ನವರಾತ್ರಿಯ ಮೊದಲನೆ ದಿನ : ದೇವಿಯನ್ನು ಶೈಲಪುತ್ರಿಯ ಅವತಾರದಲ್ಲಿ ಪೂಜೆ ಮಾಡುವಂತಹ ದಿನ - Namma Kannada Suddi

ನವರಾತ್ರಿಯ ಮೊದಲನೆ ದಿನ : ದೇವಿಯನ್ನು ಶೈಲಪುತ್ರಿಯ ಅವತಾರದಲ್ಲಿ ಪೂಜೆ ಮಾಡುವಂತಹ ದಿನ

in ಜ್ಯೋತಿಷ್ಯ 653 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು, ಅಶ್ವಯುಜ ಮಾಸೆ, ಶುಕ್ಲ ಪಕ್ಷದ ಪ್ರಥಮ ತಿಥಿ,  ಚಿತ್ತಾ ನಕ್ಷತ್ರ,  ವಿಶ್ಕುಂಭ  ಯೋಗ,  ಕಿಮ್ಸುಗ್ನ  ಕರಣ, ಅಕ್ಟೋಬರ್17  ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಬೆಳ್ಳಗ್ಗೆ 6 ಗಂಟೆ 17 ನಿಮಿಷದಿಂದ 7 ಗಂಟೆ 41 ನಿಮಿಷದವರೆಗೂ ಇದೆ.

Advertisement

ಇಂದು ದೇವಿ ನಕ್ಷತ್ರದ ದಿನ ಚಿತ್ತಾ ನಕ್ಷತ್ರ. ಇಂದು ನವರಾತ್ರಿಯ ಮೊದಲನೆ ದಿನ ದೇವಿಯನ್ನು ಶೈಲಪುತ್ರಿಯ ಅವತಾರದಲ್ಲಿ ಪೂಜೆ ಮಾಡುವಂತಹ ದಿನ. ಶೈಲಪುತ್ರಿ ಎಂದರೆ ಹಿಮವಂತನ ಮಗಳು. ಎಲ್ಲ ಹೆಣ್ಣು ಮಕ್ಕಳಿಗೂ ಮದುವೆಯಾದ ನಂತರ ತನ್ನ ತಾಯಿಯ ಮನೆ ನೆನಪಿಗೆ ಬರದ ಹಾಗೆ ಗಂಡ ನೋಡಿಕೊಳ್ಳಬೇಕು. ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಅಮ್ಮನ ಮೇಲೆ ಒಂದಷ್ಟು ಪ್ರೀತಿ ಇರಲೇಬೇಕು ಮತ್ತು ತಾಯಿ ಮನೆಯನ್ನು ಮರೆಯಬಾರದು ಎಂಬುದೇ ಈ ದೇವಿ ನವರಾತ್ರಿಯ ಮೊದಲ ಉದ್ದೇಶ. ಜಗನ್ಮಾತೆಯಾದ ಪಾರ್ವತಿದೇವಿಯ ಅಮ್ಮನ ಮನೆಗೆ ಹೋಗಬೇಕು ಎಂದಾಗ ಶಿವನು ಪರಿವಾರ ಸಮೇತವಾಗಿ ಕಳಿಸಿಕೊಡುತ್ತಾರೆ. ಶಿವ ಪಾರ್ವತಿ ದೇವಿಗೆ ಒಂಬತ್ತು ದಿನ ಇದ್ದು ಮರಳಿ ಬಾ ಎಂದು ಹೇಳುತ್ತಾರೆ. ಪಾರ್ವತಿ ದೇವಿಯು ತಾಯಿ ಮನೆಗೆ ಬಂದಾಗ ತಾಯಿಗೆ ಆಗುವ ಸಂತೋಷದಿಂದ ಮಗಳಿಗೆ ಒಂಬತ್ತು ದಿನವೂ ಒಂದೊಂದು ರೀತಿಯ ಅಲಂಕಾರಗಳನ್ನು ಮಾಡಿ ಆನಂದ ಪಡುತ್ತಾರೆ ಎಂಬುದರ ಸಂಕೇತವೇ ಈ ದೇವಿ ನವರಾತ್ರಿ. ಸರ್ವಮಂಗಳೆಯಾದ ಪಾರ್ವತಿ  ದೇವಿಗೆ ಪ್ರತಿನಿತ್ಯ ಒಂದೊಂದು ರೂಪದಲ್ಲಿ ಅಲಂಕರಿಸಿ ಪೂಜೆ ಮಾಡುವ ಸಂಕಲ್ಪ. ಒಂಬತ್ತು ದಿನವೂ ತಪ್ಪದೆ ಬ್ರಾಹ್ಮಿ ದೀಪ ಮತ್ತು ಸಂಧ್ಯಾ ಕಾಲದಲ್ಲಿ ದೀಪವನ್ನು ಹಚ್ಚಿ.

