ಗಜ ಚಿತ್ರದ ನಾಯಕಿಯ ಮಗ ಮಾಡುತ್ತಿರುವುದಾದರು ಏನು ?

in ಮನರಂಜನೆ/ಸಿನಿಮಾ 339 views

ಮಲಯಾಳಂ ಬೆಡಗಿ ನವ್ಯಾನಾಯರ್ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವೇ.. ಗಲ್ ಗಲ್ ಅಂತ ಹುಡುಗರ ಎದೆಗೆ ಒದ್ದು, ಭಾಗ್ಯದ ಬಳೆಗಾರ ಶಿವಣ್ಣನ ಜೊತೆ ತೆರೆಹಂಚಿಕೊಂಡು, ಸಾಹಸಿಂಹ ನಿಗೆ ನಮ್ ಯಜಮಾನ್ರು ಎಂದು ಹೇಳಿ ಕನ್ನಡಿಗರ ಮನಸ್ಸು  ಗೆದ್ದವರು ನಟಿ ನವ್ಯಾ ನಾಯರ್. ಕನ್ನಡದಲ್ಲಿ ಅಭಿನಯಿಸಿದ್ದು ಬೆರಳಿಣಿಕೆಯಷ್ಟು ಮಾತ್ರ. ಅದರೇ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಜೊತೆ ಗಜ ಎಂಬ ಸಿನಿಮಾದಲ್ಲಿ ಅಭಿನಯಿಸಿ ಇನ್ನು ದಶಕ ಕಳೆದರು ಅವರನ್ನು ಮರೆಯದಂತೆ ಮಾಡಿ ಬಿಟ್ಟಿದ್ದಾರೆ. ೨೦೦೦ ರಲ್ಲಿ ಪ್ರಮುಖ ನಟಿಯಾಗಿ ಮಿಂಚಿದ್ದ ಅವರು ಕನ್ನಡ, ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ೫೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಸಿನಿ ಜೀವನದಲ್ಲಿ ಎರಡು ಕೇರಳ ರಾಜ್ಯ ಚಲನಚಿತ್ರ ರಾಜ್ಯ ಪ್ರಶಸ್ತಿ, ಅತ್ಯುತ್ತಮ ನಟಿಗಾಗಿ  ಫಿಲ್ಮ್‌ಫೇರ್ ಪ್ರಶಸ್ತಿ, ಕಲೈಮಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮೂಲತಃ ಕೇರಳದವರಾದ ಅವರು  ಅಕ್ಟೋಬರ್ 14, 1985 ರಂದು ರಾಜು ಮತ್ತು ವೀಣಾ ರಾಜು ದಂಪತಿಗೆ ಜನಿಸಿದರು.  21 ಜನವರಿ 2010 ರಂದು ಮುಂಬೈ ಮೂಲದ ಉದ್ಯಮಿ ಸಂತೋಷ್ ಮೆನನ್ ಅವರನ್ನು ವಿವಾಹವಾಗಿದ್ದು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಟೆಲಿವಿಶನ್ ಶೋಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತ ಸುಖ ಜೀವನ ನಡೆಸುತ್ತಿದ್ದಾರೆ.

Advertisement

Advertisement

2001ರಿಂದ 2014ರವರೆಗೆ  ಮಲಯಾಳಂ, ಕನ್ನಡ, ತಮಿಳು ಭಾಷೆಯ ಸಿನಿಮಾಗಳಲ್ಲಿ ನಿರತರಾಗಿದ್ದ ನಟಿ ನವ್ಯಾ ನಾಯರ್ ಕನ್ನಡದಲ್ಲಿ ವಿಷ್ಣುವರ್ಧನ್ ಅವರ ಜೊತೆ ಯಜಮಾನ್ರು, ರವಿ ಚಂದ್ರನ್ ಅವರ ಜೊತೆ ‘ದೃಶ್ಯ’, ದರ್ಶನ್ ಅವರ ಜೊತೆಗೆ ‘ಗಜ’, ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಜೊತೆಗೆ ‘ಭಾಗ್ಯದ ಬಳೆಗಾರ’ ಸಿನಿಮಾದಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದರ್ಶನ್ ಅವರ ಗಜ  ಚಿತ್ರದ ಮೂಲಕ   ಕನ್ನಡದಲ್ಲಿ ಸಿನಿ ಪಯಣವನ್ನು ಪ್ರಾರಂಭಿಸಿದ ಅವರು, ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡರು. ವಿವಾಹವಾದ ಬಳಿಕ ನವ್ಯಾನಾಯರ್ ಅವರು ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ.  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ  ‘ದೃಶ್ಯ’ ಚಿತ್ರದಲ್ಲಿ ನಟಿಸಿದ್ದೇ ಕೊನೆ ಆಗಿತ್ತು. ನಂತರ ತಮ್ಮ ಕುಟುಂಬದ ಜೊತೆಗೆ  ಸಮಯ ಕಳೆಯಲು ಆರಂಭಿಸಿದ ಅವರು,  ಇದೀಗ ‘ಒರುತಿ’ ಎಂಬ ಮಳಯಾಳಂ ಚಿತ್ರಕ್ಕೆ ಸಹಿ ಹಾಕಿದ್ದಾರೆ.

