ಹೊಲದಲ್ಲಿ ಈ ಅಕ್ಕನ ಎಣ್ಣೆ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಗಳ ಸುರಿಮಳೆ!

in ಕನ್ನಡ ಮಾಹಿತಿ/ಮನರಂಜನೆ 991 views

ಮನಸ್ಸಿಗೆ ಬೇಸರವಾದಗ, ನಮ್ಮ ಬೇಸರವನ್ನು ಕಳೆಯುವದೇ ಹಾಡು.
ಊರಿಂದ ಊರಿಗೆ ಪ್ರಯಾಣಿಸುವಾಗ, ನಮ್ಮ ಆತ್ಮೀಯ ಸ್ನೇಹಿತನೇ ಹಾಡು.
ಸಮಯ ಮುಂದೆ ಚಲಿಸುತ್ತಲೇ ಇಲ್ಲ ಎಂದೆನಿಸುವಾಗಲೂ ನಮ್ಮ ಜೊತೆಯಲ್ಲಿ ನಿಲ್ಲುವುದು ಹಾಡು.
ಪ್ರತಿನಿತ್ಯ ಮುಂಜಾನೆ ದೇವಾಲಯಗಳು ತೆರೆಯುವ ಸಮಯದಿಂದ ಹಿಡಿದು, ಮನೆಯಲ್ಲಿ ಅಮ್ಮ ಅಥವಾ ಮನೆಯ ಹಿರಿಯರು ಯಾರಾದರು ‘ಲೇಟ್ ಆಯ್ತು ಮಲ್ಕೋ’ ಎಂದು ಗದರುವವರೆಗು, ಈ ಹಾಡು ಅಥವಾ ಸಂಗೀತ ನಮ್ಮ ಜೀವನದಲ್ಲಿ ಬೆರೆತು ಹೋಗಿರುತ್ತದೆ ಹಾಗೂ ಜೀವನದ ಅವಿಭಾಜ್ಯ ಅಂಶವಾಗಿ ಬಿಟ್ಟಿದೆ. ಮುಂಜಾನೆ ಅಲರಾಮ್ ನಲ್ಲಿ ತಮ್ಮ ನೆಚ್ಚಿನ ಹಾಡಿನಿಂದ ಎಚ್ಚರವಾಗುತ್ತಾ, ವ್ಯಾಯಮ ಮಾಡಬೇಕಾದರೆ ಭಜರಂಗಿ ಹನುಮನ ಗೀತೆ ಕೇಳುತ್ತಾ,  ಸ್ನಾನದ ಕೋಣೆಯಲ್ಲಿ ನೆಚ್ಚಿನ ಗೀತೆ ಹಾಡುತ್ತಾ,  ತೊಂಬತ್ತರ ದಶಕದ ರೆಟ್ರೋ ಸಾಂಗ್ ಕೇಳುತ್ತಾ ನಾಷ್ಟವನ್ನು ಸವಿದು, ಕೆಲಸಕ್ಕೋಗುವಾಗ ಮತ್ತು ಬರುವಾಗ  ತಮ್ಮ ಪ್ರಿಯತಮ/ಪ್ರಿಯತಮೆಯ ಗುಂಗಲ್ಲಿ ರೋಮ್ಯಾಂಟಿಕ್ ಹಾಡುಗಳನ್ನು ಕೇಳಿಕೊಂಡು, ಮತ್ತೆ ರಾತ್ರಿ ಸುಮಧುರ ಸಂಗೀತ ಕೇಳುತ್ತಾ ಮಲಗುವುದು ಅದೇಷ್ಟೋ ಜನರ ಅಭ್ಯಾಸವಾಗಿದೆ. ಇದೆಲ್ಲವನ್ನು ನಮ್ಮ ಜೀವನಕ್ಕೆ ಅಭ್ಯಾಸ ಮಾಡಿಸಿದ ಸಿನಿಮಾ ತಂಡದವರಿಗೆ, ಗೀತೆರಚನಗಾರರಿಗೆ, ಸಂಗೀತ ನಿರ್ದೇಶಕರಿಗೆ ಮತ್ತು ಗಾಯಕರಿಗೆಲ್ಲರಿಗೂ ಧನ್ಯವಾದ ತಿಳಿಸಲೇ ಬೇಕು.

