಆಗುತ್ತಾ ಅಂತ ಆತಂಕ ಶುರುವಾಗಿದೆ.

Advertisement

ಯಾವುದೇ ರಾಜಕೀಯ ಪಕ್ಷ ಇರಬಹುದು ನಿಮ್ಮ ಸ್ವಾರ್ಥ ಗಳನ್ನ ಬಿಟ್ಟು ಈ ನೆಲದ ಭಾಷೆ ಸಂಸ್ಕೃತಿಯನ್ನು ಉಳಿಸಲು ಪಕ್ಷಾತೀತವಾಗಿ ಹೋರಾಡಿ.  ಕೇಂದ್ರದಲ್ಲಿ ನಿಮ್ಮದೇ ಆದ ಬಿಜೆಪಿ ಸರ್ಕಾರ  ಇರುವಾಗ ಬಿಜೆಪಿಯವರು ಬಲವಂತದ ಹಿಂದಿ ಹೇರಿಕೆಯನ್ನು ಕೈ ಬಿಡಿಸೋಕೆ ಆಗಲ್ವಾ ? ಮುಂದೆ ಇನ್ನಾದರೂ ನಮ್ಮ ಯುವ ಪೀಳಿಗೆಗೆ ನಮ್ಮ ನಾಡಿನ ಭಾಷೆಯ ಮಹತ್ವವನ್ನು ಸಾರುವ ಕೆಲಸದತ್ತ ನಾವೆಲ್ಲ ಕಟಿಬದ್ಧರಾಗಬೇಕು. ಜೈ ಕನ್ನಡಾಂಬೆ.

ಸಿಂಹಿಣಿ.

Advertisement
Share this on...