ನಿಜವಾಗಿಯೂ ಹಾಲಿನಂತ ಸಂಸಾರಕ್ಕೆ ಹುಳಿ ಹಿಂಡಿದ್ದು ನಯನತಾರನಾ?

in ಸಿನಿಮಾ 33 views

ದಕ್ಷಿಣ ಭಾರತದ ಸಿನಿ ಪ್ರಿಯರಿಗೆ ನಟ ಪ್ರಭುದೇವ ಹಾಗೂ ಖ್ಯಾತ ನಟಿ ನಯನತಾರಾ ಅವರ ಪ್ರೇಮ ಪುರಾಣದ ಬಗ್ಗೆ ತಿಳಿದಿರುತ್ತದೆ.ಇದೀಗ ನಯನತಾರಾ ಅವರು ಹೇಗೆ ತಮ್ಮ ಸಂಸಾರಕ್ಕೆ ಕಿಚ್ಚು ಹಚ್ಚಿದ್ದರು ಎಂಬುವಂತಹ ಕುತೂಹಲಕಾರಿ ವಿಷಯವನ್ನು ಪ್ರಭುದೇವ ಅವರ ಮಾಜಿ ಪತ್ನಿ ರಾಮಲತಾ ಅವರು ಇದೀಗ ಹೇಳಿಕೊಂಡಿದ್ದಾರೆ.

Advertisement

 

Advertisement

Advertisement

 

Advertisement

ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಖ್ಯಾತ ನಟಿ ನಯನತಾರಾ ಅವರ ಲವ್ ಸ್ಟೋರಿಸ್ ಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೌದು ಖ್ಯಾತ ನಟ ಸಿಂಬು ಅವರ ಜೊತೆ ಕೂಡ ಇವರ ಹೆಸರು ಕೇಳಿಬಂದಿತ್ತು. ಅದರಲ್ಲೂ ನಟ ನಿರ್ದೇಶಕ ಹಾಗೂ ನೃತ್ಯ ಸಂಯೋಜಕರಾದಂತಹ ಪ್ರಭುದೇವ ಅವರ ಜೊತೆಗಿನ ಪ್ರೇಮ ಪುರಾಣದ ಕುರಿತಾಗಿ ಈ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ಧಿಗಳು ಕೇಳಿಬಂದಿದೆ.

 

 

ಅದೊಂದು ಸಮಯದಲ್ಲಿ ಪ್ರಭುದೇವ ಮತ್ತು ನಯನತಾರಾ ಅವರು ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದು, ವಿವಾಹವಾಗಬೇಕು ಎಂದುಕೊಂಡಿದ್ದರು ನಯನತಾರಾ ಅವರ ಮೇಲಿನ ಅತಿಯಾದ ಪ್ರೀತಿಯಿಂದ ನಟ ಪ್ರಭುದೇವ ಅವರು ಈಗಾಗಲೇ ವಿವಾಹವಾಗಿದ್ದ ಮೊದಲ ಪತ್ನಿ ರಮಲತಾ ಅವರಿಗೆ ವಿಚ್ಛೇದನವನ್ನು ಸಹ ಕೊಟ್ಟುಬಿಟ್ಟರು. ಆದರೆ ಕೊನೆ ಕ್ಷಣದಲ್ಲಿ ನಟಿ ನಯನತಾರಾ ಹಾಗೂ ಪ್ರಭುದೇವ ಅವರು ಕೆಲವೊಂದು ವೈಯಕ್ತಿಕ ಕಾರಣದಿಂದ ಇಬ್ಬರು ಬೇರೆಯಾಗಿ ಬಿಟ್ಟರು.ಆದರೆ ಈ ವಿಚಾರ ಇದೀಗ ಎಲ್ಲಾ ಸಿನಿ ಪ್ರಿಯರು ಮರೆತು ಹೋಗಿದ್ದು ಪ್ರಭುದೇವ ಅವರು ತಮ್ಮ ಪಾಡಿಗೆ ಸಿನಿಮಾದಲ್ಲಿ ನಿರತರಾಗಿದ್ದಾರೆ.

