ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದಾನೆ ಈ ನಂದಿ !

in ಕನ್ನಡ ಮಾಹಿತಿ 91 views

ಭಾರತ ದೇಶ’ ದೇವಾಲಯಗಳ ತವರೂರು ಅಂತಾನೇ ಹೇಳಬಹುದು. ನಮ್ಮ ದೇಶದಲ್ಲಿ ಕೋಟ್ಯಾಂತರ ದೇವಾಲಯಗಳಿದ್ದು, ಪ್ರತೀ ರಾಜ್ಯದ ಗ್ರಾಮದಲ್ಲೂ ವಿಶೇಷವಾದ ದೇವರುಗಳ ದೇವಾಲಯಗಳನ್ನು ನಿರ್ಮಿಸಿ ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ ಇಂದಿನ ಯುವ ಪೀಳಿಗೆಗಳು ಯಾವ ದೇವರು ಮತ್ತು ಆಚರಣೆಗಳನ್ನು ನಂಬದೇ ಇವೆಲ್ಲಾ ಮೂಡನಂಬಿಕೆಗಳು ಎಂದು ಭಾವಿಸಿ ನವ ಯುಗಕ್ಕೆ ಮಾರು ಹೋಗಿದ್ದಾರೆ. ಇನ್ನು ನಮ್ಮ ದೇಶದಲ್ಲಿ ಎಂಟು ಸಂಪ್ರದಾಯದ ಸಾಕಷ್ಟು ದೇವಾಲಯಗಳನ್ನು ನೋಡಬಹುದು. ತನ್ನದೇ ಆದ ಇತಿಹಾಸವನ್ನು ಈ ದೇವಾಲಯಗಳು ಹೊಂದಿರುತ್ತದೆ.ಇದೀಗ ಈ ರೀತಿಯಾದಂತಹ ಇತಿಹಾಸವನ್ನು ಹೊಂದಿರುವ ದೇವಾಲಯ ಆಂಧ್ರಪ್ರದೇಶದಲ್ಲಿದ್ದು, ಇಪ್ಪತ್ತು ವರುಷಕೊಮ್ಮೆ ದೇವಾಲಯದ ನಂದಿ ಬೆಳೆಯುತ್ತಿದೆ. ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಎಂಬ ಜಿಲ್ಲೆಯಲ್ಲಿರುವ ಯಗಂತಿ ಉಮಾಮಹೇಶ್ವರ ದೇವಾಲಯ ಭಕ್ತರನ್ನು ಕೈ ಬೀಸಿ ಕರೆಯುತ್ತದೆ. ಕರ್ನೂಲ್ ಕಡೆಗೆ ಹೋದವರು ಈ ದೇವಸ್ಥಾನಕ್ಕೆ ಭೇಟಿ ನೀಡದೆ ಬರುವುದೇ ಇಲ್ಲ. ಇದಕ್ಕೆ ಕಾರಣ ಇಲ್ಲಿನ ನಂದಿಯ ವಿಗ್ರಹ.

Advertisement

 

