ಮನೆಯ 10 ಫೀಟ್ ಜಾಗದಲ್ಲೆ ಟೆಕ್ನಿಕ್ ಬಳಸಿ ಲಕ್ಷ ಲಕ್ಷ ಗಳಿಸುತ್ತಿರುವ ಬೆಂಗಳೂರು ಮಹಿಳೆ !

in ಕನ್ನಡ ಮಾಹಿತಿ 115 views

ಪ್ರಪಂಚ ತುಂಬಾ ವೇಗವಾಗಿ ಓಡುತ್ತಿದೆ ಅದರ ಜೊತೆ ನಾವು ಹೋಗಬೇಕಾದರೆ  ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರಬೇಕು. ಅದಕ್ಕೆ ಹೊಂದಿಕೊಂಡು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಹೋಗಬೇಕು ಇಲ್ಲವಾದರೆ ಹಿಂದೆ ಉಳಿದುಬಿಡುತ್ತೇವೆ. ವ್ಯವಸಾಯ ಮಾಡೋಣ ಎಂದರೆ ಜಮೀನಿಲ್ಲ ,  ಜಮೀನಿದ್ದರೆ ನೀರಿಲ್ಲ ,  ಎರಡು ಇದ್ದರೆ ವ್ಯವಸಾಯವನ್ನು ಮಾಡುವ ಆಸಕ್ತಿಯೆ  ಇಲ್ಲ ಹೀಗೆ  ನೆಪ ಹೇಳಿಕೊಂಡು ಬದುಕುವ ಬದಲು ಇರುವುದನ್ನೇ ವ್ಯವಸ್ಥಿತವಾಗಿ ಬಳಸಿಕೊಂಡು ಅದರಲ್ಲಿ ಜೀವನ ಮಾಡುವುದೇ ಒಳ್ಳೆಯದು.

Advertisement

 

Advertisement

Advertisement

ಮನೆಯ ಮೇಲೆ ಇದ್ದ ಹತ್ತು ಫೀಟ್  ಜಾಗವನ್ನು ಬಳಸಿಕೊಂಡು ಇವರು ಲಕ್ಷ ಲಕ್ಷ ಹಣವನ್ನು ಗಳಿಸುತ್ತಿದ್ದಾರೆ.  ಅಲ್ಲದೆ ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ . ಅವರೆ ಬೆಂಗಳೂರಿನಲ್ಲಿ ವಾಸವಿರುವ ನಮ್ರತ.  ವೃತ್ತಿಯಲ್ಲಿ ಲಾಯರ್ ಆಗಿದ್ದ  ಇವರು ಮಗುವಿಗೆ ಜನ್ಮ ನೀಡಿದ ಮೇಲೆ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಏನಾದರೂ ಮಾಡಬೇಕು ಎಂಬ ಯೋಚನೆ ಬರುತ್ತದೆ. ಟೆರೇಸ್ ಮೇಲೆ  ಹತ್ತು ಫೀಟ್ ಜಾಗದಲ್ಲಿ ಟೊಮೆಟೊ ಮೂಲಂಗಿ ಸೊಪ್ಪುಗಳನ್ನು ಬೆಳೆಯಲು ಪ್ರಾರಂಭಿಸಿದರು. ಈ ಕೆಲಸ ನಮ್ರತಾ  ರವರಿಗೆ ಸಮಾಧಾನವನ್ನು ತಂದುಕೊಟ್ಟಿತು.

Advertisement

 

