ನಯನತಾರ ಅವರಿಗೆ ಯಾವ ಹೋಟೆಲ್ ನಲ್ಲೂ ರೂಂ ಕೊಡುವುದಿಲ್ಲವಂತೆ ! ಯಾಕೆ ಗೊತ್ತಾ?

in ಮನರಂಜನೆ/ಸಿನಿಮಾ 481 views

ಮೂಲತಃ ಬೆಂಗಳೂರಿನಲ್ಲಿ ಜನಿಸಿದವರು ನಟಿ ನಯನತಾರಾ, ದಶಕಗಳಿಂದ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮೆರೆಯುತ್ತಿದ್ದಾರೆ. ಬೋಲ್ಡ್ ಪಾತ್ರಗಳು, ಮಹಿಳಾ ಪ್ರಧಾನ ಪಾತ್ರಗಳು, ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸುತ್ತ ಟಾಪ್ ನಟಿಯಾಗಿ ಮಿಂಚುತ್ತಿರುವ ನಯನ ತಾರಾ, ಈಗಲೂ ಕೂಡ ನಿರ್ಮಾಪಕ ನಿರ್ದೇಶಕರ ನೆಚ್ಚಿನ ನಟಿ. ಕನ್ನಡ ,ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಈ ನಟಿ , ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ..ಆಕೆಯ ನಯನ, ದುಂಡು ಮುಖ , ತುಟಿ ಹಾಗೂ ಮೂಗಿನ ಮಧ್ಯ ಇರುವ ಮಚ್ಚೆ , ಉದ್ದ ಜೆಡೆ , ಅಬ್ಬಾ ಇವೆಲ್ಲವನ್ನೂ ನೋಡುತ್ತಿರುವ ಅಭಿಮಾನಿಗಳು ‘ನೋಡವಳಂದಾವ ಮೊಗ್ಗಿನ ಮಾಲೆ ಚೆಂದವ’ ಎಂದು ಹಾಡನ್ನು ಹಾಡುತ್ತಿದ್ದಾರೆ.ಅವರು ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳು ಅಪಾರ. ಒಂದು ಸಿನಿಮಾದಲ್ಲಿ ಅರೆಬರೆ ಬಟ್ಟೆಯನ್ನು ಧರಿಸುತ್ತಾ ಹಾಟ್ ಆಗಿ ಕಾಣಿಸಿಕೊಂಡರೆ , ಮತ್ತೊಂದು ಸಿನಿಮಾದಲ್ಲಿ ಕೌಟುಂಬಿಕ ಹಾಗೂ ನಿಷ್ಠ ಅಧಿಕಾರಿಯಾಗಿ ಅಭಿನಯಿಸುತ್ತಾರೆ.ಇದೇ ಕಾರಣಕ್ಕೆ ತಮಿಳು ಚಿತ್ರರಂಗದಲ್ಲಿ ಇವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತದೆ. ಇವರ ಸಿನಿಮಾಗಳಿಗೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಾ ಇರುತ್ತಾರೆ. ಮತ್ತು ನಯನತಾರಾ ಅಂದರೆ ತಮಿಳುನಾಡಿನ ಜನತೆಗೆ ಬಹಳ ಅಚ್ಚುಮೆಚ್ಚು.

Advertisement

 

Advertisement

Advertisement

ಬರೀ ಸಿನಿಮಾ ವಿಚಾರದಲ್ಲಿ ಮಾತ್ರ ಸುದ್ದಿಯಲ್ಲಿರದ ನಟಿ ನಯನ ತಾರಾ, ತಮ್ಮ ವೈಯಕ್ತಿಕ ಜೀವನದಲ್ಲೂ ಕೂಡ ಜನಗಳ ಬಾಯಲ್ಲಿ ಮಾತನಾಡಿಕೊಳ್ಳುವಂತೆ ಸುದ್ದಿಯಾಗಿರುತ್ತಾರೆ.ಈ ಹಿಂದೆ ಪ್ರಭುದೇವ ಅವರ ಜೊತೆ ರಿಲೇಷನ್ ಶಿಪ್ ನಲ್ಲಿ ಇದ್ದ ಇವರು ನಂತರ ಬ್ರೇಕಪ್ ಮಾಡಿಕೊಂಡರು. ತದನಂತರ ಇದೀಗ ಮತ್ತೊಬ್ಬರ ಜೊತೆಗೆ ಲವ್ವಿ ಡವ್ವಿ ಯಲ್ಲಿರುವ ಅವರು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗವಾಗಿ ತಿಳಿಸಿದ್ದಾರೆಇನ್ನು ನಯನತಾರ ಅವರು ಶ್ರೀ ರಾಮ ರಾಜ್ಯಂ ಚಿತ್ರದಲ್ಲಿನ ಸೀತಾ ಅವರ ಪಾತ್ರಕ್ಕೆ ಅತ್ಯುತ್ತಮ ತೆಲುಗು ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಅತ್ಯುತ್ತಮ ನಟಿಗಾಗಿ ನಂದಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ತಮಿಳು ಚಿತ್ರವಾದ ರಾಜಾ ರಾಣಿ ಮತ್ತು ನಾನು ರೌಡಿ ಧನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ತಮಿಳು ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Advertisement

