ಥಲಸ್ಸಿಮಿಯಾ ದಿಂದ ಬಳಲುತ್ತಿರುವ ಮಕ್ಕಳನ್ನು ಉಳಿಸಲು ಮುಂದಾದ ನಾನಿ

in Kannada News/ಕನ್ನಡ ಮಾಹಿತಿ 94 views

ನ್ಯಾಚುರಲ್ ಸ್ಟಾರ್ ನಾನಿ ಸಮಾಜ ಸೇವೆ ವಿಷಯದಲ್ಲಿ ಯಾವಾಗಲೂ ಒಂದು ಕೈ ಮುಂದೆ. ಇಂತಹ ವಿಷಯದಲ್ಲಿ ಹೆಚ್ಚು ಕರುಣೆ ತೋರುವ ನಾನಿ, ಈ ಹಿಂದೆಯೂ ಅಗತ್ಯವಿರುವವರಿಗೆ ದೇಣಿಗೆ ನೀಡಿ ಸಹಾಯ ಮಾಡಿದ್ದರು. ಈಗ ಥಲಸ್ಸಿಮಿಯಾ (ರಕ್ತಹೀನತೆ) ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಉಳಿಸಲು ಮುಂದಾಗಿದ್ದಾರೆ.

Advertisement

 

Advertisement

Advertisement

 

Advertisement

ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಿನಕ್ಕೆ ಎರಡು ಬಾರಿ ರಕ್ತ ಬೇಕು. ಲಾಕ್ ಡೌನ್’ನಿಂದಾಗಿ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ, ಆಸ್ಪತ್ರೆಗಳು ಮತ್ತು ಬ್ಲಡ್ ಬ್ಯಾಂಕುಗಳು ಅಗತ್ಯವಿರುವವರಿಗೆ ರಕ್ತ ಪೂರೈಸಲು ಕಷ್ಟಪಡುತ್ತಿವೆ. ಇಂತಹ ಸಮಯದಲ್ಲಿ ನಾನಿ ರಕ್ತದಾನ ಮಾಡಲು ಮುಂದೆ ಬಂದು, ಅಗತ್ಯವಿರುವ ಎಲ್ಲರಿಗೂ ರಕ್ತದಾನ ಮಾಡುವಂತೆ ಕೇಳಿಕೊಂಡರು. ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನಿಯ ಈ ಕೆಲಸಕ್ಕೆ ಪ್ರತಿಯೊಬ್ಬರೂ ಈಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಪ್ರಸ್ತುತ ನಾನಿ ಅವರ ಕೈಯಲ್ಲಿ ಎರಡು ಚಿತ್ರಗಳಿವೆ. ಲಾಕ್ಡೌನ್ ಮುಗಿದ ನಂತರ ಇಂದ್ರಕಂಟಿ ಮೋಹನಕೃಷ್ಣ ನಿರ್ದೇಶನದ ‘ವಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಶಿವ ನಿರ್ವಾಣ ನಿರ್ದೇಶನದ ಮತ್ತೊಂದು ಚಿತ್ರ ನಿರ್ಮಾಣದ ಹಂತದಲ್ಲಿದೆ. ಟಕ್ ಜಗದೀಶ್ ಹೆಸರಿನ ಈ ಚಿತ್ರದಲ್ಲಿ ಐಶ್ವರ್ಯ ರಾಜೇಶ್ ಮತ್ತು ರಿತು ವರ್ಮಾ ಮುಖ್ಯ ಪಾತ್ರದಲ್ಲಿದ್ದಾರೆ. ಟಕ್ ಜಗದೀಶ್ 2020 ರ ದ್ವಿತೀಯಾರ್ಧದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

 

 

ಕೆಲವು ದಿನಗಳ ಹಿಂದೆ ‘ವಿ’ ಚಿತ್ರ ಬಿಡುಗಡೆಯ ದಿನಾಂಕಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ದಿಲ್ ರಾಜು ಮತ್ತು ನಾಯಕ ನಾನಿ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಏಕಾಏಕಿ ಕೊರೊನಾ ವೈರಸ್ ವಕ್ಕರಿಸಿದ್ದರಿಂದ ಈಗ ‘ವಿ’ ವಿತರಕರು ಸ್ವಲ್ಪ ಚಿಂತಿತರಾಗಿದ್ದಾರೆ. ವೈರಸ್ ಇದುವರೆಗೂ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದ್ದು, ಚೀನಾದಾದ್ಯಂತ ಸಾವಿರಾರು ಜನರನ್ನು ಕೊಂದಿದೆ. ಜೊತೆಗೆ ಇರಾನ್, ದಕ್ಷಿಣ ಕೊರಿಯಾ ಮತ್ತು ಇಟಲಿಯ ಮೇಲೂ ಇದು ಪರಿಣಾಮವನ್ನು ಬೀರುತ್ತಿದೆ. ಈಗಾಗಲೇ ಎಲ್ಲೆಡೆ ಚಿತ್ರಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಲಾಕ್ ಆಗಿವೆ.

 

 

ಮೋದಿ ಅವರು ದೇಶದ ನಾಗರಿಕರಿಗೆ ಗುಂಪುಗಳಾಗಿ ಪ್ರಯಾಣಿಸದಂತೆ ಸಲಹೆ ನೀಡಿದ್ದು, ಮೇ.3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕಠಿಣ ರೀತಿಯ ಲಾಕ್ ಡೌನ್ ಜಾರಿ ಮಾಡಲಾಗುವುದು. ಲಾಕ್ ಡೌನ್ ಉಲ್ಲಂಘಿಸಿದರೆ ಆ ಪ್ರದೇಶ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿರುವುದಾಗಿ ಮೋದಿ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಮಾಡದಂತೆ ಆಯಾ ಸರ್ಕಾರಗಳು ಸಹ ಎಚ್ಚರಿಕೆ ನೀಡಿವೆ.

Advertisement
Share this on...