Advertisement

Advertisement

ಇನ್ನು ಕೆಲವೊಂದು ಹಾಡುಗಳು ನಮ್ಮ ಜೀವನದ ಭಾವನೆಯಲ್ಲಿ ಬೆರತು ಹೋಗಿರುತ್ತದೆ. ನಮ್ಮ ಜೀವನಕ್ಕೆ ತಕ್ಕ ಹಾಗೆ ಕೆಲವೊಂದು ಹಾಡುಗಳು ಕೂಡ ಇರುತ್ತದೆ. ವರನಟ ಡಾ.ರಾಜ್ , ಪಿಬಿಶ್ರೀ, ಎಸ್ ಪಿ ಬಿ ಅವರ ಕಂಠದಲ್ಲಿ  ಬಂದಿರುವ ಧ್ವನಿಗಳನ್ನು ಯುಗಯುಗ ಕಳೆದರು ಮರೆಯಲು ಸಾಧ್ಯವಿಲ್ಲ. ಇನ್ನು ಅವರ ಕಂಠಕ್ಕೆ ಅಷ್ಟು ಬಲ ಬರಲು ಕಾರಣ ಚಿ.ಉದಯ ಶಂಕರ್ ಹಾಗೂ ಹಂಸಲೇಖ ರಂತಹ ಮಹಾನ್ ಕವಿಗಳು ತಮ್ಮ ಬರವಣಿಗೆಯಿಂದ ಮೂಡಿಸಿದ ಅಕ್ಷರ ಪ್ರಭಾವದಿಂದಲೇ ಎಂದರೆ ತಪ್ಪಾಗಲಾರದು. ಆದ ಕಾರಣದಿಂದಲೇ ಇಂದಿಗೂ ಕೂಡ ಅವರ ಹಾಡು ಸಂಗೀತ ಜೀವಂತವಾಗಿದೆ. ಇದೀಗ ಕಾಲ ಬದಲಾಗಿದೆ, ಅಕ್ಷರಗಳಿಗಿಂತ ಹೆಚ್ಚಾಗಿ ಮ್ಯೂಸಿಕ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಹಿಪ್ ಹಾಪ್ , ರ್ಯಾಪ್ ನಂತಹ ಮ್ಯೂಸಿಕಲ್ ಆಲ್ಬಮ್ ಗಳಿಗೆ ಯುವಪೀಳಿಗೆಗಳು ಮಾರು ಹೋಗಿದ್ದಾರೆ. ಇದರ ಜೊತೆಗೆ ಎಣ್ಣೆ ಹಾಡುಗಳ ಹಾವಳಿ ಬೇರೆ.

Advertisement

ಕನ್ನಡ ಚಿತ್ರರಂಗದಲ್ಲಿ ಮೂಡಿ ಬರುತ್ತಿರುವ ಯಾವುದೇ ಎಣ್ಣೆ ಹಾಡು ತೆಗೆದುಕೊಳ್ಳಿ, ಎಲ್ಲವೂ ಕೂಡ ಸೂಪರ್ ಹಿಟ್ ಹಾಡುಗಳೇ ಆಗಿವೆ. ಈ ರೀತಿಯಾದ ಟ್ರೇಂಡ್ ಅನ್ನು ಹುಟ್ಟುಹಾಕಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗೀತ ರಚನೆಗಾರ ಯೋಗರಾಜ್ ಭಟ್ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರು. ಈ ತ್ರೀಮೂರ್ತಿ ಗಳಿಂದ ಬಂದ ಎಣ್ಣೆ ಹಾಡುಗಳೆಲ್ಲಾ ಸೂಪರ್ ಹಿಟ್ ಹಾಡುಗಳೆ. ಇವರ ನಡುವೆ ಬಿಗ್ ಬಾಸ್ ಸೀಸನ್  ೬ ರ ರನ್ನರಪ್ ಹಾಗೂ ಖ್ಯಾತ ಗಾಯಕ ನವೀನ್ ಸಜ್ಜು ಅವರನ್ನು ಮರೆಯುವಂತಿಲ್ಲ. ಬಡತನದಲ್ಲಿ ಬೆಳೆದು, ಮಂಡ್ಯದಲ್ಲಿ ರಸಸಂಜೆ ಕಾರ್ಯಕ್ರಮಗಳಲ್ಲಿ ಹಾಡುತ್ತಾ, ಇದೀಗ ಖ್ಯಾತ ಗಾಯಕರಾಗಿರುವುದು ನಿಜಕ್ಕೂ ಶ್ಲಾಘನೀಯ. ಅವರ ಮುಗ್ಧ ಮನ್ಸಸ್ಸಿನಿಂದಲೇ ಅನಿಸುತ್ತದೇ ಕರುನಾಡಲ್ಲಿ ಅವರಿಗೆ ಅಭಿಮಾನಿ ಬಳಗ ಹೆಚ್ಚಿರುವುದು. ಈ ಗಾಯಕನ ಕಂಠ ಸಿರಿಯಲ್ಲಿ ಬಂದಿರುವ ಹಾಡುಗಳೆಲ್ಲಾ ಯ್ಯೂಟ್ಯೂಬ್ ನಲ್ಲಿ ಟ್ರೆಂಡ್ ಹುಟ್ಟು ಹಾಕುತ್ತಿರುತ್ತದೆ. ಅದೇ ರೀತಿ  ೨೦೧೭ ರಲ್ಲಿ ಬಿಡುಗಡೆಯಾದ, ಆರ್ ಚಂದ್ರು ನಿರ್ದೇಶನದಲ್ಲಿ ದುನಿಯಾ ವಿಜಿ ಅವರು ನಾಯಕ ನಟನಾಗಿ ಅಭಿನಯಿಸಿದ್ದ, ಕನಕ ಚಿತ್ರದ ‘ಎಣ್ಣೆ ನಿಮ್ದು ಊಟ ನಮ್ದು’ ಹಾಡು ದೊಡ್ದ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ಆ ಸಮಯದಲ್ಲಿ ಈ ಹಾಡು ಯ್ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವ್ಯೂಸ್ ಪಡೆದುಕೊಂಡ ಹಾಡಾಗಿತ್ತು. ಅಲ್ಲದೇ ಈಗಲೂ ಕೂಡ ಈ ಹಾಡು ಮಧ್ಯ ಪ್ರಿಯರ ನೆಚ್ಚನ ಹಾಡಾಗಿದೆ.