 

ಇನ್ನು ತಮಿಳುನಾಡಿನಲ್ಲಿ ಪ್ರಭುದೇವ ಅವರ ಜೊತೆಗಿನ ಪ್ರೇಮ ಕಹಾನಿ ತಾರಕ್ಕಕೇರಿತ್ತು. ಅಲ್ಲದೇ ಪ್ರಭುದೇವ ಅವರ ಪತ್ನಿ ನಯನತಾರ ಅವರನ್ನು ಮದುವೆಯಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದರು. ತಮಿಳು ಸಂಸ್ಕೃತಿಯನ್ನು ಹೀನಾಯಗೊಳಿಸಿದಳೆಂದು ನಯನತಾರಾ ವಿರುದ್ಧ ಹಲವಾರು ಮಹಿಳಾ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದವು ಮತ್ತು ಅವಳ ಒಂದು ಪ್ರತಿಕೃತಿಯನ್ನು ಸುಟ್ಟುಹಾಕಿದ್ದರು. ಇದೆಲ್ಲದರಿಂದ ಬೇಸತ್ತ ನಯನತಾರ 2012 ರಲ್ಲಿ, ಪ್ರಭುದೇವರೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿರುವುದಾಗಿ ದೃಢಪಡಿಸಿದರು..

 

ಇದೀಗ ನಯನತಾರ ಅವರು ನಿರ್ದೇಶಕ ವಿಘ್ನೇಶ್ ಶಿವನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ನಾನುಮ್ ರೌಡಿ ಥಾನ್ನಲ್ಲಿ ಕೆಲಸ ಮಾಡಿದ್ದಾರೆ. ಸಿಂಗಪುರದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಅಧಿಕೃತವಾಗಿ ತಮ್ಮ ಸಂಬಂಧವನ್ನು ಖಚಿತ ಪಡಿಸಿದ್ದಾರೆ.ಇದೀಗ ನಯನತಾರಾ ಚಿತ್ರೀಕರಣಕ್ಕಾಗಿ ಎಲ್ಲಿಗಾದರು ಹೋದರೆ ಅಲ್ಲಿಯ ಹೋಟೆಲ್ ಮಾಲೀಕರು ಅವರಿಗೆ ರೂಂ ನೀಡಲು ಹಿಂದೇಟು ಹಾಕುತ್ತಿದ್ದಾರಂತೆ.

 


ಕಾರಣವೇನೆಂದರೆ ನಯನತಾರ ಅವರು ಮಹಾನ್ ಕೋಪಿಷ್ಠೆ ಮತ್ತು ಮುಂಗೋಪಿ.ಕೋಪ ಬಂದರೆ ಸಾಕು ಹೋಟೆಲ್ ನಲ್ಲಿ ಇರುವ ವಸ್ತುಗಳ ಮೇಲೆ ತೋರಿಸುತ್ತಾರಂತೆ. ಹೋಟೆಲ್ ನ ಪೀಠೋಪಕರಣಗಳು, ಅಕ್ವೇರಿಯಂ ಇನ್ನೂ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಜಖಂಗೊಳಿಸುತ್ತಾರಂತೆ. ಇದರಿಂದಾಗಿ ಹೋಟೆಲ್ ಮಾಲೀಕರು ರೂಂ ನೀಡಲು ಹಿಂಜರಿಯುತ್ತಿದ್ದಾರಂತೆ.

Advertisement
Share this on...