ಬೆಳೆಯುವವರೆಗೂ ಕನ್ನಡ ಬೇಕಿತ್ತು,ಈಗ ಬೇಡವೇ ? ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ಕಾಮಿಡಿ ಕಿಲಾಡಿ ನಯನ !

in ಮನರಂಜನೆ/ಸಿನಿಮಾ 841 views

ಒಂದು ಕಾಲವಿತ್ತು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ವೇದಿಕೆಗಳು ಸಿಗುತ್ತಿಲ್ಲ ಹೀಗೆ ಆದರೆ ಕಲಾವಿದರುಗಳ ಜೀವನ ಏನಾಗುತ್ತದೆ. ಒಳ್ಳೆಯ ಕಲಾವಿದರುಗಳು ಬೆಳಕಿಗೆ ಬರುತ್ತಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಸುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಕಿರುತೆರೆಯ ರಿಯಾಲಿಟಿ  ಕಾರ್ಯಕ್ರಮಗಳಲ್ಲಿ  ಭಾಗವಹಿಸಿದ ಅದೆಷ್ಟೋ ಪ್ರತಿಭೆಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.   ಈ ಸಾಲಿನಲ್ಲಿ ಕನ್ನಡದ ಜನಪ್ರಿಯ ವಾಹಿನಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಅನೇಕ ಕಲಾವಿದರುಗಳು ತಮ್ಮ ಬದುಕನ್ನೇ ಕಟ್ಟಿಕೊಂಡಿದ್ದಾರೆ. ಹೌದು ನವರಸ ನಾಯಕ ಜಗ್ಗೇಶ್, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮತ್ತು ರಕ್ಷಿತಾ ಅವರ ನೇತೃತ್ವದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಪ್ರತಿಭೆಗಳು  ಇದೀಗ ಬೆಳ್ಳಿ ಪರದೆಯಲ್ಲೂ ಮಿಂಚುತ್ತಿದ್ದಾರೆ. ಅನೇಕ ಕನಸುಗಳನ್ನು ಹೊತ್ತು ಬಂದ ಈ ಪ್ರತಿಭೆಗಳಿಗೆ  ಈ ವೇದಿಕೆಯಿಂದ ಒಳ್ಳೆಯ  ಅವಕಾಶ ಸಿಕ್ಕಿದ್ದು, ಶಿವರಾಜ್ ಕೆ ಆರ್ ಪೇಟೆ,  ನಯನ,  ಹೀಗೆ ಸಾಕಷ್ಟು ಕಿಲಾಡಿಗಳು ಚಿತ್ರರಂಗದಲ್ಲಿ ಬಿಝಿಯಾಗಿರುವುದು  ವಿಶೇಷ.

Advertisement

Advertisement

ಇನ್ನು ಕಾಮಿಡಿ ಕಿಲಾಡಿಗಳು ಸೀಸನ್ 1 ಕಾರ್ಯಕ್ರಮದಲ್ಲಿ  ಭಾಗವಹಿಸಿ ತಮ್ಮ ಅಮೋಘ ನಟನೆಯಿಂದ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದವರು  ನಯನ  ಅವರು.  ಕಾಮಿಡಿ ಕಿಲಾಡಿಗಳು  ಕಾರ್ಯಕ್ರಮದಲ್ಲಿ  ಭಾಗವಹಿಸಿದ ನಂತರ ನಯನ ಅವರು  ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿದರು . ಇದಕ್ಕಿಂತ ಹೆಚ್ಚಾಗಿ ಚಲನಚಿತ್ರಗಳಲ್ಲೂ ಕೂಡ ಅವಕಾಶವನ್ನು ಗಿಟ್ಟಿಸಿಕೊಂಡು ತೆರೆಯ ಮೇಲೂ ಕಾಮಿಡಿ ಕಮಾಲ್ ಮಾಡಿದ್ದಾರೆ ನಯನ ಅವರು. ಇನ್ನು ಕಾಮಿಡಿ ಕಿಲಾಡಿಗಳು ಎಂಬ ಕಿರುತೆರೆ ಕಾರ್ಯಕ್ರಮದ  ಮೂಲಕ ಅಪಾರ ಜನಪ್ರಿಯತೆನ್ನು ಪಡೆದುಕೊಂಡ ನಟಿ ನಯನ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುತ್ತಾರೆ. ಇದೀಗ ಒಂದಿಷ್ಟು  ಅಭಿಮಾನಿಗಳನ್ನು ಕೂಡ ಸಂಪಾದಿಸಿರುವ ಅವರು ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

Advertisement

Advertisement

 