Advertisement


ಪಾರ್ವತಿ ದೇವಿಯ ತಂದೆ ಯಜ್ಞವನ್ನು ಮಾಡುತ್ತಾರೆ ಆ ಯಜ್ಞಕ್ಕೆ ಶಿವನನ್ನು ಕರೆಯದೆ ತಿಳಿಸದೆ ಅಗೌರವ ತೋರಿಸುತ್ತಾರೆ ಇದರಿಂದ ನೊಂದ ಪಾರ್ವತಿ ದೇವಿಯು ಯಜ್ಞಕುಂಡದಲ್ಲಿ ತನ್ನ ಪ್ರಾಣವನ್ನು ಬಿಡುತ್ತಾರೆ.  ಆ ನಂತರ ಮರಳಿ ಹುಟ್ಟಿ ಬಂದ ರೂಪವೇ ಶೈಲಪುತ್ರಿಯ ಅವತಾರ. ಅದರಲ್ಲೂ ಪಾರ್ವತಿ ದೇವಿ ಹದಿನಾರು ವರ್ಷಗಳ ಕಾಲ ತಪಸ್ಸನ್ನು ಮಾಡಿ ಶಿವನನ್ನು ಮೆಚ್ಚಿಸಿ ಕೊಂಡ ಮೊದಲನೆಯ ಅವತಾರವೇ ಶೈಲಪುತ್ರಿಯ ಅವತಾರ. ಒಂಬತ್ತು ದಿನವೂ ದೇವಿ ಪಾರಾಯಣ ಮಾಡಿ,  ಆದಷ್ಟು ಮಡಿಯಿಂದ  ಬ್ರಹ್ಮಚರ್ಯದಿಂದ ಇರಿ. ಮಧು ಮಾಂಸ ಭಕ್ಷ್ಯಗಳಿಂದ ದೂರವಿರಿ. ಫಲಹಾರವನ್ನು ಸೇವಿಸಿ, ಉಪ್ಪು ಹುಳಿ ಕಾರದಿಂದ ದೂರವಿರಿ.  ನವರಾತ್ರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ವಿಶೇಷವಾಗಿ ಚಿತ್ತಾ ನಕ್ಷತ್ರದಲ್ಲಿದ್ದು ಅದು ಕುಜನ ನಕ್ಷತ್ರವಾಗಿ ರುವುದರಿಂದ ಸ್ವಲ್ಪ ತಳಮಳ ವಿರುತ್ತದೆ.  ಈ ಒಂಬತ್ತು ದಿನಗಳ ಕಾಲ ಶ್ರೀ ಚಕ್ರ ಆರಾಧನೆ,  ಸುಮಂಗಲಿಯರ ಪೂಜೆ,  ದೇವಿ ಪಾರಾಯಣ,  ದೇವಿ ಪೂಜೆ ನಿಮಗೆ ಅದ್ಭುತವಾದ ಫಲವನ್ನು ಕೊಡುತ್ತದೆ.  ಯಾರ ಜಾತಕದಲ್ಲಿ ರಾಹು ಕುಜ ಕೇತುವಿನ ಸಂಗಮವಿದೆ ಅವರು ಮತ್ತು ಮಾಟ ಮಂತ್ರದಿಂದ ಸಮಸ್ಯೆಯನ್ನು ಯಾರೂ ಎದುರಿಸುತ್ತಿದ್ದಾರೊ ಅಂತಹವರು ಹಲಸೂರಿನ ಕಾಳಿಕಾ ದೇವಾಲಯದ ಈ ಉದ್ಭವ ಮೂರ್ತಿ ದರ್ಶನ ಮಾಡಿ. ಮನೆಯಲ್ಲಿ ಒಂಬತ್ತು ದಿನ ಸ್ವಸ್ತಿಕ ಯಂತ್ರವನ್ನು ಇಟ್ಟು ಪೂಜೆ ಮಾಡಿ. ಕುಲದೇವರಿಗೆ ಗ್ರಾಮದೇವತೆಗೆ ಪೂಜೆ ಮಾಡಿ ಆ ನಂತರ ಮಿಕ್ಕ ದೇವತೆಗಳಿಗೆ ಪೂಜೆ ಮಾಡಿ.

