ಖ್ಯಾತ ಜನಪ್ರಿಯ ಸೀರಿಯಲ್ ನಟನಿಗೂ ಅಂಟಿದ ಮಹಾಮಾರಿ ಕೊರೋನಾ..!

in ಕನ್ನಡ ಮಾಹಿತಿ/ಮನರಂಜನೆ 64 views

ಈ ಹೆಮ್ಮಾರಿಯ ಕಾಟದಿಂದ ಯಾವಾಗ ಮುಕ್ತಿ ಆಗುತ್ತೋ ಇದಕ್ಕೆ ಸರಿಯಾದ ಲಸಿಕೆ ಯಾವಾಗ ಸಿಗುತ್ತೊ ಎಂಬಂತಾಗಿದೆ. ಹೌದು ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಲೇ ಇದೆ. ಇದೀಗ ಖ್ಯಾತ ನಟಿಯಿಂದಲೇ ಈ ನಟನಿಗೂ ಕೋರೋನಾ ಬಂದಿದೆ ಎಂದು ಜನಪ್ರಿಯ ಸೀರಿಯಲ್ ನಟ ತಿಳಿಸಿದ್ದಾರೆ. ಜೊತೆಗೆ ಆ ನಟಿಯಿಂದಲೇ ನಾನು ಈಗ ಧೈರ್ಯವಾಗಿರೋದು ಅಂತಲೂ ನಟ ತಿಳಿಸಿದ್ದಾರೆ. ದೇಶದ್ಯಾಂತ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ತುತ್ತಾಗಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಲಾಕ್ ಡೌನ್ ಸಡಿಲಿಕೆಯ ಬಳಿಕ ಇದು ಹೆಚ್ಚಾಗಿರುವುದು ಮಾತ್ರ ಸತ್ಯ ಸಂಗತಿ. ವಿಜ್ಞಾನಿಗಳ ಪ್ರಕಾರ ಇದು ಗಾಳಿಯಲ್ಲೂ ಕೂಡ ಹರಡುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಇಂದು ತಿಳಿಸಿದ್ದಾರೆ. ಇದರಿಂದ ಜನರು ಮತ್ತಷ್ಟು ಭಯ ಬೀಳುವಂತೆ ಮಾಡಿದೆ. ಅಂದ ಹಾಗೆ ಆ ನಟ ಯಾರು..? ಈಗ ಹೇಗಿದ್ದಾರೆ ಗೊತ್ತಾ..?

Advertisement


ಮೊನ್ನೆ ಮೊನ್ನೆಯಷ್ಟೇ ಕನ್ನಡ ಕಿರುತೆರೆ ನಟಿ ನವ್ಯರವರಿಗೂ ಈ ಮಹಾಮಾರಿ ಅಂಟಿಕೊಂಡಿತ್ತು. ಇದರ ಬೆನ್ನಲ್ಲೆ ನಟನಿಗೂ ಈ ಹೆಮ್ಮಾರಿ ಬಂದು ಬಿಟ್ಟಿದೆ. ಅದು ನವ್ಯ ಜೊತೆ ನಟಿಸಿದ ನಟ ರವಿಕೃಷ್ಣರವರಿಗೆ. ಈ ಬಗ್ಗೆ ರವಿಕೃಷ್ಣ ಏನು ಹೇಳಿದ್ದಾರೆ ಗೊತ್ತಾ..? ನವ್ಯಗೆ ಈ ವಿಚಾರ ತಿಳಿಯುತ್ತಿದ್ದಂತೆ ಶೂಟಿಂಗ್ ಸೆಟ್ ನಲ್ಲಿ ಕುಸಿದು ಬಿದ್ದರು. ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳು ದೂರ ಹೋಗಲು ಪ್ರಾರಂಭಿಸಿದರು. ಇದರಿಂದ ನವ್ಯಗೆ ತುಂಬಾ ನೋವಾಯಿತು. ಆ ಕ್ಷಣ ಅವರ ಜೊತೆ ನಾನು ಮತ್ತು ನಿರ್ಮಾಪಕರು ಮಾತ್ರ ಇದ್ದೆವು. ಈಗ ನನಗೂ ಹೆಮ್ಮಾರಿ ಬಂದಿದೆ. ನನಗೂ ಮೊದಲು ತುಂಬಾ ಭಯವಾಗಿತ್ತು. ನಾನು ಬ್ಲ್ಯಾಂಕ್ ಆಗಿದೆ. ಆದರೆ ನವ್ಯರವರು ಇಷ್ಟೊಂದು ಸ್ಟ್ರಾಂಗ್ ಆಗಿರುವುದನ್ನು ನೋಡಿ ನನಗೂ ಧೈರ್ಯ ಬಂತು.

Advertisement


ನಾನು ಈಗ ಮೂರು ದಿನಗಳಿಂದ ಐಸೋಲೆಟ್ ಆಗಿರುವೆ. ನನ್ನ ಸಂಪರ್ಕದಲ್ಲಿ ಇದ್ದವರು ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ. ಮಹಾಮಾರಿ ಬಂದಿದೆ ಅಂತ ಯಾರನ್ನು ಕೀಳಾಗಿ ನೋಡಬೇಡಿ ಬದಲಾಗಿ ಅವರ ಪರ ನಿಂತುಕೊಳ್ಳಿ ನಾನು ಮಾನಸಿಕವಾಗಿ ಧೈರ್ಯವಾಗಿ ಇರಬೇಕು. ಧೈರ್ಯವಾಗಿಯೇ ಇದ್ದೇನೆ ಅಂತ ರವಿ ಕೃಷ್ಣ ತಿಳಿಸಿದ್ದಾರೆ. ಜೊತೆಗೆ ಅವರಿಗೆ ಇತರದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೆ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿರುವುದಾಗಿ ನಟ ರವಿಕೃಷ್ಣ ರವರು ತಿಳಿಸಿದ್ದಾರೆ.

Advertisement

– ಸುಷ್ಮಿತಾ

Advertisement

Advertisement
Share this on...