ಗಜ ಚಿತ್ರದ ನಾಯಕಿ ನವ್ಯ ನಾಯರ್ ಇದ್ದಕ್ಕಿದ್ದಂತೆ ಸಿನೆಮಾದಿಂದ ದೂರ ಆಗಿದ್ದೇಕೆ ? ಈಗ ಏನು ಮಾಡುತ್ತಿದ್ದಾರೆ ಗೊತ್ತಾ ?

in ಮನರಂಜನೆ/ಸಿನಿಮಾ 575 views

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಜ ಸಿನಿಮಾದ ನಾಯಕಿ ನವ್ಯಾ ನಾಯರ್ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಮುಖದ ಸುಂದರ ಚೆಲುವೆ ತಮ್ಮ ಮುಂದಾದ ಅಭಿನಯದಿಂದ ಕನ್ನಡ ಸಿನಿ ರಸಿಕರ ಮನವನ್ನು ಗೆದ್ದಿದ್ದರು. ಗಜ ಸಿನಿಮಾವನ್ನು ನೋಡಿದ ಪ್ರೇಕ್ಷಕರು ನವ್ಯಾ ಮತ್ತು ದರ್ಶನ್ ಒಳ್ಳೆಯ ಆನ್ ಸ್ಕ್ರೀನ್  ಜೋಡಿ ಎಂದು ಹೇಳುತ್ತಿದ್ದರು. ಇಂತಹ ಅದ್ಭುತ ನಟಿ ಚಿತ್ರರಂಗದಿಂದ ಇದ್ದಕ್ಕಿದ್ದಂತೆ ದೂರವಾದರು.  ನವ್ಯಾ ನಾಯರ್ ಎಲ್ಲಿದ್ದಾರೆ ?  ಏನು ಮಾಡುತ್ತಿದ್ದಾರೆ ?  ಎಂಬುದನ್ನು ನಾವು ಇಲ್ಲಿ  ತಿಳಿಸಿಕೊಡುತ್ತೇವೆ. ಮೊದಲ ಸಿನಿಮಾದಲ್ಲೆ ಕನ್ನಡಿಗರ ನಿದ್ದೆ ಕದ್ದಿದ್ದ ನವ್ಯ.  ಆ ನಂತರ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದು  ತುಂಬಾ ವಿರಳ.  ವರ್ಷಗಳ ಬಳಿಕ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಕೂಡಾ ಗಜ ಸಿನಿಮಾ ತಂದುಕೊಟ್ಟ ಖ್ಯಾತಿಯನ್ನು ಈ ಸಿನಿಮಾಗಳು ತಂದುಕೊಡಲಿಲ್ಲ. ಮಲಯಾಳಂನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನವ್ಯ, ದೃಶ್ಯ ಚಿತ್ರದ ಮೂಲಕ ಕನ್ನಡ ಚಲನಚಿತ್ರಕ್ಕೆ ಮತ್ತೆ ವಾಪಸ್ಸು ಬಂದರು.

Advertisement

 

Advertisement

Advertisement

ನವ್ಯಾ ಮಲಯಾಳಂನಲ್ಲಿ ಖ್ಯಾತಿ ಗಳಿಸುತ್ತಿದ್ದಂತೆಯೇ ತಮಿಳು ಚಿತ್ರರಂಗಕ್ಕೂ  ಕೂಡ ಕಾಲಿಡುತ್ತಾರೆ. ಆನಂತರ 2007 ರಲ್ಲಿ ಗಜ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ  ಪ್ರವೇಶ ಮಾಡಿದ್ದರು.  ನನ್ನ ಸಿನಿಮಾ ನವ್ಯಾಗೆ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ. ನವ್ಯ ಕನ್ನಡ ಸಿನಿಪ್ರಿಯರ ಮನಸ್ಸನ್ನು ಗೆಲ್ಲುತ್ತಾರೆ. ಗಜ ಸಿನಿಮಾದ ನಂತರ ನಮ್ಮ ಯಜಮಾನರು , ಭಾಗ್ಯದ ಬಳೆಗಾರ , ಬಾಸ್ ಮತ್ತು ದೃಶ್ಯ ಸಿನಿಮಾಗಳಲ್ಲಿ ಮಿಂಚಿದ್ದಾರೆ. ನವ್ಯಾ ನಾಯರ್  ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ನವ್ಯಾ ಮುಂಬೈ ಮೂಲದ ಉದ್ಯಮಿ  ಸಂತೋಷ್ ಮೆನನ್ ಎಂಬುವವರ ಜೊತೆ  2010 ಜನವರಿಯಲ್ಲಿ ಸಪ್ತಪದಿಯನ್ನು ತುಳಿಯುತ್ತಾರೆ. ಇವರಿಗೆ ಒಬ್ಬ ಮಗನಿದ್ದಾನೆ ಅವನ ಹೆಸರು ಸಾಯಿಕೃಷ್ಣ. ಮದುವೆಯ ನಂತರ ಚಿತ್ರರಂಗದಲ್ಲಿ ಅವಕಾಶಗಳು ಕ್ರಮೇಣ ಕಡಿಮೆಯಾದವು.

Advertisement

 

ಆದ್ದರಿಂದ ಗಂಡ ಮತ್ತು ಮಗನ ಜತೆ ಸುಖ ಜೀವನವನ್ನು  ನಡೆಸುತ್ತಿದ್ದಾರೆ.  ನಿಮ್ಮ ಪ್ರಕಾರ ನವ್ಯಾ ನಾಯರ್ ಮತ್ತೆ ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಬೇಕಾ? ಬೇಡವಾ?  ಹಾಗೂ ನವ್ಯಾ ನಾಯರ್ ಅಭಿನಯಿಸಿದ ಕೆಲವೇ ಸಿನಿಮಾಗಳಲ್ಲಿ ನಿಮಗೆ ಇಷ್ಟವಾದ ಸಿನಿಮಾ ಯಾವುದು ಎಂದು ಕಮೆಂಟ್ ಮಾಡಿ ತಿಳಿಸಿ.

Advertisement
Share this on...