ವೃಷಭ ರಾಶಿ : ಕ್ರೋದೋನ್ಮತ್ತರಾಗಿರುತ್ತೀರ ಜಾಗ್ರತೆ,  ಬಲಗೈಗೆ ಒಂದು ಪಂಚ ಲೋಹದ ಕಡಗವನ್ನು ಹಾಕಿಕೊಳ್ಳಿ.

ಮಿಥುನ ರಾಶಿ : ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆ ಮಕ್ಕಳ ವಿಚಾರದಲ್ಲಿ ಸ್ವಲ್ಪ ಎಚ್ಚರ ವಹಿಸಿ.

ಕರ್ಕಾಟಕ ರಾಶಿ : ಪೂರ್ಣ ಪ್ರಯತ್ನದಿಂದ ಅರ್ಧ ಗೆಲುವು ಕಟ್ಟಿಟ್ಟ ಬುತ್ತಿ ಮಕ್ಕಳ ಕಡೆ ಗಮನ ಕೊಡಿ,  ತಪ್ಪು ಮಾಡಿದ್ದರೆ ಕ್ಷಮಿಸಿ ಬಿಡಿ.

ಸಿಂಹ ರಾಶಿ : ಅಂದುಕೊಂಡಿರುವ ಕೆಲಸ ಕಾರ್ಯಗಳನ್ನು ಪರಿಶ್ರಮದಿಂದ ಕೈಗೂಡಿಸಿ ಕೊಳ್ಳುವಂತಹ ದಿನ.

ಕನ್ಯಾ ರಾಶಿ : ಕುಜನ ವಕ್ರತೆ ಸಪ್ತಮದಲ್ಲಿರುವುದರಿಂದ ಕುಟುಂಬ ದಾಂಪತ್ಯದಲ್ಲಿನೋವು ಎಳೆದಾಟವಿದೆ ಬಾಯ್ ಜಾರಿ ಮಾತನಾಡುವ ಸಂಭವವೂ ಕೂಡ ಇದೆ. ಒಂದು ಒಂಬತ್ತು ದಿನವೂ ತಪ್ಪದೇ ದೇವಿ ಪೂಜೆಯನ್ನು ಮಾಡಿ ಎಲ್ಲ ದೋಷಗಳು ನಿವಾರಣೆಯಾಗುತ್ತದೆ.

ತುಲಾ ರಾಶಿ : ಸ್ವಲ್ಪ ಗಲಿಬಿಲಿಯಿಂದ ಇರುತ್ತೀರ, ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಡಿ , ಇದರಿಂದ ಎಲ್ಲಾ ವಿಘ್ನಗಳು ದೂರವಾಗುತ್ತದೆ.

ವೃಶ್ಚಿಕ ರಾಶಿ : ಪರಿಶ್ರಮ ಜಾಸ್ತಿ ಫಲವು ಉಂಟು.

