ಎಫ್ಇಎಫ್ಎಸ್ಐಗೆ ಲೇಡಿ ಸೂಪರ್ ಸ್ಟಾರ್ ಕೊಟ್ಟ ದೇಣಿಗೆ ಎಷ್ಟು ಗೊತ್ತಾ?

in ಸಿನಿಮಾ 17 views

ಉಪೇಂದ್ರ ನಟನೆಯ ‘ಸೂಪರ್’ ಸಿನಿಮಾದಲ್ಲಿ ನಟಿಸಿದ್ದ ಲೇಡಿ ಸೂಪರ್ ಸ್ಟಾರ್ ನಯನಾ ತಾರಾ ಕೋವಿಡ್ 19 ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಚಲನಚಿತ್ರ ನೌಕರರ ಒಕ್ಕೂಟಕ್ಕೆ (ಎಫ್ಇಎಫ್ಎಸ್ಐ) ಇದೀಗ ದೇಣಿಗೆ ನೀಡಿದ್ದಾರೆ. ಅದು ಐದಲ್ಲ, ಹತ್ತಲ್ಲ ಸುಮಾರು 20 ಲಕ್ಷ ರೂ.ಗಳನ್ನು ನೀಡಿದ್ದಾರೆ.  ಬಹುಶಃ ಇದುವರೆಗೂ ಭಾರತದ ಯಾವ ನಟಿಯರು ಇಷ್ಟು ಮೊತ್ತದ ದೇಣಿಗೆಯನ್ನು ನೀಡಿಲ್ಲ. ಕಳೆದ ತಿಂಗಳು ರಜನಿಕಾಂತ್ ಎಫ್ಇಎಫ್ಎಸ್ಐಗೆ 50 ಲಕ್ಷ ರೂ ದೇಣಿಗೆ ನೀಡಿದ್ದನ್ನು ನಾವಿಲ್ಲಿ ಗಮನಿಸಬಹುದು.

Advertisement

 

Advertisement

Advertisement

 

Advertisement

ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ನಯನಾ ತಾರಾ , ಪ್ರತಿ ಚಿತ್ರಕ್ಕೆ 3 ಕೋಟಿ ರೂ.ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ.
ಸದ್ಯ ಶಿವಾ ನಿರ್ದೇಶನದ, ಸೂಪರ್ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರ ‘ ಅನ್ನಥೆ ‘ ನಲ್ಲಿ ನಯನಾ ತಾರಾ ನಟಿಸುತ್ತಿದ್ದರೆ. ಜೊತೆಗೆ ಸಮಂತಾ ಅಕ್ಕಿನೇನಿ ಮತ್ತು ವಿಜಯ್ ಸೇತುಪತಿ ಜೊತೆಯಾಗಿ ನಟಿಸಿರುವ ‘ಕಾಥುವಾಕುಲ ರೆಂಡು ಕಡಲ್’ ಎಂಬ ಮುಂದಿನ ತ್ರಿಕೋನ ಪ್ರೇಮ ಚಿತ್ರದಲ್ಲೂ ನಯನಾ ತಾರ ನಟಿಸುತ್ತಿದ್ದಾರೆ.

 

 

ಇನ್ನು ನಯನಾ ತಾರಾ ವೃತ್ತಿ ವಿಚಾರಕ್ಕೆ ಬರುವುದಾದರೆ ಆಕೆ ಎಂದಿಗೂ ಚಲನಚಿತ್ರ ಪ್ರಚಾರಗಳಿಗೆ ಹಾಜರಾಗುವುದಿಲ್ಲ. ಚಲನಚಿತ್ರ ಮಾರಾಟಕ್ಕೂ ಸಹಾಯ ಮಾಡುವುದಿಲ್ಲ, ನಿರ್ಮಾಪಕರು ತನಗಾಗಿ ಹಣವನ್ನು ಹೂಡಲು ಸಿದ್ಧರಾಗಿದ್ದಾರೆ ಎಂಬ ರೀತಿಯ ವ್ಯಾಮೋಹವನ್ನು ಅವರು ಬೆಳೆಸಿಕೊಂಡಿದ್ದಾರೆ.  ಮುಂಬರುವ ಚಿತ್ರ, ಅನ್ನಥೆ (ತಾತ್ಕಾಲಿಕವಾಗಿ ತೆಲುಗಿನಲ್ಲಿ ಅನ್ನಯ್ಯ ಎಂದು ಹೆಸರಿಸಲಾಗಿದೆ) ಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುತ್ತಿರುವ ನಯನತಾರಾ, ಈ ಚಿತ್ರಕ್ಕೆ ಸಂಭಾವನೆ ತೆಗೆದುಕೊಳ್ಳುವ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ.

 

 

ರಜನಿ ಅವರ ಹಿಂದಿನ ಚಿತ್ರ ಎ.ಆರ್.ಮುರುಗದಾಸ್ ‘ದರ್ಬಾರ್’ನಲ್ಲಿ ಅವರ ಪಾತ್ರವು ತುಂಬಾ ಚಿಕ್ಕದಾಗಿದ್ದರೂ, ಆಕೆಯ ಸಂಭಾವನೆ ಸುಮಾರು 5.5 ಕೋಟಿ ರೂ. ಇತ್ತು. ಆದರೆ ಈಗ ಸನ್ ಪಿಕ್ಚರ್ಸ್ ಅನ್ನಥೆ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಯೋಜನೆ ಒಂದು ಕೋಟಿ ಕಡಿಮೆ ವೆಚ್ಚದಲ್ಲಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಹೊಸ ಚಿತ್ರಕ್ಕೆ ನಯನತಾರಾ ಸುಮಾರು 10.5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ, ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಪ್ರೊಡಕ್ಷನ್ ಹೌಸ್ನ ಕೆಲವು ಮೂಲಗಳು ತಮಿಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿವೆ.

 

 

ದರ್ಬಾರ್ಗಾಗಿ ಲೈಕಾ ಪ್ರೊಡಕ್ಷನ್ಸ್ನಿಂದ ಆಕೆ ತೆಗೆದುಕೊಂಡಿದ್ದಕ್ಕಿಂತ 20% ಕಡಿಮೆ ಸಂಭಾವನೆ ‘ಅನ್ನಥೆ’ಗೆ ತೆಗೆದುಕೊಂಡಿದ್ದಾರೆ ಎಂದು ಅವರು ಸುಳಿವು ನೀಡಿದ್ದಾರೆ. ಇಂತಹ ರಿಯಾಯಿತಿಯನ್ನು ನೀಡಿದ ನಂತರವೂ, ನಯನತಾರಾ ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದಾರೆ.

Advertisement
Share this on...