ನಯನತಾರಾಗೆ ಟಫ್ ಕಾಂಪಿಟೇಷನ್ ಕೊಡ್ತಾರಾ ಈ ನಟಿ !?

in ಮನರಂಜನೆ/ಸಿನಿಮಾ 76 views

ನಟಿ ನಯನತಾರಾ ಗ್ಲಾಮರ್ ನಟಿಯಾಗಿ ಚಿತ್ರೋದ್ಯಮಕ್ಕೆ ಪ್ರವೇಶಿಸಿದರೂ, ನಿಧಾನವಾಗಿ ತಾನು ಪ್ರತಿಭಾವಂತ ನಟಿ ಎಂಬುದನ್ನು ಸಾಬೀತುಪಡಿಸಿದರು. ಪ್ರಸ್ತುತ, ನಯನತಾರಾ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ನಾಯಕಿಯರಿಗೆ ಕಾಲಿವುಡ್ನಲ್ಲಿ ಅವರ ಸ್ಟಾರ್ಡಮ್ ಅನ್ನು ಮೀರಿಸಲು ಸಾಧ್ಯವಾಗಿರಲಿಲ್ಲ. ಆದರೆ ತ್ರಿಶಾ ಮುಂದಿನ ದಿನಗಳಲ್ಲಿ ನಯನತಾರಾಗೆ ಟಫ್ ಕಾಂಪಿಟೇಷನ್ ಕೊಡಲಿದ್ದಾರೆ ಎಂದು ತೋರುತ್ತಿದೆ.
ತಮಿಳು ಹುಡುಗಿ ತ್ರಿಶಾ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣದ ಹೆಚ್ಚಿನ ಸ್ಟಾರ್ ಹೀರೋಗಳೊಂದಿಗೆ ಕೆಲಸ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತ್ರಿಶಾ ಚಿತ್ರರಂಗದಿಂದ ಸ್ವಲ್ಪ ದೂರವಿದ್ದರು. ಆಕೆಯ ವೃತ್ತಿಜೀವನವು ಇಲ್ಲಿಗೆ ಮುಗಿಯಿತು ಎಂದು ಅನೇಕ ಜನರು ಭಾವಿಸಿದ್ದರು. ಆದರೆ ’96 ‘ ಚಿತ್ರ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದೆ. ಈ ಚಿತ್ರದ ಜಾನು ಪಾತ್ರ ಅವರ ನಿಜವಾದ ನಟನಾ ಸಾಮರ್ಥ್ಯವನ್ನು ತೋರಿಸಿದೆ. ತ್ರಿಶಾ ’96’ ಗಾಗಿ ಸುಮಾರು 12 ಪ್ರಶಸ್ತಿಗಳನ್ನು ಪಡೆದಿದ್ದು, ಈಗ ಮತ್ತೆ ಲೈಮ್ ಲೈಟ್’ನಲ್ಲಿದ್ದಾರೆ.

Advertisement

Advertisement

ಪ್ರಸ್ತುತ ತ್ರಿಶಾ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಮೂಲಗಳ ಪ್ರಕಾರ ಅವೆಲ್ಲವೂ ಆಸಕ್ತಿದಾಯಕ ಸ್ಕ್ರಿಪ್ಟ್ಗಳಾಗಿವೆ. ಪ್ರತಿಷ್ಠಿತ ಚಿತ್ರವೊಂದರಲ್ಲಿ ಮಲಯಾಳಂ ನಟ ಮೋಹನ್ ಲಾಲ್ ಅವರೊಂದಿಗೆ ನಟಿಸುವ ಬಂಪರ್ ಅವಕಾಶವನ್ನು ತ್ರಿಶಾ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರಕ್ಕೆ ‘ರಾಮ್’ ಎಂದು ಹೆಸರಿಡಲಾಗಿದ್ದು, ಶೂಟಿಂಗ್ ಪ್ರಗತಿಯಲ್ಲಿದೆ. ಕೊರೊನಾ ವೈರಸ್’ನಿಂದಾಗಿ ಎಲ್ಲಾ ಸ್ಟಾರ್’ಗಳು ಹೊರಬರಲು ಭಯಪಡುತ್ತಿರುವ ಈ ಸಮಯದಲ್ಲಿ, ತ್ರಿಶಾ ಧೈರ್ಯದಿಂದ ತನ್ನ ಚಿತ್ರಗಳ ಚಿತ್ರೀಕರಣಕ್ಕೆ ಮುಂದೆ ಬರುತ್ತಿರುವುದು ಕಾಲಿವುಡ್ ವಲಯಗಳಲ್ಲಿ ಬಿಸಿ ಬಿಸಿ ವಿಷಯವಾಗಿದೆ.

Advertisement

 

Advertisement


ಇತ್ತೀಚೆಗಷ್ಟೇ ತ್ರಿಶಾ ಚಿರಂಜೀವಿ ಮತ್ತು ಕೊರಟಾಲ ಶಿವ ಅವರ ‘ಆಚಾರ್ಯ’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಇದ್ದಕ್ಕಿದ್ದಂತೆ ತ್ರಿಶಾ ನಿರ್ಗಮಿಸಿದ್ದು, ಇದು ಭಾರೀ ಸುದ್ದಿ ಮಾಡಿತು. ಕೊನೆಗೆ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ಆದ ಪರಿಣಾಮ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು. ಕೊನೆಗೆ ಚಿರಂಜೀವಿ ಅವರು ತ್ರಿಶಾ ನಿರ್ಗಮನಕ್ಕೆ ಕಾರಣಗಳನ್ನು ತಿಳಿಸಿದರು. ಪ್ರಸ್ತುತ ತ್ರಿಶಾ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಕೂಡ ನಟಿಸುತ್ತಿದ್ದರಿಂದ ಪದೇ ಪದೇ ಡೇಟ್ ಕ್ಲಾಶ್ ಆಗುತ್ತಿದ್ದರಿಂದ ‘ಆಚಾರ್ಯ’ ಚಿತ್ರದಿಂದ ತ್ರಿಶಾ ಹೊರನಡೆದರು ಎಂದು ಚಿರಂಜೀವಿ ಸ್ಪಷ್ಟಪಡಿಸಿದ್ದರು.

Advertisement
Share this on...