ಧನಸ್ಸು ರಾಶಿ : ಚೆನ್ನಾಗಿದೆ ಕುಜ ನಿಮಗೆ ಯೋಗಕಾರಕ ವಕ್ರವಾಗಿ ಆದರೂ ನಿಮಗೆ ಯೋಗವನ್ನು ತಂದುಕೊಡುತ್ತಾನೆ.

ಮಕರ ರಾಶಿ : ನಿಮಗೂ ಕುಜನಿಗೂ ಅಷ್ಟಕ್ಕಷ್ಟೇ ಧ್ವಂಸವೇ ಉದ್ಯೋಗದಲ್ಲೇ ತಳಮಳ, ಯುದ್ಧವೇ, ಆಗುತ್ತದೆ. ಕುಜ ವಕ್ರವಾಗಿ ರುವುದರಿಂದ ಮನೆಯಲ್ಲಿ ಸ್ವಸ್ತಿಕ ಯಂತ್ರವನ್ನ ನಿಟ್ಟು ಪೂಜೆ ಮಾಡಿಕೊಳ್ಳಿ.

ಕುಂಭ ರಾಶಿ : ಕುಜ ನಿಮ್ಮ ವಾಕ್ ಸ್ಥಾನದಲ್ಲಿದ್ದು ಭಾಗ್ಯಸ್ಥಾನದಲ್ಲಿ ಇರುವುದರಿಂದ  ಪರಿಶ್ರಮದಿಂದ ಭಾಗ್ಯ ವೃದ್ಧಿಯಾಗುತ್ತದೆ. ಆದರೆ ತುಂಬಾ ಕೋಪ ವಿರುತ್ತದೆ. ಈ ರಾಶಿಯವರು ಸಿಹಿಯನ್ನು ಅಮ್ಮನವರಿಗೆ ನೈವೇದ್ಯವನ್ನು ಇಟ್ಟು ಪೂಜಿಸಿ ಒಂಬತ್ತು ದಿನವೂ ಹಣೆಯಲ್ಲಿ ಕುಂಕುಮವನ್ನು ಧರಿಸಬೇಕು. ಪ್ರಸಾದವನ್ನು ಸೇವಿಸಿ.

ಮೀನ ರಾಶಿ : ಅಷ್ಟಮದಲ್ಲಿ ಚಂದ್ರ ಕುಜನ ಸಾರದಲ್ಲಿ ಇರುವುದರಿಂದ ಪ್ರಯಾಣದಲ್ಲಿ ವಿಘ್ನ,  ಮಕ್ಕಳ ವಿಚಾರದಲ್ಲಿ , ವ್ಯವಹಾರ ವಿಚಾರದಲ್ಲಿ, ಪಾಲುಗಾರಿಕೆ ವಿಚಾರದಲ್ಲಿ ಏರುಪೇರು ವಿಘ್ನ ಉಂಟಾಗುತ್ತದೆ ಎಚ್ಚರಿಕೆ. ಈ ಒಂಬತ್ತು ದಿನವೂ ದೇವಿಯನ್ನು ಪೂಜಿಸಿ ಒಳ್ಳೆಯದಾಗುತ್ತದೆ.

All Rights reserved Namma  Kannada Entertainment.

Advertisement
Share this on...

Latest from ಜ್ಯೋತಿಷ್ಯ

ಜೀವನದಲ್ಲಿ ಯಶಸ್ಸು ದೊರೆಯಲೆಂದು ಹೆಸರು ಬದಲಿಸಿಕೊಂಡಿದ್ದೀರಾ…ಹಾಗಿದ್ದಲ್ಲಿ ನೀವು ಇದನ್ನು ಓದಲೇಬೇಕು

ಯಾವುದೇ ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಗುರುತಿಸಲು, ಸಂಬೋಧಿಸಲು ಹೆಸರು ಎನ್ನುವುದು ಬಹಳ ಮುಖ್ಯವಾಗಿದೆ. ಹಿಂದಿನ ಕಾಲದಲ್ಲಿ ಅದರಲ್ಲೂ…

Go to Top