 

 

ಆದರೆ ಪತ್ನಿ ರಮಲತಾ ಅವರು ಮಾತ್ರ ಸುಮ್ಮನೆ ಕುಳಿತಿಲ್ಲ. ತಮ್ಮ ಪತಿಯಿಂದ ದೂರವಾದ ನಂತರವೂ ತಮ್ಮ ಸಂಸಾರಕ್ಕೆ ಹುಳಿ ಹಿಂಡಿದ್ದು ನಯನತಾರ ಎಂದು ಎಲ್ಲ ಕಡೆ ಹೇಳಿಕೊಂಡು ಓಡಾಡುತ್ತಿದ್ದಾರೆ. ತನ್ನ ಸಂಸಾರಕ್ಕೆ ಕಿಚ್ಚು ಹಚ್ಚಿದಂತಹ ನಯನತಾರಾ ಕೈಗೆ ಸಿಕ್ಕರೆ ಸಾಯಿಸುವಷ್ಟು ಸಿಟ್ಟು ನನಗಿದೆ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

 

 

ಪ್ರಭುದೇವ ಮತ್ತು ರಮಲತಾ ಅವರದ್ದು ಕೂಡ ಪ್ರೇಮ ವಿವಾಹ. ಮುಸಲ್ಮಾನ ಧರ್ಮವಾಗಿದ್ದ ರಮಲತಾ ಅವರು ಪ್ರಭುದೇವ ಅವರ ಮೇಲಿನ ಪ್ರೀತಿಯಿಂದಾಗಿ ತಮ್ಮ ಧರ್ಮವನ್ನೇ ಬದಲಾಯಿಸಿಕೊಂಡಿದ್ದರು. ನಂತರ ೧೯೯೫ ರಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾದ ಈ ಜೋಡಿ ಸುಮಾರು ಹದಿನೈದು ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸುತ್ತಿದ್ದರು. ಅದಾಗಲೇ ನೋಡಿ ಪ್ರಭುದೇವ ಅವರ ಜೀವನದಲ್ಲಿ ಲೇಡಿ ಸೂಪರ್ ಸ್ಟಾರ್ ನಯನಾತಾರಾ ಎಂಟ್ರಿ ಕೊಟ್ಟಿದ್ದು. ಅವರು ಎಂಟ್ರಿ ಆಗಿದ್ದೇ ಆಗಿದ್ದು ಗಂಡ ಹೆಂಡತಿ ಇಬ್ಬರ ನಡುವೆ ಮನಸ್ತಾಪ ಮತ್ತು ಜಗಳಗಳು ಪ್ರಾರಂಭವಾಗತೊಡಗಿದವು.ಆ ಸಮಯದಲ್ಲಿ (೨೦೦೮) ಪ್ರಭುದೇವ ಅವರ ಮಗ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಸಾವನ್ನಪ್ಪುತ್ತಾನೆ.

 

 

ಗಂಡ ಹೆಂಡತಿ ನಡುವೆ ಜಗಳಗಳು ದಿನೇ ದಿನೇ ಹೆಚ್ಚಾಗಿದ್ದು ಪ್ರಭುದೇವ ಅವರು ರಮಲತಾ ಅವರಿಗೆ ೨೦‍೧೧ ರಲ್ಲಿ ವಿಚ್ಛೇದನವನ್ನು ನೀಡಿಬಿಡುತ್ತಾರೆ . ನಂತರ ನಯನತಾರ ಅವರ ಜೊತೆಗೆ ಕೂಡ ಮನಸ್ತಾಪಗಳು ಹೆಚ್ಚಾಗಿ ಅವರಿದಂಲೂ ಕೂಡ ದೂರ ಉಳಿಯುತ್ತಾರೆ ಪ್ರಭುದೇವ.ಆದರೆ ಪತ್ನಿ ರಮಲತಾ ಅವರು ಇಂದಿಗೂ ಕೂಡ ತಮ್ಮ ದಾಂಪತ್ಯ ಜೀವನ ಮುರಿದು ಬೀಳಲು ನಯನಾತಾರಾ ಅವರೇ ಕಾರಣ. ಹದಿನೈದು ವರ್ಷಗಳ ಕಾಲ ನನ್ನ ಗಂಡ ನನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದರು. ಆದರೆ ನಯನತಾರ ಬಂದ ನಂತರ ಎಲ್ಲವು ಬದಲಾಗಿ ಅವರು ನನ್ನನ್ನು ತ್ಯಜಿಸಿದರು ಎಂದು ನೊಂದುಕೊಳ್ಳುತ್ತಿದ್ದಾರೆ.

Advertisement
Share this on...