Advertisement

Advertisement

ನವ್ಯಾ ಅವರಿಗೆ  ಸಾಯಿಕೃಷ್ಣ ಎಂಬ ಮುದ್ದಾದ ಗಂಡು ಮಗನಿದ್ದು,  ಕೃಷ್ಣನಿಗೆ ಇದೀಗ ಬರೋಬ್ಬರಿ 10 ವರುಷವಾಗಿದೆ. ಮದುವೆ ನಂತರದಲ್ಲಿ ನವ್ಯಾ ಕುಟುಂಬದ ಜೊತೆ ಕಾಲ ಕಳೆಯುತ್ತ ಚಿತ್ರರಂಗದಿಂದ ದೂರ ಉಳಿದಿದ್ದರು. ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು ಸದ್ಯಕ್ಕೆ ನನ್ನ  ಜೀವನ ಬಹಳ ಚೆನ್ನಾಗಿದೆ,  ಸಿನಿಮಾಕ್ಕೆ ಹಿಂತಿರುಗುವ ಯೋಚನೆ ಇಲ್ಲ ಎಂದು ಅವರು ಹೇಳಿಕೊಂಡಿದ್ದರು. ಚಿತ್ರರಂಗದಿಂದ ದೂರ ಉಳಿದ ಮೇಲೆ ಅನೇಕ ಡ್ಯಾನ್ಸ್ ರಿಯಾಲಿಟಿ ಶೋಗಳ ನಿರ್ಣಾಯಕರಾಗಿ ನವ್ಯಾ ಕೆಲಸ ಮಾಡಿದ್ದಾರೆ. ಮದುವೆ ನಂತರವೂ  ಅವರು ಯಾವುದೇ ಅಭ್ಯಂತರವಿಲ್ಲದೆ ನಟಿಸಬಹುದು ಎಂದು ಆಕೆಯ ಗಂಡ  ಪ್ರೋತ್ಸಾಹ ನೀಡಿದ್ದಾರಂತೆ. ತನ್ನ ಗಂಡನಿಗೆ ನನ್ನ ಹೆಂಡತಿಯೊಬ್ಬಳು ನಟಿ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಪಡುತ್ತಾರಂತೆ. ಹಲವು ಸಮಯದಿಂದ ಕಥೆಗಳನ್ನು ಕೇಳುತ್ತಿದ್ದ ನವ್ಯಾ  ‘ಒರುತಿ’ ಎಂಬ ಮಲಯಾಳಂ  ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ನವ್ಯಾ ಅವರು ತೆರೆಯ ಮೇಲಿನ ಮಗನಿಗೆ ನವ್ಯಾ ಅವರ ಸ್ವಂತ ಮಗ ಸಾಯಿಕೃಷ್ಣ ಧ್ವನಿ ನೀಡಲಿದ್ದಾರಂತೆ. ಈ ಮೂಲಕ ಬಣ್ಣದ ಲೋಕದ ಕೆಲಸಗಳಲ್ಲಿ ನವ್ಯಾರವರ  ಮಗ ಕೂಡ ಸಕ್ರಿಯರಾಗುತ್ತಿದ್ದಾರೆ. 8 ವರ್ಷಗಳ ನಂತರ ಮಲಯಾಳಂ ಚಿತ್ರರಂಗಕ್ಕೆ ನವ್ಯಾ ಮತ್ತೆ ಕಂಬ್ಯಾಕ್ ಮಾಡುತ್ತಿದ್ದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Advertisement
Share this on...