ಪ್ರವಾಸಿಗರ ನೆಚ್ಚಿನ ತಾಣ ನಂದಿ ಬೆಟ್ಟಕ್ಕೆ ಇನ್ಮುಂದೆ ಮುಂಜಾನೆ 6ಕ್ಕೆ ಹೋಗ್ಬಹುದು..

in ಕನ್ನಡ ಮಾಹಿತಿ 189 views

ಕೊರೊನಾ ಭೀತಿಯಿಂದಾಗಿ, ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಬರಲು ಕೂಡ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜ್ಯದ ಪ್ರವಾಸಿ ತಾಣಗಳು ಕೆಲವು ತಿಂಗಳಿಂದ ಸಂಪೂರ್ಣ ಬಂದ್ ಆಗಿತ್ತು. ವಿಶೇಷವಾಗಿ ಪ್ರವಾಸಿಗರ ಹಾಟ್ ಸ್ಪಾಟ್ ಎಂದೇ ಕರೆಯಲಾಗುವ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದೀಗ ಲಾಕ್ ಡೌನ್ ಮುಗಿದು ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಕೆಲದಿನಗಳಿಂದ ಬೆಳಿಗ್ಗೆ 8 ಗಂಟೆಯ ನಂತರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಲವು ದಿನಗಳಿಂದ ಮನೆಯಲ್ಲೇ ಲಾಕ್ ಆಗಿದ್ದ ಜನರು ಇದೀಗ ನಂದಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ವೀಕ್ ಎಂಡ್ ನಲ್ಲಂತೂ ನಂದಿ ಗಿರಿಧಾಮದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಏರ್ಪಟ್ಟು ಸಂಚಾರ ನಿಯತಂತ್ರಣ ಪೊಲೀಸರಿಗೆ ಸಾವಾಲಾಗಿ ಪರಿಣಮಿಸಿತ್ತು ಮಾತ್ರವಲ್ಲ, ಪ್ರವಾಸಿಗರ ನೆಚ್ಚಿನ ತಾಣ ಕೊರೊನಾ ಹಾಟ್ ಸ್ಫಾಟ್ ಆಗುವ ಭೀತಿಯೂ ಎದುರಾಗಿತ್ತು.

Advertisement

Advertisement

ಇದೀಗ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಇನ್ಮುಂದೆ ಬೆಳಿಗ್ಗೆ 6 ಗಂಟೆಯಿಂದಲೇ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಹೆಂದೆ ಬೆಳಗ್ಗೆ 8ರಿಂದ ಪ್ರವೇಶಕ್ಕೆ ಅನುಮತಿ ನೀಡಿದ್ದರೂ ನಂದಿ ಬೆಟ್ಟದ ಸೂರ್ಯೋದಯದ ಸೌಂದರ್ಯ ಸವಿಯೋಕೆ ಮುಂಜಾನೆ 4- 5 ಗಂಟೆಯಿಂದಲೇ ಪ್ರವಾಸಿಗರ ದಂಡೇ ಆಗಮಿಸುತ್ತಿತ್ತು. ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಈ ಹಿನ್ನೆಲೆ 6 ಗಂಟೆಯಿಂದಲೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಕೊರೊನಾ ಕುರಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಡಳಿತ ಸೂಚಿಸಿದೆ.

Advertisement

ನಂದಿ ಬೆಟ್ಟ ಹೆಸರು ಹೇಗೆ ಬಂತು?
ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ 11 ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿಂದ ಸುಮಾರು 45 ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ. ನಂದಿ ಬೆಟ್ಟದ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳಿವೆ. ಚೋಳರ ಕಾಲದಲ್ಲಿ, ನಂದಿ ಬೆಟ್ಟವನ್ನು ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು, ಅದರ ಅರ್ಥ ಸಂತೋಷದಿಂದ ಕೂಡಿದ ಬೆಟ್ಟ ಎಂದಾಗಿತ್ತು. ಮತ್ತೊಂದು ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು 1000 ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿದೆ.