ಫೇಸ್ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿರುವ  ನಯನ ಅವರು ಈ ಪೋಸ್ಟ್  ಗೆ ಇಂಗ್ಲೀಷ್ ನಲ್ಲಿ ಕ್ಯಾಪ್ಷನ್ ನೀಡಿದ್ದಾರೆ. ಇದರಿಂದ ಕೆಲವು ನೆಟ್ಟಿಗರ  ಬೇಸರಕ್ಕೆ ಕಾರಣವಾಗಿದ್ದು, ಅಕೆಯನ್ನು ತರಾಟೆಗೆ ತೆಗೆದುಕೊಂಡು, ಆ ಪೋಸ್ಟ್ ಗೆ ಕಮೆಂಟ್ ಮಾಡುತ್ತಿದ್ದಾರೆ.  ಅದರೆ ನಟಿ ನಯನ ವ್ಯಕ್ತಿಯೊಬ್ಬರು ಮಾಡಿದ ಕಾಮೆಂಟ್ ಗೆ ರಿಪ್ಲೈ ಮಾಡಿದ್ದು, ಆಕೆ ಕೊಟ್ಟ ಉತ್ತರ   ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ಬಹಳ ಸುಂದರವಾದಂತಹ ಫೋಟೋ ಶೂಟ್ ಮಾಡಿಸಿರುವ ನಟಿ ನಯನ, ಆ ಚಿತ್ರವನ್ನು ಹಂಚಿಕೊಂಡು,  ಅದಕ್ಕೆ  “ಅವರ ಜಗತ್ತನ್ನು ಹಗುರಗೊಳಿಸುವಷ್ಟು ಉದಾರವಾಗಿರಿ ಅವುಗಳನ್ನು ಬೆಚ್ಚಗಿಡಲು ಸಾಕಷ್ಟು ರೀತಿಯ ಮತ್ತು ಅವುಗಳನ್ನು ಸುಡುವಷ್ಟು ಪ್ರಬಲವಾಗಿದೆ” ಎಂದು ಇಂಗ್ಲೀಷಿನಲ್ಲಿ ಬರೆದುಕೊಂಡಿದ್ದಾರೆ. ಈ ಬರವಣೆಗೆಯೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು,’ನೀವು ಬೆಳೆಯುವವರೆಗೆ ಕನ್ನಡ ಬೇಕಾಗಿತ್ತು ಆದ್ಮೇಲೆ ಇಂಗ್ಲಿಷ್ ?” ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ‘ಕೊಬ್ಬು ಜಾಸ್ತಿ ‘ ಎಂದು ಮತ್ತೊಬ್ಬ ಕನ್ನಡ ಪ್ರೇಮಿ ಕಮೆಂಟ್ ಮಾಡಿದ್ದಾನೆ.


ಹೀಗೆ  ಸಾಕಷ್ಟು ಕನ್ನಡ ಪ್ರೇಮಿಗಳು ನಯನ ಅವರಿಗೆ ಪ್ರಶ್ನೆ ಮಾಡುತ್ತಿದ್ದು, ನಯನ ಕೊಟ್ಟಿರುವಂತಹ  ಉತ್ತರವನ್ನು  ನೋಡಿ  ಇದೀಗ ಕನ್ನಡಿಗರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಮಾಡಿರುವ ಕಮೆಂಟ್ ಗೆ   ಉತ್ತರಿಸಿರುವ   ನಯನ “ಅಪ್ಪಾ ಕನ್ನಡದ ಭಕ್ತ ಮುಚ್ಕೊಂಡ್ ಕೆಲಸ ನೋಡ್ಕೊ” ಎಂದು ಖಾರವಾಗಿ ಪ್ರತಿಕ್ರೆಯೆ ನೀಡಿದ್ದಾರೆ.  ಮತ್ತೊಬರಿಗೂ ಕೂಡ ಕಾರವಾಗಿಯೇ ಪ್ರತಿಕ್ರಿಯಿಸಿರುವ ಅವರು, ” ನೀನ್ ಏನ್ ಕನ್ನಡದಲ್ಲಿ ಕಮೆಂಟ್ ಮಾಡಿದ್ಯ. ಒಂದ್ ಕ್ಯಾಪ್ಶನ್ ಇಂಗ್ಲೀಷ್ ನಲ್ಲಿ ಹಾಕಿಬಿಟ್ರೆ  ಉಕ್ಕಿ ಬಂದ್ಬಿಡುತ್ತೇ ಇವರಿಗೆ ಕನ್ನಡ ಪ್ರೇಮ.. ನಿನ್ ಕೆಲ್ಸ ನೊಡ್ಕೋ”. ಎಂದು ಹೇಳಿದ್ದಾರೆ

ನಯನ ಅವರ ಈ ರೀತಿಯ ಉತ್ತರಕ್ಕೆ  ಕನ್ನಡಿಗರು ರೊಚ್ಚಿಗೆದ್ದಿದ್ದು, ಕಮೆಂಟ್ ಬಾಕ್ಸ್ ನಲ್ಲಿಯೇ ತಕ್ಕ ಉತ್ತರ ಕೊಟ್ಟಿದ್ದಾರೆ.

Advertisement
Share this on...