ಇದರಿಂದ ಪ್ರೇರಿತಗೊಂಡ ನಮ್ರತಾ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ಆಯೋಜಿಸಿದ್ದ  ಹದಿನೈದು  ದಿನಗಳ ಟ್ರೈನಿಂಗ್ನಲ್ಲಿ ಭಾಗವಹಿಸಿದ್ದರು. ನಂತರ ವ್ಯವಸಾಯದಲ್ಲಿ ಇನ್ನೂ ಹೆಚ್ಚು ಆಸಕ್ತಿ ಬೆಳೆಯಿತು ಹಾಗಾಗಿ ಮಶ್ರೂಮ್   ಬೆಳೆಯಲು ನಿರ್ಧರಿಸಿದರು .ಅಣಬೆಯಲ್ಲಿ ಹಲವಾರು ವೆರೈಟಿಗಳಿವೆ ಅವುಗಳಲ್ಲಿ ಕೆಲವೊಂದು ಅಣಬೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಟೆರೇಸಿನ ಒಂದು ರೂಮನ್ನು ಬಳಸಿಕೊಂಡು ಅಲ್ಲಿ ಏಲ್ಮ ಹೊಸ್ಟರ್  ಮತ್ತು ಸಿಟಾಕಿ ಎಂಬ ಎರಡು ಮೂರು ರೀತಿಯ ಮಶ್ರೂಮ್ ಗಳನ್ನು ಬೆಳೆಯುತ್ತಿದ್ದಾರೆ. ಅವರ ಪ್ಲಾನ್ ಸಕ್ಸಸ್ ಆದ ಕಾರಣ ಇಂದು ಸುಮಾರು ಇನ್ನೂರು ಬ್ಯಾಗ್ ಗಳಷ್ಟು ಮಶ್ರೂಮ್ ಅನ್ನು  ಬೆಳೆಯುತ್ತಿದ್ದಾರೆ.

 

ಏಲ್ಮ ಹೊಸ್ಟರ್ ಮಶ್ರೂಮ್ ಬೆಲೆ ಒಂದು ಕೆಜಿಗೆ  200 ರೂಪಾಯಿಗಳು ಮತ್ತು ಸಿಟಾಕಿ ಮಶ್ರೂಮ್ ಬೆಲೆ ಒಂದು ಕೆಜಿಗೆ  1500 ರೂಪಾಯಿಗಳು  ಇದೆ. ನೇರವಾಗಿ ಮತ್ತು ಆನ್ ಲೈನ್ ಗಳ ಮೂಲಕ ತಮ್ಮ ಉತ್ಪಾದನೆಗಿಂತ ಅಧಿಕವಾದ ಬೇಡಿಕೆ ಬರುತ್ತಿರುವುದರಿಂದ ನಮ್ರತಾ ರವರು  ಬೇರೆ ಒಂದು ಜಾಗವನ್ನು ರೆಂಟ್ ಪಡೆದು ಅಲ್ಲಿ ಕೂಡ ಮಶ್ರೂಮ್  ಬೆಳೆಯುತ್ತಿದ್ದಾರೆ. ಹತ್ತು ಫೀಟ್ ಜಾಗ , ಒಂದು ಚಿಕ್ಕ  ಆಲೋಚನೆ , ಒಂದು ವಾರ ಟ್ರೈನಿಂಗ್ ನಮ್ರತಾ ಅವರ ಜೀವನವನ್ನು ಬದಲಾಯಿಸಿದ್ದೆ ಅಲ್ಲದೆ  ನೆಮ್ಮದಿಯನ್ನು  ತಂದುಕೊಟ್ಟಿದೆ. ಆಗಾಗಿ ಅದಿಲ್ಲ ಇದಿಲ್ಲ ಎಂದು ಹೇಳುವ ಬದಲು ಇರುವುದರಲ್ಲಿ ಏನು ಮಾಡಬಹುದು ಎಂಬುದನ್ನು ಯೋಚಿಸೋಣ.

ಸುಮ್ಮನೆ   ಖಾಲಿಯಾಗಿ  ಬಿಟ್ಟ  ಹತ್ತು ಫೀಟ್ ಜಾಗ ಕೂಡ ನಮ್ಮ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ತೋರಿಸಿಕೊಟ್ಟ ನಮ್ರತಾ ರವರ  ಆತ್ಮಸ್ಥೈರ್ಯವನ್ನು  ಎಲ್ಲರೂ ಮೆಚ್ಚಲೇ ಬೇಕು.    ಆತ್ಮಸ್ಥೈರ್ಯವನ್ನು  ಬೆಳಸಿಕೊಂಡು ಜೀವನದಲ್ಲಿ ನಾವು ಕೂಡ ಬೆಳೆಯೋಣ  ನೆಮ್ಮದಿಯನ್ನು ಪಡೆಯೋಣ.

Advertisement
Share this on...