Advertisement

ಪುರಾತನ ಕಾಲದ ಶಿವ ಮತ್ತು ಪಾರ್ವತಿಯರ ದೇವಾಲಯ ಈ ಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಿದೆ.ಯೋಗ ನಂದೀಶ್ವರನೆಂಬ ತಪಸ್ಸಿಯು ತಪಸ್ಸು ಮಾಡಿದ ನಂತರ ಬೆಟ್ಟಕ್ಕೆ ಈ ಹೆಸರು ಬಂತೆಂದು ಇನ್ನೊಂದು ಕಥೆ ಹೇಳುತ್ತದೆ. ಆಡಳಿತಗಾರನಾಗಿದ್ದ ಟಿಪ್ಪು ಸುಲ್ತಾನನು ಕೋಟೆ ಕಟ್ಟಿರುವುದರಿಂದ, ನಂದಿಯು ನಂದಿದುರ್ಗ(ಕೋಟೆ) ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಈ ಬೆಟ್ಟವು ನಿದ್ರಿಸುತ್ತಿರುವ ವೃಷಭ(ನಂದಿ) ದಂತೆ ಕಾಣುವುದರಿಂದ ಬಹುಶಃ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿರಬಹುದು.

ಪ್ರಮುಖ ಸ್ಥಳಗಳು:
* ಟಿಪ್ಪೂಸ್ ಡ್ರಾಪ್ – ಈ ಸ್ಥಳದಲ್ಲಿ ಟಿಪ್ಪು ಸುಲ್ತಾನ್‌ರು ತಪ್ಪಿತಸ್ಥರೆಂದು ನಿರ್ಣಯವಾದ ಖೈದಿಗಳನ್ನು ಮೇಲಿಂದ ತಳ್ಳಿ ಸಾಯಿಸಲಾಗುತ್ತಿತ್ತು, ಇದರಿಂದಾಗಿ ಈ ಸ್ಥಳವು ಪ್ರಖ್ಯಾತಿಯಾಗಿದೆ.
* ಟಿಪ್ಪುವಿನ ಬೇಸಿಗೆ ಅರಮನೆ ಮತ್ತು ಕೋಟೆ – ಗಂಗರ ಕಾಲದಲ್ಲಿ ಅವರ ಮುಖ್ಯಸ್ಥನು ಚಿಕ್ಕಬಳ್ಳಾಪುರದಲ್ಲಿ ಕೋಟೆಯನ್ನು ನಿರ್ಮಿಸಿದನು. ಟಿಪ್ಪು ಇದನ್ನು ಬಲಗೊಳಿಸಿ ಒಂದು ವಿಶ್ರಾಂತಿ ಗೃಹವನ್ನೂ ಸಹ ನಿರ್ಮಿಸಿದ. ಇದು ಟಿಪ್ಪುವಿನ ಬೇಸಿಗೆ ಮಹಲು ಎಂದೇ ಕರೆಯಲಾಗುತ್ತದೆ. ಇದು ಸಾಮಾನ್ಯ ನಾಗರೀಕರಿಗೆ ಲಭ್ಯವಿಲ್ಲ
* ಕುದುರೆ ದಾರಿ – ಕೋಟೆಯ ಈಶಾನ್ಯ ದಿಕ್ಕಿಗೆ ಒಂದು ಕಲ್ಲು ಬಾಗಿಲು ಇದೆ, ಇದನ್ನು ಕುದುರೆಗಳ ಬೆನ್ನಮೇಲೆ ಕುಳಿತು ಸೈನಿಕರು ಮೇಲೆ ಹತ್ತಲು ಬಳಸಲಾಗುತ್ತಿತ್ತೆಂದು ನಂಬಿಕೆ ಇದೆ.


* ಪಾರಾಗುವ ರಹಸ್ಯ ದಾರಿ – ಪೂರ್ವಕ್ಕೆ ಒಂದು ರಹಸ್ಯ ಮಾರ್ಗವಿದೆ, ಇದನ್ನು ರಾಜರು ಅನೀರೀಕ್ಷಿತ ಆಕ್ರಮಣಗಳಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ನಂಬಲಾಗಿದೆ.
* ದೇವಸ್ಥಾನಗಳು – ಇಲ್ಲಿ ಶ್ರೀ ಭೋಗ ನರಸಿಂಹ , ಶ್ರೀ ಉಗ್ರ ನರಸಿಂಹ ಮತ್ತು ಸುಂದರವಾದ ಪುರಾತನ ದೇವಾಲಯಗಳನ್ನು ನೋಡಬಹುದು.
* ಗವಿ ವೀರಭದ್ರಸ್ವಾಮಿ ದೇವಸ್ಥಾನ ಬೆಟ್ಟದ ತುದಿಯಲ್ಲಿದೆ, ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟ್‌ಗೆ ಹೋಗುವ ದಾರಿಯಲ್ಲಿ ಸ್ವಾಭಾವಿಕಾವಾಗಿ ದೊಡ್ಡಬಂಡೆಗಳಿಂದ ನಿರ್ಮಿತವಾದ ಒಂದು ಮಹತ್ವದ ದೇವಸ್ಥಾನ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...