ಚೌಕಾಸಿ ಚಾರು ಆಗಿ ಮೋಡಿ ಮಾಡಿದ್ದ ಈಕೆ ಇಂದು ಗಿಣಿರಾಮನ ಬೆಡಗಿ!

in ಮನರಂಜನೆ/ಸಿನಿಮಾ 301 views

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಧಾರಾವಾಹಿ ಪಾಪಾ ಪಾಂಡು ಧಾರಾವಾಹಿಯಲ್ಲಿ ಪಾಂಡುವಿನ ಮಗ ಪುಂಡನ ಹೆಂಡತಿ ಚಾರುಲತಾ ಆಲಿಯಾಸ್ ಚೌಕಾಸಿ ಚಾರು ಆಗಿ ಅಭಿನಯಿಸಿ ವೀಕ್ಷಕರ ಮನ ರಂಜಿಸಿದ್ದ ಮುದ್ದು ಮುಖದ ಚೆಲುವೆ ಹೆಸರು ನಯನಾ. ಪಾಪಾ ಪಾಂಡುವಿನಲ್ಲಿ ಚಾರು ಆಗಿ ಮನ ಸೆಳೆದರುವ ನಯನಾ ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಉತ್ತರ ಕನ್ನಡ ಭಾಷೆಯ ಧಾರಾವಾಹಿ ಗಿಣಿರಾಮದಲ್ಲಿ ನಾಯಕಿ ಮಹತಿ ಆಗಿ ನಯನಾ ನಟಿಸುತ್ತಿದ್ದಾರೆ. ಬಯಸದೇ ನಟನಾ ಕ್ಷೇತ್ರಕ್ಕೆ ಬಂದಿರುವ ಈಕೆ ಇಂದು ಇಲ್ಲಿ ಬ್ಯುಸಿಯಾಗಿದ್ದಾರೆ. ಎಳವೆಯಿಂದಲೂ ತಾನೊಬ್ಬಳು ಸಿಂಗರ್ ಆಗಬೇಕೆಂಬುದು ನಯನಾ ಬಯಕೆಯಾಗಿತ್ತು. ಅದೇ ರೀತಿ ನಾಟಕಗಳಲ್ಲಿಯೂ ಆಕೆ ಹಾಡು ಹೇಳುವ ಮೂಲಕ ತನ್ನ ಕನಸನ್ನು ನನಸು ಮಾಡಲು ತಯಾರಿ ಮಾಡುತ್ತಿದ್ದರು. ಇದರ ಜೊತೆಗೆ ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿರುವ ನಯನಾ ಮುಂದೆ ರಿದಂಸ್ ಫೈನ್ ಆರ್ಟ್ಸ್‌ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದರು. ಅಲ್ಲಿ ವಿದ್ಯಾರ್ಥಿಗಳಿಗೆ ದೇಸಿ ಸಂಗೀತ ಹೇಳಿಕೊಡುತ್ತಿದ್ದರು.

Advertisement

Advertisement

ಅಷ್ಟರಲ್ಲಿ ನಯನಾ ಅವರಿಗೆ ಆಕ್ಸಿಡೆಂಟ್ ಆಗಿ ಕಾಲು ಫ್ಯಾಕ್ಟರ್ ಆಗಿ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುವಂತಾಯಿತು. ಆಗ ಕೆಲಸಕ್ಕೆ ಬಾಯ್ ಹೇಳಬೇಕಾದ ಪರಿಸ್ಥಿತಿಯು ಬಂದಿತ್ತು ಅನ್ನಿ! ರೆಸ್ಟ್ ಮಾಡುವ ಸಮಯದಲ್ಲಿ ಟಿವಿ ನೋಡುತ್ತಾ ಸಮಯ ಕಳೆಯುತ್ತಿದ್ದ ಆಕೆಗೆ ನಾನು ನಟಿಸಿದರೆ ಚೆನ್ನ ಎಂದೆನಿಸಿತು. ಕಾಲು ಫ್ಯಾಕ್ಟರ್ ಸರಿಯಾಗಿದ್ದೇ ತಡ ಮನೆಯವರ ಒಪ್ಪಿಗೆ ಪಡೆದು ನಟನಾ ಲೋಕಕ್ಕೆ ಜಿಗಿದರು.

Advertisement

ಶಾಂತಂ ಪಾಪಂ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ನಯನಾ ಮುಂದೆ ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ತದ ನಂತರ ಪಾಪಾ ಪಾಂಡುವಿನ ಚೌಕಾಸಿ ಚಾರು ಆಗಿ ಬದಲಾದ ನಯನಾಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ಇದೀಗ ಮಹತಿ ಆಗಿ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ನಯನಾ ನಟನೆಯ ಜೊತೆಗೆ ನಿರೂಪಕಿಯಾಗಿಯೂ ಕಾಣಿಸಿಕೊಂಡವರು. ಯೂ 2 ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಫಿಲ್ಮಿಭಾತ್ ಕಾರ್ಯಕ್ರಮದ ನಿರೂಪಕಿಯಾಗಿ ಆಕೆ ಗಮನ ಸೆಳೆದಿದ್ದರು.

Advertisement

ಇಂತಿಪ್ಪ ಚೆಲುವೆ ನಯನಾ ಆಕಸ್ಮಾತ್ತಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
– ಅಹಲ್ಯಾ

Advertisement
Share this on...