ಖ್ಯಾತ ನಟಿಗೆ ಕೊರೊನಾ ಪಾಸಿಟಿವ್​…ಭಯ ಬೇಡ, ಬೇಗ ಕ್ಯೂರ್ ಆಗ್ತೀನಿ ಅಂದ್ರು ಮೈಸೂರು ಹುಡುಗಿ

in ಕನ್ನಡ ಮಾಹಿತಿ/ಮನರಂಜನೆ 121 views

ದಿನ ಕಳೆದಂತೆ ಮನೆಯಿಂದ ಹೊರ ಬರಲು ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಿಗೆ ಹೋದರೂ ಭಯ, ಯಾವ ವಸ್ತುಗಳನ್ನು ಮುಟ್ಟಲೂ ಭಯ, ಮಾಸ್ಕ್​ ಧರಿಸಿ, ಕೈಯ್ಯಲ್ಲಿ ಸ್ಯಾನಿಟೈಸರ್ ಹಿಡಿದು ಜನರಿಂದ ದೂರ ಇರುವಂತ ಸ್ಥಿತಿ ಎಲ್ಲರಿಗೂ ಎದುರಾಗಿದೆ.ಇನ್ನು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೊರೊನಾ ಯಾವ ಸಮಯದಲ್ಲಿ ನಮ್ಮನ್ನು ಒಕ್ಕರಿಸಿಕೊಳ್ಳುವುದೋ ಹೇಳಲು ಸಾಧ್ಯವಿಲ್ಲ. ಈ ನಡುವೆ ಖ್ಯಾತ ನಟಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಆಕೆ ಮತ್ತ್ಯಾರೂ ಅಲ್ಲ, ಮೈಸೂರಿನ ನವ್ಯಾ ಸ್ವಾಮಿ. ನವ್ಯಾ ಕನ್ನಡದ ವಾಹಿನಿಗಳಲ್ಲಿ ನಿರೂಪಕಿಯಾಗಿ ಕರಿಯರ್ ಆರಂಭಿಸಿದವರು. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ ನವ್ಯಾ, ರಕ್ಷಿತಾ ಪ್ರೇಮ್ ನಡೆಸಿಕೊಡುವ ಸ್ವಯಂವರ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಮತ್ತಷ್ಟು ಪರಿಚಯವಾದರು. ಆದರೆ ಕೆಲವು ದಿನಗಳ ನಂತರ ಅವರು ಕಾಣಿಯಾದರು.

Advertisement

Advertisement

ಎಷ್ಟೋ ವರ್ಷಗಳ ನಂತರ ನವ್ಯಾ ಸ್ವಾಮಿ ತೆಲುಗು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ದೊರೆತಿದ್ದರಿಂದ ಇದೀಗ ಅವರು ಹೈದರಾಬಾದ್​​ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ‘ಆಮೆ ಕಥಾ’, ‘ನಾ ಪೇರು ಮೀನಾಕ್ಷಿ’ ಧಾರಾವಾಹಿಗಳು ನವ್ಯಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಇದೀಗ ನವ್ಯಾ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ನವ್ಯಾ ಅವರಿಗೆ ಕೊರೊನಾ ಇದೆ ಎಂದು ತಿಳಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

 

Advertisement
View this post on Instagram

 

#staystrong #staypositive #donotpanic #covid19 #fightforcorona #gocoronago #fighttogether #morepower #thankful #navyaswamy

A post shared by Navya Swamy (@navya_swamy) on

‘ಕಳೆದ 3-4 ದಿನಗಳಿಂದ ನನಗೆ ಬಹಳ ತಲೆ ನೋವು ಹಾಗೂ ಸುಸ್ತು ಇತ್ತು. ಡಾಕ್ಟರ್ ಬಳಿ ಹೋದಾಗ ಅವರ ಸಲಹೆ ಮೇರೆಗೆ ಕೊರೊನಾ ಟೆಸ್ಟ್​​​ಗೆ ಒಳಗಾದೆ. ಆದರೆ ವರದಿಯಲ್ಲಿ ಪಾಸಿಟಿವ್ ದೃಢವಾಗಿದೆ. ಸದ್ಯಕ್ಕೆ ನಾನು ಚಿಕಿತ್ಸೆಯಲ್ಲಿದ್ದೇನೆ’ ಎಂದು ನವ್ಯಾ ಹೇಳಿಕೊಂಡಿದ್ಧಾರೆ. ಇದುವರೆಗೂ ಇಬ್ಬರು ತೆಲುಗು ಧಾರಾವಾಹಿ ನಟಿಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದರಿಂದ ಆ ಧಾರಾವಾಹಿಗಳ ಚಿತ್ರೀಕರಣವನ್ನು ರದ್ದುಗೊಳಿಸಲಾಗಿತ್ತು. ಇದೀಗ ನವ್ಯಾಗೆ ಕೂಡಾ ಕೊರೊನಾ ಸೋಂಕು ತಗುಲಿದ್ದು, ಆಕೆಯೊಂದಿಗೆ ಸಂಪರ್ಕದಲ್ಲಿದ್ದವರು ಕ್ವಾರಂಟೈನ್​​​ನಲ್ಲಿದ್ದಾರೆ. ನವ್ಯಾ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Advertisement
Share this on...