Advertisement

Advertisement

ವರ್ಷದಿಂದ ವರ್ಷಕ್ಕೆ ವಿಗ್ರಹ ಬೆಳೆಯುತ್ತಿದೆ ಎಂಬ ಪ್ರತೀತಿ ಇದೆ. ಇದನ್ನು ದೇವರ ಪವಾಡ ಎಂದೇ ನಂಬಿರುವ ಸಹಸ್ರ ಭಕ್ತರು ಸಾಲುಸಾಲು ಬಂದು ದೇವರನ್ನು ನಮಿಸುತ್ತಿದ್ದಾರೆ. ಇನ್ನು ಈ ದೇವಾಲಯ ಹದಿನೈದನೆ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಈ ಬೃಹತ್ ದೇಗುಲವನ್ನು ನಿರ್ಮಿಸಿದವರು ವಿಜಯನಗರ ಸಾಮ್ರಾಜ್ಯವನ್ನು ಆಳಿದ್ದ ಸಂಗಮ ರಾಜಮನೆತನದ ಅರಸ ಹರಿಹರ ಬುಕ್ಕ ರಾಯರು.ಮತ್ತೊಂದು ಮಾಹಿತಿಯ ಪ್ರಕಾರ ಅಗಸ್ತ್ಯ ಎಂಬ ಋುಷಿ ಮುನಿಗಳು ಈ ಜಾಗದಲ್ಲಿ ಶ್ರೀ ವೆಂಕಟೇಶ್ವರನ ದೇವಾಲಯವನ್ನು ನಿರ್ಮಿಸಲು ಬಯಸಿದ್ದರಂತೆ. ಆದರೆ, ನಿರ್ಮಾಣಗೊಂಡ ಮೂರ್ತಿಯ ಉಗುರೊಂದು ಮುರಿದು ಹೋದ ಕಾರಣ, ಭಗ್ನಗೊಂಡ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ. ಬಹುವಾಗಿ ನೊಂದುಕೊಂಡ ಅಗಸ್ತ್ಯ ಮುನಿಗಳು ಶಿವನ ತಪಸ್ಸು ಮಾಡಲು ಮುಂದಾದರಂತೆ . ಬಳಿಕ ಉಮಾಮಹೇಶ್ವರ ದೇವನು ಒಂದೇ ಕಲ್ಲಿನಲ್ಲಿ ಇಲ್ಲಿ ರೂಪ ಪಡೆಯುತ್ತಾರೆ.

Advertisement

 

ಇನ್ನು ಅರ್ಚಕರು ಮತ್ತು ಭಕ್ತರು ಹೇಳುವ ಪ್ರಕಾರ ನಂದಿ ಅದೆಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಈ ಹಿಂದೆ ನಂದಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಲು ಸಾಕಷ್ಟು ಜಾಗ ಇತ್ತಂತೆ. ಆದರೆ, ಇದೀಗ ಆ ಜಾಗವನ್ನೆಲ್ಲಾ ಬೆಳೆದ ನಂದಿ ಆವರಿಸಿಕೊಂಡಿದ್ದು, ನಂದಿಯ ಬೆಳವಣಿಗೆಯ ಕಾರಣದಿಂದ ಅಲ್ಲೇ ಇದ್ದ ಒಂದು ಕಲ್ಲಿನ ಕಂಬವನ್ನೂ ಕೂಡ ತೆಗೆಯಲಾಗಿದೆಯಂತೆ.ಕಲಿಯುಗವೂ ಅಂತ್ಯವಾಗುವ ಹೊತ್ತಿಗೆ ಈ ನಂದಿ ವಿಗ್ರಹಕ್ಕೆ ಜೀವ ಬಂದು ಎದ್ದು, ಸ್ವರ ಏರಿಸಿ ಕೂಗುತ್ತಾನೆ ಅನ್ನುವ ನಂಬಿಕೆ ಭಕ್ತರಲ್ಲಿದೆ. ನಂದಿ ಬೆಳೆಯುತ್ತಿದೆ ಅನ್ನುವುದು ಕೇವಲ ಭಕ್ತರ ನಂಬಿಕೆ ಮಾತ್ರವಲ್ಲ, ವರ್ಷದಿಂದ ವರ್ಷಕ್ಕೆ ನಂದಿ ಬೆಳೆಯುತ್ತಿದೆ ಅನ್ನುವುದು ಸತ್ಯ,

ಇದಕ್ಕೆ ಪುರಾತತ್ವ ಇಲಾಖೆಯ ದಾಖಲೆಗಳೇ ಸಾಕ್ಷಿ. ಸ್ವತಃ ಪುರಾತತ್ವ ಇಲಾಖೆ ಕೂಡಾ ದೃಢಪಡಿಸಿದ್ದು’ ಈ ನಂದಿ ಪ್ರತಿ 20 ವರ್ಷಕ್ಕೊಮ್ಮೆ ಒಂದು ಇಂಚು ದೊಡ್ಡದಾಗುತ್ತದೆಯಂತೆ. ಹೀಗಾಗಿ, ಪ್ರತಿ ಹದಿನೈದು ವರ್ಷಕ್ಕೊಮ್ಮೆ ಪುರಾತತ್ವ ಇಲಾಖೆ ಈ ನಂದಿಯ ಗಾತ್ರದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದೆ.

Advertisement
Share this on...