ಬೀದರ್ ನಲ್ಲಿ ನಟ ಭಯಂಕರ ಚಿತ್ರತಂಡದಿಂದ ಸಹಾಯ…!

in Kannada News/ಸಿನಿಮಾ 31 views

ಒಳ್ಳೆ ಹುಡುಗ ಪ್ರಥಮ್ ಸಿನಿಮಾದ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿದ್ದು ಸಾಮಾಜಿಕ ಕಾರ್ಯಗಳ ಕುರಿತು ಸಹ ಆಗಾಗ ಪೋಸ್ಟ್ ಮಾಡ್ತಾ ಇರುತ್ತಾರೆ. ಅದೇ ರೀತಿ ಈಗ ನಟಭಯಂಕರ ಚಿತ್ರತಂಡದ ಅವರ ಸ್ನೇಹಿತರು ಸಹಾಯ ಹಸ್ತ ಚಾಚಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಬಡಜನರು ಊಟವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ನಟ-ನಟಿಯರು, ಧನಿಕರು ಬಡವರ ಸಹಾಯಕ್ಕೆ ಧಾವಿಸುತ್ತಿದ್ದು ಆಹಾರ ಸಾಮಗ್ರಿಗಳು ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡುತ್ತಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವರು ಸಿ.ಎಂ ಪರಿಹಾರ ನಿಧಿಗೆ ಹಣ ಸಂದಾಯ ಮಾಡುವ ಮೂಲಕ ಸಹಾಯ ಮಾಡಿದ್ದಾರೆ. ಹಾಸ್ಯ ನಟ ಸಾಧುಕೋಕಿಲರವರು ಮನೆಮನೆಗೆ ಆಹಾರಪದಾರ್ಥಗಳನ್ನ ನೀಡಿ ನೆರವಾಗಿದ್ದಾರೆ.

Advertisement

 

Advertisement

Advertisement

 

Advertisement

ಅದೇ ರೀತಿ ಪ್ರಥಮ್ ಟೀಮ್, ಕೆಲಸ ಮಾಡುತ್ತಿದ್ದು ಬೆಂಗಳೂರಿನಿಂದ ಗಡಿ ಜಿಲ್ಲೆ ಬೀದರ್ ಗೆ ಹೋಗಿ ಅಲ್ಲಿನ ಬಡ ಜನರಿಗೆ ಆಹಾರ ಪದಾರ್ಥಗಳನ್ನ ದಾನ ಮಾಡುವ ಕಾರ್ಯದಲ್ಲಿ ತೊಡಗಿದೆ. ಈ ಕುರಿತು ಪ್ರಥಮ್ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನ ಹಂಚಿಕೊಂಡಿದ್ದಾರೆ. ಪ್ರಥಮ್ ಇಲ್ಲದೆಯೂ ಈ ತಂಡ ಸ್ವಯಂಪ್ರೇರಣೆಯಿಂದ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

 

 

ಈ ಕುರಿತು ಫೇಸ್ ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು ಇದಲ್ಲವೇ ಮಾನವೀಯತೆ ಗಡಿ ಜಿಲ್ಲೆ ಮುಚ್ಚಿರುವುದು ನಿಮ್ಮೆಲ್ಲರಿಗೂ ಗೊತ್ತು ಬೆಂಗಳೂರಿನಿಂದ ಗೆಳೆಯ ಮತ್ತು ಅವನ ಸ್ನೇಹಿತರು ನಾನಿಲ್ಲದಿದ್ದರೂ ಪ್ರತಿದಿನ ಗಡಿಜಿಲ್ಲೆ ಬೀದರ್ ನಲ್ಲಿ ಹಗಲು-ಇರುಳು ಎನ್ನದೆ ಬೈಕ್ ನಲ್ಲಿ ಹೋಗಿ ಸಹಾಯ ಮಾಡುತ್ತಿದ್ದಾರೆ. ನಟಭಯಂಕರ ತಂಡದಿಂದ ಆಹಾರ ವಿತರಣೆಯನ್ನ ಮಾಡುತ್ತಿದ್ದಾರೆ.