Advertisement

ಇದೀಗ ಈ ಹಾಡನ್ನು ಹಳ್ಳಿಯಲ್ಲಿ ಭತ್ತದ ನಾಟಿ ಹಾಕುತ್ತಿರುವ ಮಹಿಳೆ ತನ್ನದೇ ಆದ ಶೈಲಿಯಲ್ಲಿ ಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಹಾಗೂ ನೋಡಗರನ್ನು ನಗೆಗಡಲಲ್ಲಿ ತೇಲಿಸಿದೆ.  ಸಾಮಾನ್ಯವಾಗಿ ಭತ್ತ ಅಥವಾ ರಾಗಿ ನಾಟಿ ಮಾಡುವ ಮಹಿಳೆಯರು ಜನಪದ ಹಾಡೋ ಅಥವಾ ಸೋಬಾನ ಗೀತೆಯೋ ಹಾಡುತ್ತಾ ತಮ್ಮ ಕೆಲಸವನ್ನು ಮಾಡುತ್ತಾರೆ. ಯಾಕೆಂದರೆ ಪದ ಹಾಡುತ್ತ ಕೆಲಸ ಮಾಡಿದರೆ ಅವರಿಗೆ ಆಯಾಸ ಆಗುವುದಿಲ್ಲ ಮತ್ತು ಬೇಸರವಾಗುವುದಿಲ್ಲ. ಆದರೆ ಈ ಮಹಿಳೆ ಹಾಡುವ ಹಾಡನ್ನು ಕೇಳಿ ನೆರೆದಿದವರೆಲ್ಲ ಬಿಕ್ಕಿ ಬಿಕ್ಕಿ ನಕ್ಕಿದ್ದಾರೆ.


ಹೌದು ಆ ಮಹಿಳೆ ಭತ್ತವನ್ನು ಕೈಯಲ್ಲಿ ಹಿಡಿದು, ತನ್ನದೇ ಆದ ಶೈಲಿಯಲ್ಲಿ ನರ್ತಿಸುತ್ತಾ, ‘ಮಾಡುಮ ಎಣ್ಣೆ ಪಾರ್ಟಿ ಮಾಡುಮ’ ಎಂದು ನರ್ತಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವತಃ  ನವೀನ ಸಜ್ಜು ಅವರು ಹಂಚಿಕೊಂಡಿದ್ದು, ‘ಹೆಂಗೆ ನಮ್ ಅಕ್ದೀರು’ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಹಳ ಇಷ್ಟ ಪಟ್ಟಿದ್ದಾರೆ. ಜೊತೆಗೆ ‘ಸೂಪರ್ ಆಂಟಿ….ನಿಮ್ಮ ಮುಖದಲ್ಲಿ ಆ ನಗು ಸದಾ ಕಾಲ ಹೀಗೆ ಇರಲಿ’ ಎಂದು ಓರ್ವ ವ್ಯಕ್ತಿ ಆಶಿಸಿದ್ದರೆ ಮತ್ತೊಬ್ಬರು ‘ಪ್ರತಿ ಸಿನಿಮಾದಲ್ಲಿ ಕಾಮಿಡಿಯನ್ ಇರೋ ತರ, ನಮ್ ಹಳ್ಳಿ ಕಡೆ ಹೊಲದಲ್ಲಿ ಕೆಲಸ ಮಾಡೋ ಗುಂಪಲ್ಲಿ ಈ ತರ ತಮಾಷೆಮಾಡೋರು ಇರ್ತಾರೆ. ಅವ್ರು ಮಾಡೋ ತಮಾಷೆಗೆ ನಗುತ ಎಲ್ಲರೂ ತಮ್ಮ ಕೆಲಸದ ನೋವು, ಭಾರ, ದಣಿವು, ಮರೆಯುತ್ತಾರೆ’ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ‘ಇದು ಜೀವನದ ಅತ್ಯುತ್ತಮ ಸುಖಕರವಾದ ಸಂತೋಷದ ಕ್ಷಣಗಳು’ ಎಂದು ಕೆಲವರು ಆ ವಿಡಿಯೋ ನೋಡಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

Advertisement
Share this on...