 

 

View this post on Instagram

 

ಇದಲ್ಲವೆ ಮಾನವೀಯತೆ??ಗಡಿಜಿಲ್ಲೆ ಮುಚ್ಚಿರೋದು ನಿಮ್ಮೆಲ್ಲರಿಗೂ ಗೊತ್ತು…ಬೆಂಗಳೂರಿಂದ ಗೆಳೆಯ @mark_houdy ಮತ್ತವರ ಸ್ನೇಹಿತರು ನಾನಿಲ್ಲದಿದ್ದರೂ ಪ್ರತಿದಿನ ಗಡಿಜಿಲ್ಲೆ ಬೀದರ್ ಲಿ ಹಗಲು ಇರುಳು ಎನ್ನದೆ scooter ಲಿ ಹೋಗಿ @nata_bhayankara.team ತಂಡದಿಂದ ಆಹಾರ ವಿತರಣೆ ಮಾಡುತ್ತಿದ್ದಾರೆ!ಅಷ್ಟೇ ಅಲ್ಲಾ… lock down ಮಹತ್ವ ತಿಳಿಸಿ ಎಲ್ಲರನ್ನೂ ಶಿಕ್ಷಿತರನ್ನಾಗಿಸುತ್ತಿದ್ದಾರೆ…! ಇಂತವರು ನನ್ನ ಸ್ನೇಹಿತರು ಅನ್ನೋದೆ ನನ್ನ ಹೆಮ್ಮೆ…!

A post shared by Olle Hudga Pratham (@olle_hudga_prathama) on

 

ಅಷ್ಟೇ ಅಲ್ಲ ಲಾಕ್ ಡೌನ್ ಮಹತ್ವ ತಿಳಿಸಿ ಎಲ್ಲರನ್ನೂ ಶಿಕ್ಷಿತರನ್ನಾಗಿಸುತ್ತಿದ್ದಾರೆ. ಇಂತಹವರು ನನ್ನ ಸ್ನೇಹಿತರು ಅನ್ನೋದೇ ನನ್ನ ಹೆಮ್ಮೆ ಅಂತ ಬರೆದುಕೊಂಡಿದ್ದಾರೆ. ಈ ಹಿಂದೆ ಪ್ರಥಮ್ ಸಹ ತುಮಕೂರಿನ ವಿವಿಧ ಭಾಗಗಳಲ್ಲಿ ಆಹಾರ ಪದಾರ್ಥಗಳನ್ನ ಹಂಚಿಕೊಂಡಿದ್ದರು. ಇದನ್ನ ನಟಭಯಂಕರ ಚಿತ್ರತಂಡ ಮುಂದುವರಿಸುತ್ತಿದೆ. ಪ್ರಥಮ್ ಇತ್ತೀಚೆಗೆ ಕುರಿಕಾಯುವ ವಿಡಿಯೋವನ್ನ ಸಹ ಫೇಸ್ ಬುಕ್ ನಲ್ಲಿ ಹಾಕಿದ್ದರು. ಪ್ರಥಮ್ ಸದ್ಯ ನಟಭಯಂಕರ ಸಿನಿಮಾದಲ್ಲಿ ಬಿಜಿ಼ಯಾಗಿದ್ದು ಇತ್ತೀಚೆಗೆ ಗಾಂಚಲಿ ಗೀತಾ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿದ್ದು ಊರಿನಲ್ಲಿ ಕೃಷಿ ಹಾಗೂ ಕುರಿ ಕಾಯುವುದರಲ್ಲಿ ನಟ ಪ್ರಥಮ್ ನಿರತರಾಗಿದ್ದಾರೆ. ಅಂದ ಹಾಗೆ ಈ ಚಿತ್ರವನ್ನ ಅವರೇ ನಿರ್ದೇಶಿಸಿ ನಟಿಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...